Thursday 7 July 2016

ನೀರಿನ ಬಾಟಲಿಯಿಂದ ರೋಗ!

 ನವದೆಹಲಿ: ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಮರುಬಳಕೆ ಮಾಡುವುದ ರಿಂದ ಯಾವುದೇ ಸಮಸ್ಯೆಯಾಗಲಾರದು ಎಂಬ ಕಲ್ಪನೆಯಿದೆ. ಆದರೆ ನೀರಿನ ಬಾಟಲಿಗಳ ಮೂಲಕವೇ ಅಪಾಯಕಾರಿಯಾದ ಬ್ಯಾಕ್ಟೀರಿಯಾಗಳು ಮಾನವನ ಹೊಟ್ಟೆ ಸೇರಬಹುದೆಂದು ಅಧ್ಯಯನ ವರದಿಯೊಂದು ತಿಳಿಸಿದೆ. ಪ್ಲಾಸ್ಟಿಕ್ ಬಾಟಲಿಗಳಲ್ಲಿ ಕೆಲ ರಾಸಾಯನಿಕಗಳ ಅಂಶವಿರುತ್ತದೆ. ಇದು ನೀರಿನ ಮೂಲಕ ಮಾನವನ ದೇಹ ಸೇರುತ್ತದೆ. ಇದರಿಂದ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ ಎಂದು ಅಧ್ಯಯನ
ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಮರುಬಳಕೆ ಮಾಡಲು ಸೂಕ್ತ ಎನ್ನುವಂತಹ ಬಾಟಲಿಗಳನ್ನು ನೋಡಿ ಆಯ್ದುಕೊಳ್ಳುವುದು ಉತ್ತಮವಾಗಿರುತ್ತದೆ. ಆದರೆ ನೀರು ಮಾರಾಟಕ್ಕೆ ಬಳಸುವ ಬಾಟಲಿಗಳು ಮರುಬಳಕೆಗೆ ಸೂಕ್ತವಾಗಿದೆ ಎಂದು ಬ್ರಿಟನ್ ಕ್ಯಾನ್ಸರ್ ರೀಸರ್ಚ್ ಸೆಂಟರ್ ತಿಳಿಸಿದೆ.

ಬಿಸಿನೀರಿನಿಂದ ತೊಳೆಯಿರಿ: ಬಾಯಿ ಮತ್ತು ಕೈಗಳ ಮೂಲಕವೂ ನೀರಿನ ಬಾಟಲಿಗಳಿಗೆ ಬ್ಯಾಕ್ಟೀರಿಯಾಗಳು ಸೇರಿಕೊಳ್ಳಬಹುದಾಗಿದೆ. ಹೀಗಾಗಿ ಪ್ರತಿನಿತ್ಯ ಬಿಸಿಯಾದ ಸೋಪು ನೀರಿನಿಂದ ಇದನ್ನು ತೊಳೆಯ ಬೇಕು ಮತ್ತು ಒಣಗಿಸಬೇಕೆಂದು ತಜ್ಞರು ತಿಳಿಸಿದ್ದಾರೆ.

No comments:

Post a Comment