Wednesday, 6 July 2016

ಹೊಸ ಸ್ಪೀಕರ್‌: ಮೊದಲ ದಿನದ ಕಲಾಪ ಸುಸೂತ್ರ


 ಬೆಂಗಳೂರು: ನೂತನ ಸ್ಪೀಕರ್‌ ಆಗಿ ಕಾರ್ಯಭಾರ ವಹಿಸಿಕೊಂಡ ಕೆ.ಬಿ. ಕೋಳಿವಾಡ ಮೊದಲ ದಿನವೇ ಸುಸೂತ್ರ ಕಲಾಪ ನಡೆಸುವ ಮೂಲಕ ಗಮನ ಸೆಳೆದರು. ಬಿಡಿಎ ಬದಲಿ ನಿವೇಶನ ವಿಚಾರದಲ್ಲಿ ಧರಣಿ ಮುಂದುವರಿಸಿದ ಪ್ರತಿಪಕ್ಷ ಬಿಜೆಪಿ ಸದಸ್ಯರ ಮನವೊಲಿಸುವಲ್ಲಿ ಸ್ಪೀಕರ್‌ ಯಶಸ್ವಿಯಾದರು. ಮೈಸೂರಿನಲ್ಲಿ ಡಿಸಿಗೆ ಕಾಂಗ್ರೆಸ್‌ ನಾಯಕರು ಬೆದರಿಕೆ ಹಾಕಿದ ವಿಷಯ ಪ್ರಸ್ತಾವಿಸಿದ ಸಂದರ್ಭ ಮಾತಿನ ಚಕಮಕಿ ನಡೆದು ಎಲ್ಲ ಸದಸ್ಯರು ಎದ್ದು ನಿಂತರು. ಇದರಿಂದ ಸಿಡಿಮಿಡಿಗೊಂಡ
ಸ್ಪೀಕರ್‌ ತಾವೂ ಎದ್ದು ನಿಂತರು. ಕಸಿವಿಸಿಗೊಂಡ ಪ್ರತಿಪಕ್ಷ ಸದಸ್ಯರು ನೀವು ಕುಳಿತುಕೊಳ್ಳಿ ಸಭಾಧ್ಯಕ್ಷರೇ ಎಂದಾಗ; ನೋಡಿ, ಎಲ್ಲರೂ ಎದ್ದು ನಿಂತರೆ ಕಲಾಪ ನಡೆಸುವುದು ಹೇಗೆ. ನಾನು ಎದ್ದು ನಿಂತರೆ ನೀವೆಲ್ಲರೂ ಕುಳಿತುಕೊಳ್ಳಿ. ನಾನು ಪೀಠದಲ್ಲಿ ಕುಳಿತರೆ ನೀವು ಒಬ್ಬೊಬ್ಬರೇ ಎದ್ದು ನಿಂತು ವಿಷಯ ಪ್ರಸ್ತಾಪಿಸಬೇಕು ಎಂದು ಖಡಕ್‌ ಸೂಚನೆ ನೀಡಿದರು.

No comments:

Post a Comment