Thursday 7 July 2016

ಸ್ವಚ್ಛ ಬೆಂಗಳೂರಿಗೆ ಸ್ಮಾರ್ಟ್​ಫೋನ್ ಒಣ ಕಸ ಸಮಸ್ಯೆಗೆ ಪರಿಹಾರ

 ಬೆಂಗಳೂರು: ಈಗ ಪ್ರತಿಯೊಬ್ಬರ ಬಳಿ ಸ್ಮಾರ್ಟ್ ಫೋನ್​ಗಳಿರುವುದು ಸಾಮಾನ್ಯ. ಬಹಳಷ್ಟು ಜನ ವಾಟ್ಸ್​ಪ್, ಫೇಸ್​ಬುಕ್, ಟ್ವಿಟರ್ ಬಳಕೆಗಂತೂ ಉಪಯೋಗಿಸುತ್ತಾರೆ. ಆದರೆ, ಸ್ಮಾರ್ಟ್​ಫೋನನ್ನು ನಗರದ ಸ್ವಚ್ಛತೆಗಾಗಿಯೂ ಬಳಕೆ ಮಾಡಬಹುದಾ?
ಈ ಪ್ರಶ್ನೆಯನ್ನು ಲಾಲ್​ಬಾಗ್ ಮತ್ತು ಬಸವನಗುಡಿಯ ಆಸುಪಾಸಿನ ಗಲ್ಲಿಗಳಲ್ಲಿ ಕೇಳಿದರೆ ಹೌದು ಎಂಬ ಉತ್ತರ ಕೇಳಿ ಬರುತ್ತದೆ. ಲಾಲ್​ಬಾಗ್ ಪಶ್ಚಿಮ ದ್ವಾರದ ಹತ್ತಿರದಲ್ಲಿನ (ಬಸವನಗುಡಿ ಬಡಾವಣೆ) ಕನಿಷ್ಠ 1 ಸಾವಿರ ಮನೆಯಲ್ಲಿರುವ ಸ್ಮಾರ್ಟ್
ಫೋನ್​ಗಳು ಕಳೆದ ಒಂದೂವರೆ ವರ್ಷದಿಂದ ಸ್ವಚ್ಛತೆಗಾಗಿಯೂ ಸೇವೆ ಒದಗಿಸುತ್ತಿವೆ.

ಲಾಲ್​ಬಾಗ್ ಪಶ್ಚಿಮ ದ್ವಾರದಿಂದ ಕೆ.ಆರ್.ರಸ್ತೆ, ಎಂ.ಎನ್.ಕೃಷ್ಣರಾವ್ ರಸ್ತೆ ಸುತ್ತಮುತ್ತಲಿನ ಪಾದಚಾರಿ ಮತ್ತು ಸಣ್ಣ ರಸ್ತೆಗಳಲ್ಲಿ ಈ ಹಿಂದೆ ಕಸದ ರಾಶಿಯೇ ಬೀಳುತ್ತಿತ್ತು. ಪ್ರತಿ ದಿನ ಮುಂಜಾನೆ ಪಾಲಿಕೆ ಸಿಬ್ಬಂದಿ ಹಸಿ ಕಸವನ್ನು ಸಂಗ್ರಹಿಸುತ್ತಾರೆ. ನಂತರ ಒಣ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ.

ಹಸಿರುದಳದ ಸಹಕಾರ

ಸಾಮಾಜಿಕ ಕಾರ್ಯಕರ್ತೆಸ್ಮಿತಾ ಶ್ರೀನಾಥ್ ಸೇರಿ ಬಸವನಗುಡಿಯ ನಾಗರಿಕ ಪ್ರಜ್ಞೆ ಇರುವ ಕೆಲ ಮಹಿಳೆಯರು ಸ್ವಚ್ಛತಾ ಅಭಿಯಾನ ಆರಂಭಿಸಿದರು. ಅಷ್ಟೊಂದು ಪ್ರಯೋಜನವಾಗದಿದ್ದಾಗ ಸ್ವಚ್ಛ ಬೆಂಗಳೂರು ಅಭಿಯಾನದಲ್ಲಿ ತೊಡಗಿರುವ ಹಸಿರು ದಳ ಸಂಸ್ಥೆಯನ್ನು ಸಂರ್ಪಸಿ ಒಣ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಂಡರು.

ಲಾಲ್​ಬಾಗ್, ಬಸವನಗುಡಿ ಪ್ರದೇಶದ ಮನೆಗಳಲ್ಲಿ ಅಭಿಯಾನ

ವಾರಕ್ಕೊಮ್ಮೆ ಒಣಕಸ

ಪಾಲಿಕೆ ನೀಡುವ ಗಾಡಿಯಲ್ಲಿಯೇ ಒಣ ಕಸ ಸಂಗ್ರಹಿಸುವ ಕಾರ್ಯ ಆರಂಭಿಸಿ, ಪ್ರತಿ ಶನಿವಾರ ಮುಂಜಾನೆ ಒಣ ಕಸ ಸಂಗ್ರಹಿಸಲಾಗುತ್ತದೆ ಎಂಬ ಮಾಹಿತಿಯನ್ನು ಶುಕ್ರವಾರ ರಾತ್ರಿ ಮತ್ತು ಶನಿವಾರ ಮುಂಜಾನೆ ಬಡಾವಣೆಯಲ್ಲಿನ ಎಲ್ಲರಿಗೂ ಮಾಹಿತಿ ನೀಡಲಾರಂಭಿಸಿದರು. ಮೊಬೈಲ್ ಸಂದೇಶ ಕಳುಹಿಸಿದರು. ಎಲ್ಲರೂ ಕಡ್ಡಾಯವಾಗಿ ಹಸಿ ಮತ್ತು ಒಣ ಕಸವನ್ನು ಮನೆಯಲ್ಲಿಯೇ ವಿಂಗಡಿಸಿಡಬೇಕು. ಒಣ ಕಸವನ್ನು ವಾರಕ್ಕೊಮ್ಮೆ ಮಾತ್ರ ನೀಡಬೇಕೆಂಬ ಮನವಿ ಮಾಡಿದೆವು. ಆರಂಭದಲ್ಲಿ ಕೆಲವರು ಸ್ಪಂದಿಸದಿದ್ದರೂ ದಿನಕಳೆದಂತೆ ಪರಿಣಾಮ ವ್ಯಕ್ತವಾಗತೊಡಗಿತು. ಈಗ ಅಂದಾಜು 1 ಸಾವಿರ ಮನೆಗಳಿಂದ ಪ್ರತಿವಾರ ಒಣಕಸ ಸಂಗ್ರಹಿಸಲಾಗುತ್ತಿದೆ ಎನ್ನುತ್ತಾರೆ ಯೋಜನೆಯ ರೂವಾರಿ ಸ್ಮಿತಾ.

ಮೊಬೈಲ್ ಅಪ್ಲಿಕೇಶನ್

ಮೈಂಡ್ ಟ್ರಿ ಸಾಫ್ಟ್​ವೇರ್ ಕಂಪನಿಯು ಈ ಕಾರ್ಯಕ್ಕೆ ಆರ್ಥಿಕ ನೆರವು ಒದಗಿಸಿದ್ದು, ‘ಜಿಯೋ ಟ್ಯಾಗ್’ ಎಂಬ ಮೊಬೈಲ್ ಆಪ್​ನ್ನು ಕಂಪನಿ ಸಿದ್ಧಪಡಿ ಸಿದೆ. ಅದರ ಮೂಲಕ ಪ್ರತಿ ಶುಕ್ರವಾರ ಸಂಜೆ ಹಾಗೂ ಶನಿವಾರ ಮುಂಜಾನೆ ಸಂದೇಶ ಮೊಬೈಲ್​ಗೆ ಬರುತ್ತದೆ. ಆಗ ಎಲ್ಲರೂ ಒಂದು ವಾರದಿಂದ ಸಂಗ್ರಹಿಸಿಟ್ಟುಕೊಂಡಿದ್ದ ಒಣ ತ್ಯಾಜ್ಯವನ್ನು ಗಾಡಿಯಲ್ಲಿ ಬರುವ ಹಸಿರು ದಳದ ಸ್ವಯಂ ಸೇವಕರಿಗೆ ನೀಡುತ್ತಾರೆ.

No comments:

Post a Comment