Wednesday, 6 July 2016

251 ರೂ. ಮೊಬೈಲ್‌ ಹೀಗಿದೆ ನೋಡಿ...


 ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಜಗತ್ತಿನ ಅತಿ ಅಗ್ಗದ ಸ್ಮಾರ್ಟ್‌ ಫೋನ್‌ ಫ್ರೀಡಂ 251, ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗಿದೆ. ಜು.7ರಿಂದ  ಗ್ರಾಹಕರಿಗೆ ದೊರಕಲಿದ್ದು, ಈ ಹಿನ್ನೆಲೆಯಲ್ಲಿ ಮೊಬೈಲ್‌ನ ಮೊದಲ ಚಿತ್ರಗಳು ಬಿಡುಗಡೆಯಾಗಿವೆ.

ಕಂಪನಿ ಪ್ರಕಾರ, ಫೋನ್‌ 1 ಜಿಬಿ ರ್ಯಾಮ್‌, 8 ಜಿಬ ಸ್ಟೋರೇಜ್‌, 4 ಇಂಚಿನ ಡಿಸ್ಪೆ$Éà, 3.2 ಮೆಗಾಪಿಕ್ಸೆಲ್‌ ಹಿಂಭಾಗದ ಕ್ಯಾಮೆರಾ ಹೊಂದಿದೆ. ಇದರಲ್ಲಿ 1450 ಎಮ್‌ಎಎಚ್‌ ಬ್ಯಾಟರಿ ಇದ್ದು, ಆ್ಯಂಡ್ರಾಯಿಡ್‌ ಕಿಟ್‌ಕ್ಯಾಟ್‌ ಆಪರೇಟಿಂಗ್‌ ಸಿಸ್ಟಂ ಹೊಂದಿದೆ. ಮೇಲ್ಮೋಟಕ್ಕೆ ಮೊಬೈಲ್‌ ಎಲ್ಲಾ ವರ್ಗದವನ್ನು ಸೆಳೆವಂತಿದ್ದು, ಮೊಬೈಲ್‌ನ ಕಪ್ಪು ಮತ್ತು ಬಿಳಿ ಬಣ್ಣದ ಫೋಟೋ ಬಿಡುಗಡೆ ಮಾಡಲಾಗಿದೆ. ಗ್ರಾಹಕರಿಗೆ ಪೂರೈಸಲು 2 ಲಕ್ಷ ಮೊಬೈಲ್‌ಗ‌ಳನ್ನು ರಿಂಗಿಂಗ್‌ ಬೆಲ್ಸ್‌ ತಯಾರು ಮಾಡಿಟ್ಟುಕೊಂಡಿದೆ. ಲಕ್ಕಿ ಡ್ರಾ ಮೂಲಕ ಪ್ರತಿ ರಾಜ್ಯದಲ್ಲಿ 10 ಸಾವಿರ ಮೊಬೈಲ್‌ ಡೆಲಿವರಿಗೆ ಗ್ರಾಹಕರನ್ನು ಆಯ್ಕೆ ಮಾಡಲು ಉದ್ದೇಶಿಲಾಗಿದೆ.

No comments:

Post a Comment