Thursday 7 July 2016

ಭೂಮಿಯಿಂದ ಬರುತ್ತಿದೆ ಮಿಥೇನ್‌ ಗ್ಯಾಸ್‌, ಬೆಂಕಿ: ಬೆಚ್ಚಿದ ಜನರು

 ಬೆಂಗಳೂರು: ಬೆಳ್ಳಂದೂರು ಕೆರೆಯ ಬೆಂಕಿ ತಣ್ಣಗಾಗುವಷ್ಟರಲ್ಲೇ ಲಕ್ಷ್ಮೀಪುರ ಕಲ್ಲು ಗಣಿಗಾರಿಕೆ ಕ್ವಾರಿ ಬಳಿ ಭೂಮಿಯಿಂದ ಉಗುಳುತ್ತಿರುವ ಬೆಂಕಿ ನಗರವನ್ನು ಬೆಚ್ಚಿ ಬೀಳಿಸಿದೆ.ಆನೇಕಲ್‌ ತಾಲೂಕಿನ ಲಕ್ಷ್ಮೀಪುರದಲ್ಲಿ ನೆಲದ ಪದರದೊಳಗೆ ಮಿಥೇನ್‌ ಅನಿಲ ಹರಡಿದ್ದು, ನೆಲ ಬಿರುಕು ಬಿಟ್ಟಿರುವ ಕಡೆಗಳೆಲ್ಲಾ ಗ್ಯಾಸ್‌ ಹೊರಬಂದು ಬೆಂಕಿಯಾಗುತ್ತಿದೆ. ಇದರಿಂದ ಆತಂಕಗೊಂಡಿರುವ ಸ್ಥಳೀಯರು ಹೊರಬರುತ್ತಿರುವ ಅನಿಲಕ್ಕೆ ಬೆಂಕಿ ಹಚ್ಚಿ ಅದನ್ನೇ ಅಡುಗೆ ಒಲೆ ಮಾಡಿಸಿಕೊಂಡು ಅನ್ನ
ಬೇಯಿಸುವ ಮೂಲಕ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಇದಿಷ್ಟೂ ಸಮಸ್ಯೆಗೆ ಕಾರಣವಾಗಿ ರುವುದು 2012ರಿಂದ ಬಿಬಿಎಂಪಿ ಅವೈಜ್ಞಾನಿ ಕವಾಗಿ ಮಾಡುತ್ತಿರುವ ಕಸ ವಿಲೇವಾರಿ. ಬಿಬಿಎಂಪಿ ಕಸ ಸಂಸ್ಕರಣೆ ಮಾಡದೆ ಕಲ್ಲು ಕ್ವಾರಿ ಯಲ್ಲಿ ಸುರಿಯುತ್ತಿದ್ದು, ಇದರಿಂದ ಮಣ್ಣಿನ ಪದರ ಮುಚ್ಚಿಹೋಗಿದೆ. ಇದೀಗ ಕಸದ ಒಳಭಾಗದಲ್ಲಿ ರಾಸಾಯನಿಕ ಪ್ರಕ್ರಿಯೆ ಉಂಟಾಗಿ ಮಿಥೇನ್‌ ಅನಿಲ ಹೊರಬರುತ್ತಿದೆ. ಪರಿಣಾಮ ಭೂಮಿಯೊಳಗಿನ ನೀರು ಇದ್ದಕ್ಕಿದ್ದಂತೆ ಬಿಸಿಯಾಗುವುದು, ನೀರಿನ ಮೇಲೆ ಸಣ್ಣ ಸಣ್ಣ ನೀರಿನ ಬುಗ್ಗೆಗಳು ಉಂಟಾಗುವುದು, ಅದರ ಮೇಲೆ ಪೇಪರ್‌ನಂತಹ ವಸ್ತುವಿಟ್ಟರೆ ಥಟ್ಟನೆ ಬೆಂಕಿ ಹೊತ್ತಿಕೊಂಡು ಉರಿಯುವುದು ಸೇರಿದಂತೆ ಆಶ್ಚರ್ಯಕರ ಘಟನೆಗಳು ನಡೆಯುತ್ತಿವೆ. ಇದರಿಂದಾಗಿ ಸುತ್ತಮುತ್ತಲಿನ ಜನರು ಆತಂಕಕ್ಕೊಳಗಾಗಿದ್ದಾರೆ.

ಅವೈಜ್ಞಾನಿಕ ವಿಲೇವಾರಿ: ಬಿಬಿಎಂಪಿಯು ವಿವಿಧೆಡೆ ಹೊಂದಿರುವ ಲ್ಯಾಂಡ್‌μಲ್‌ ಗಳಂತೆ ಲಕ್ಷ್ಮೀಪುರದ ನಿಷೇಧಿತ 7 ಎಕರೆ ಕಲ್ಲುಗಣಿಯಲ್ಲಿ ನಗರದ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ, ಯಾವುದೇ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದ ಹಿನ್ನೆಲೆಯಲ್ಲಿ ಐದು ತಿಂಗಳ ಹಿಂದೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಕಸ ಸಾಗಣೆ ನಿಲ್ಲಿಸಿದ್ದರು. ಆ ಬಳಿಕ ಅಲ್ಲಿರುವ ತ್ಯಾಜ್ಯವನ್ನು ಪ್ರತ್ಯೇಕ ಸಂಸ್ಕರಣಾ ಘಟಕ ಸ್ಥಾಪಿಸಿ ವಿಲೇವಾರಿ ಮಾಡುವುದಾಗಿ ಹೇಳಿದ್ದ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಸಾವಿರಾರು ಟನ್‌ ತ್ಯಾಜ್ಯ ಮಣ್ಣು ಮುಚ್ಚಿದ ಸ್ಥಿತಿಯಲ್ಲೇ ಇದೆ. ಇದೀಗ ತ್ಯಾಜ್ಯ ಕೊಳೆತು ರಸಾಯನಿಕ ಪ್ರಕ್ರಿಯೆ ಉಂಟಾಗಿ ಮಿಥೇನ್‌ ಅನಿಲ ಉತ್ಪತ್ತಿಯಾಗುತ್ತಿದೆ. ಅದು ಹೊರಬರಲು ಕಸದ ಪದರ ಅಡ್ಡವಿರುವ ಕಾರಣ ನೆಲದ ಪದರ ಹೊಕ್ಕಿದ್ದು ಅವಕಾಶ ಸಿಕ್ಕಲ್ಲೆಲ್ಲಾ ಹೊರಬರುತ್ತಿದೆ.

ಮಿಥೇನ್‌ ಅನಿಲದ ಒತ್ತಡ ಹೆಚ್ಚಾದಂತೆ ಕೊಳವೆ ಬಾವಿ, ಬಿರುಕು ಮತ್ತಿತರ ಮೂಲಗಳಿಂದ ಅನಿಲ ಹೊರಬರುತ್ತಿದೆ. ಮಳೆಯಿಂದಾಗಿ ಕೆಲವು ಹೊಂಡಗಳಲ್ಲಿ ನೀರು ನಿಂತಿದ್ದು, ಅಂತಹ ಕಡೆಗಳಲ್ಲಿ ನೀರಿನ ಬುಗ್ಗೆಗಳಾಗಿ ಮಿಥೇನ್‌ ಅನಿಲ ಹೊರಹೊಮ್ಮುತ್ತಿದೆ. ಅಂತಹ ಕಡೆಗಳಲ್ಲಿ ಬೆಂಕಿ ತಾಗಿಸಿದರೆ ದಗ್ಗನೆ ಹೊತ್ತಿಕೊಂಡು ಉರಿಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಅಡುಗೆ ಮಾಡಿ ಪ್ರತಿಭಟನೆ
ಆರಂಭದಲ್ಲಿ ಬೆಂಕಿ ಹಾಗೂ ಅನಿಲ ಸೃಷ್ಟಿಸುತ್ತಿದ್ದಅವಾಂ ತರಗಳಿಗೆ ಬೆಚ್ಚಿದ್ದ ಜನರು ಬಳಿಕ ಯಾವುದೇ ಅಪಾಯ ಇಲ್ಲ ಎಂದು ಭಾವಿಸಿ ಸುಮ್ಮನಾಗಿದ್ದರು. ಇದೀಗ ನೀರು ಬಿಸಿಯಾಗುವುದು ಹಾಗೂ ಬೆಂಕಿ ಕಾಣಿಸಿಕೊಳ್ಳುವುದು ಕ್ರಮೇಣ ಜಾಸ್ತಿಯಾಗುತ್ತಿದೆ. ಇದರಿಂದ ಅಗ್ನಿ ಕುಂಡದ ಮೇಲೆ ವಾಸ ಮಾಡುತ್ತಿರುವ ಅನುಭವ ಪಡೆದ ಸಾರ್ವಜನಿಕರು ಸಿಡಿದೆದ್ದಿದ್ದಾರೆ. ರಸ್ತೆಗಳಲ್ಲಿ ಕಲ್ಲಿನ ಒಲೆ ಮಾಡಿ ಅನಿಲದಿಂದ ಹೊರಬರುವ ಬೆಂಕಿಯಲ್ಲಿ ಅಡುಗೆ ಮಾಡುವ ಮೂಲಕ ಬಿಬಿಎಂಪಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈವರೆಗೆ ತ್ಯಾಜ್ಯ ಸಮಸ್ಯೆಯಿಂದಲೇ ಆರು ಮಂದಿ ಮೃತರಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.



ಜನಪ್ರತಿನಿಧಿಗಳ ಭರವಸೆ
ಶಾಸಕ ಎಂ. ಕೃಷ್ಣಪ್ಪ, ಬಿಬಿಎಂಪಿ ಅಧಿಕಾರಿಗಳು ಹಾಗೂ ರಾಸಾಯನಿಕ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಸಕರು, ನೈಸರ್ಗಿಕ ಕಾರಣಗಳಿಂದಾಗಿ ಸಮಸ್ಯೆ ಉಂಟಾಗಿದೆ. ಸಮಸ್ಯೆ ಉಲ್ಬಣವಾಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.ಈ ಬಗ್ಗೆ ತಜ್ಞರ ಸಲಹೆ ಪಡೆಯಲಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಸಮಸ್ಯೆ ನಿಯಂತ್ರಣಕ್ಕೆ ಕ್ರಮ ವಹಿಸಲಿದ್ದಾರೆ ಎಂದು ಭರವಸೆ ನೀಡಿದರು.

ತಾತ್ಕಾಲಿಕ ಪರಿಹಾರ
 ಘಟನೆ ಬಳಿಕ ಸ್ಥಳಕ್ಕೆ ಧಾವಿಸಿದ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಮುನಿರಾಜು ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಕಾರ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ಜೆಸಿಬಿಗಳ ಮೂಲಕ ತ್ಯಾಜ್ಯ ಶೇಖರಣೆಯಾಗಿರುವ ಜಾಗದ ಸುತ್ತ 12 ಕಡೆ ನೆಲ ಅಗೆದು, ಪೈಪ್‌ ಅಳವಡಿಸಿ ಭೂಮಿಯೊಳಗೆ ಶೇಖರಣೆಯಾಗಿರುವ ಮಿಥೇನ್‌ ಅನಿಲ ಹೊರ ಹಾಕುವ ಕೆಲಸ ಮಾಡಲಾಯಿತು.  ಜತೆಗೆ, ನೀರಿನ ಮೂಲಕ ಬುಗ್ಗೆಗಳಾಗಿ ಹೊರಬರುತ್ತಿರುವ ಮಿಥೇನ್‌ ಹೆಚ್ಚು ಸಮಸ್ಯೆ ಸೃಷ್ಟಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ದ್ರಾವಣ ಸಿಂಪಡಿಸಲಾಯಿತು.

ಆಗುತ್ತಿರುವುದೇನು?

ಲಕ್ಷ್ಮೀಪುರದ ಬಿಬಿಎಂಪಿ ಲ್ಯಾಡ್‌ μಲ್‌ನಲ್ಲಿ ತ್ಯಾಜ್ಯ ಕೊಳೆತು ರಸಾಯನಿಕ ಪ್ರಕ್ರಿಯೆ ಉಂಟಾಗಿ ಮಿಥೇನ್‌ ಅನಿಲ ಉತ್ಪತ್ತಿಯಾಗುತ್ತಿದೆ. ಅದು ಹೊರಬರಲು ಕಸದ ಪದರ ಅಡ್ಡವಿರುವ ಕಾರಣ ನೆಲದ ಪದರ ಹೊಕ್ಕಿದ್ದು ಕೊಳವೆ ಬಾವಿ, ಬಿರುಕು ಮತ್ತಿತರ ಮೂಲಗಳಿಂದ ಅನಿಲ ಹೊರಬರುತ್ತಿದೆ. ಮಳೆಯಿಂದಾಗಿ ಕೆಲವು ಹೊಂಡಗಳಲ್ಲಿ ನೀರು ನಿಂತಿದ್ದು, ಅಂತಹ ಕಡೆಗಳಲ್ಲಿ ನೀರಿನ ಬುಗ್ಗೆಗಳಾಗಿ ಮಿಥೇನ್‌ ಅನಿಲ ಹೊರಹೊಮ್ಮುತ್ತಿದೆ. ಅಂತಹ ಕಡೆಗಳಲ್ಲಿ ಬೆಂಕಿ ತಾಗಿಸಿದರೆ ದಗ್ಗನೆ ಹೊತ್ತಿಕೊಂಡು ಉರಿಯುತ್ತಿದೆ. 

ಮುಂದೇನಾಗಬಹುದು?

ತಜ್ಞರ ಪ್ರಕಾರ ಮಿಥೇನ್‌ ಅನಿಲ ಪ್ರಮಾಣ ಹೆಚ್ಚಾದಾಗ ಅದರಿಂದ ಉಂಟಾಗುವ ಹಾನಿಯ ಪ್ರಮಾಣವೂ ಹೆಚ್ಚು. ಭೂಮಿ ಕೆಳ ಪದರದಲ್ಲಿ ಮಿಥೇನ್‌ ಪ್ರಮಾಣ ಹೆಚ್ಚಿದಂತೆ ಭೂಮಿ ಮೇಲೆ ಒತ್ತಡ ಹೆಚ್ಚಾಗು ತ್ತದೆ. ಅದರಿಂದ ಎಲ್ಲೋ ಒಂದು ಕಡೆಯಲ್ಲಿ ಒತ್ತಡ ಜಾಸ್ತಿಯಾಗಿ ಭೂಮಿಯನ್ನು ಸೀಳಿಕೊಂಡು ಅನಿಲ ಹೊರಬಂದು ನ್ಪೋಟದ ಅನುಭವ ಉಂಟಾಗಬಹುದು. ಈ ವೇಳೆ ಬೆಂಕಿ ತಾಗಿದರೆ ಅಪಾಯದ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ. ಅಲ್ಲದೆ, ರಿಚೆಟ್‌ ಮತ್ತು ಟಾಕ್ಸಿಕ್‌ ಎಂಬ ರಾಸಾಯನಿಕಗಳು ವಾತಾವರಣ ಸೇರಿ ಹಲವು ಕಾಯಿಲೆಗಳಿಗೂ ಕಾರಣವಾಗಬಹುದು ಎಂದಿದ್ದಾರೆ.

ಲಕ್ಷ್ಮೀಪುರ ಸುತ್ತಮುತ್ತಲಿನ ಪ್ರದೇಶದಲ್ಲಿನ ನೀರಿನಿಂದ ಶಾಖ ಹೊರ ಬರುತ್ತಿರುವುದು ಗಮನಕ್ಕೆ ಬಂದಿದೆ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಿರುಕು ಬಿಟ್ಟಿರುವ ಭೂಮಿಗೆ ಮಣ್ಣು ಮುಚ್ಚಿ, ತ್ಯಾಜ್ಯದ ನೀರು ಮತ್ತು ಅನಿಲ ಭೂಮಿಯೊಳಗೆ ಹೋಗದಂತೆ ತಡೆಯಲಾಗುವುದು. ಹಾಗೆಯೇ, ತ್ಯಾಜ್ಯದ ಮೇಲೆ ಮಣ್ಣು ಮುಚ್ಚಿ ಗಿಡ ನೆಡುವ ಮೂಲಕ ಸಂಸ್ಕರಣೆ ಮಾಡಲಾಗುವುದು.

ಕಿ ಟಿ.ಎಂ. ವಿಜಯ್‌ಭಾಸ್ಕರ್‌, ಬಿಬಿಎಂಪಿ ಆಡಳಿತಾಧಿಕಾರಿ


No comments:

Post a Comment