Wednesday, 6 July 2016

ಧಾರವಾಡ ಐಐಟಿ: 31ಕ್ಕೆ ಮೋದಿಯಿಂದ ಉದ್ಘಾಟನೆ?

ಧಾರವಾಡ: ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಆರಂಭಗೊಂಡಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಜು.31ರಂದು ಉದ್ಘಾಟನೆಗೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ, ಧಾರವಾಡ ಐಐಟಿಗೆ ಮೊದಲ ವರ್ಷ 5 ವಿದ್ಯಾರ್ಥಿನಿಯರು ಸೇರಿ 120 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.ಜತೆಗೆ ಮೊದಲ ವರ್ಷದ ಬ್ಯಾಚ್‌ನಲ್ಲಿ ಧಾರವಾಡದ 5 ವಿದ್ಯಾರ್ಥಿಗಳಿಗೂ ತಮ್ಮೂರಿನ ಐಐಟಿಯಲ್ಲೇ
ಕಲಿಯುವ ಅವಕಾಶ ಸಿಕ್ಕಿದೆ. ಐಐಟಿ ಕಟ್ಟಡದ ಮತ್ತು ಮೊದಲ ವರ್ಷದ ವರ್ಗಗಳ ಉದ್ಘಾಟನೆಗೆ ಮೋದಿ ಭಾಗವಹಿಸುವ ಸಾಧ್ಯತೆ ಇದೆ. ಜು.30ರಂದು ಗೋವಾ ಐಐಟಿ ಉದ್ಘಾಟನೆಯಾಗುವ ನಿರೀಕ್ಷೆ ಇದ್ದು, 31ಕ್ಕೆ ಧಾರವಾಡ ಐಐಟಿಯನ್ನು ಮೋದಿ ಉದ್ಘಾಟಿಸಬಹುದು ಎನ್ನಲಾಗಿದೆ.

No comments:

Post a Comment