Wednesday 6 July 2016

ಅಂಚೆ ಮೂಲಕ ಮನೆಗೇ ಬರಲಿದೆ ಗಂಗಾಜಲ! ಕೇಂದ್ರದ ಹೊಸ ಯೋಜನೆ

  
 ನವದೆಹಲಿ: ಮನೆ ಮನೆಗೆ ಪತ್ರಗಳನ್ನು ಬಟವಾಡೆ ಮಾಡುವ ಪೋಸ್ಟ್‌ಮ್ಯಾನ್‌ಗಳು ಇನ್ನು ಮುಂದೆ ಗಂಗಾಜಲವನ್ನು ಮನೆಬಾಗಿಲಿಗೆ ಪೂರೈಕೆ ಮಾಡಲಿದ್ದಾರೆ. ಇ- ಕಾಮರ್ಸ್ ವೇದಿಕೆಯನ್ನು ಬಳಸಿಕೊಂಡು ಹರಿದ್ವಾರ, ಹೃಷಿಕೇಶಗಳಿಂದ ಜನರಿಗೆ ಗಂಗಾಜಲವನ್ನು ಪೂರೈಕೆ ಮಾಡಲು ಅಂಚೆ ಇಲಾಖೆಗೆ ಸೂಚಿಸಿದ್ದೇನೆ ಎಂದು ಮಾಹಿತಿ ಮತ್ತು ಸಂವಹನ ಸಚಿವ ರವಿಶಂಕರ್‌ ಪ್ರಸಾದ್‌ ಅವರು ಹೇಳಿದ್ದಾರೆ. ಅಂಚೆ ಇಲಾಖೆ ದೇಶದೆಲ್ಲೆಡೆ ತನ್ನ ಜಾಲವನ್ನು ಹೊಂದಿದೆ. ಮೊಬೈಲ್‌ ಫೋನ್‌
, ಸೀರೆಗಳು, ಆಭರಣಗಳು, ಉಡುಪುಗಳನ್ನು ಪೂರೈಸಲು ಸಾಧ್ಯವಾಗಿರುವಾಗ ಗಂಗಾಜಲವನ್ನು ಪೂರೈಸುವು ಕಷ್ಟವೇನಲ್ಲ. ಇದರಿಂದ ಇ ಕಾಮರ್ಸ್‌ ಕೈಗಾರಿಕೆಗೆ ಇನ್ನಷ್ಟು ಉತ್ತೇಜನ ದೊರೆಯಲಿದೆ ಎಂದು ಹೇಳಿದ್ದಾರೆ.

No comments:

Post a Comment