Thursday 7 July 2016

ಅತ್ಯಾಧುನಿಕ ಏರ್​ವಿುಸೈಲ್ ಪರೀಕ್ಷಾರ್ಥ ಪ್ರಯೋಗ ಯಶ

 ಬಲಸೋರ್ (ಒಡಿಷಾ): ಇಸ್ರೇಲ್ ತಂತ್ರಜ್ಞಾನ ಸಹಯೋಗದೊಂದಿಗೆ ಭಾರತ ಅಭಿವೃದ್ಧಿ ಪಡಿಸಿದ ಅತ್ಯಾಧುನಿಕ ಏರ್ ಮಿಸೈಲ್ ಪರೀಕ್ಷಾರ್ಥ ಪ್ರಯೋಗ ಇಂದು ನಡೆದಿದೆ.ಹೈದ್ರಾಬಾದ್ ಮೂಲದ ಡಿಆರ್​ಡಿಒ ಅಭಿವೃದ್ಧಿ ಪಡಿಸಿದ ಈ ಮಿಸೈಲ್ ಬೆಳಗ್ಗೆ 8.15ಕ್ಕೆ ಚಂಡೀಪುರದಲ್ಲಿರುವ ರಕ್ಷಣಾ ಇಲಾಖೆ ನೆಲೆಯಲ್ಲಿ ಪ್ರಯೋಗಕ್ಕೆ ಒಳಗಾಯಿತು. ಇದು 50 ರಿಂದ 70 ಕಿ.ಮೀ. ಪ್ರದೇಶದ ವರೆಗೆ ದಾಳಿ ಸಾಮರ್ಥ್ಯ ಹೊಂದಿದೆ. ತನ್ನ ನಿಗದಿತ ಕಾರ್ಯದೊಂದಿಗೆ ವಿಚಕ್ಷಣೆ ಮತ್ತು ಬೆದರಿಕೆ ತುರ್ತು ಸಂದೇಶ
ನೀಡಿ ಮಿಸೈಲ್ ಸಾಗುವ ಮಾರ್ಗದ ನಿರ್ದೇಶನವನ್ನೂ ನೀಡಲಿದೆ ಎಂದು ಡಿ.ಆರ್.ಡಿ.ಒ. ವಿಜ್ಞಾನಿಗಳು ತಿಳಿಸಿದ್ದಾರೆ.

ರಕ್ಷಣಾ ನೆಲೆಯ ಸಮೀಪವಿದ್ದ 3653 ಮಂದಿ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ ನಂತರ ನೂತನ ಮಿಸೈಲ್ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಲಾಯಿತು ಎಂದು ಜಿಲ್ಲಾಡಳಿತ ಹೇಳಿದೆ.

No comments:

Post a Comment