Thursday 7 July 2016

ಇಂದಿನಿಂದ ಇ-ಟೋಲ್

 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೂತನ ಯೋಜನೆ
ನವದೆಹಲಿ/ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕರ್ನಾಟಕ ಸೇರಿದಂತೆ ದೇಶದ 275 ಟೋಲ್​ಗಳಲ್ಲಿ ವಿದ್ಯುನ್ಮಾನ ಸುಂಕ ವ್ಯವಸ್ಥೆ’ (ಎಲೆಕ್ಟ್ರಾನಿಕ್ ಟೋಲಿಂಗ್ ಸಿಸ್ಟಮ್ ಜಾರಿಗೊಳಿಸುತ್ತಿದೆ. ರಾಜ್ಯದ 24 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುರುವಾರದಿಂದಲೇ ಈ ಸೌಲಭ್ಯ ದೊರೆಯಲಿದೆ.ಭಾರತದಲ್ಲಿ ಒಟ್ಟು 350 ಟೋಲ್​ಗಳಿದ್ದು ಒಂದು ವರ್ಷದ ಅವಧಿಯಲ್ಲಿ
ಉಳಿದ ಟೋಲ್​ಗಳಲ್ಲೂ ಈ ವ್ಯವಸ್ಥೆ ಅಳವಡಿಸಲಾಗುವುದೆಂದು ಎನ್​ಎಚ್​ಎಐ ತಿಳಿಸಿದೆ. ಭಾರತ ಸಾರಿಗೆ ನಿಗಮ ಮತ್ತು ಕೋಲ್ಕತ ಐಐಎಂ ನಡೆಸಿದ ಅಧ್ಯಯನದಲ್ಲಿ ಟೋಲ್ ಮತ್ತಿತರ ಚೆಕ್​ಪೋಸ್ಟ್​ಗಳಲ್ಲಿ ವಾಹನಗಳು ನಿಲುಗಡೆಯಾಗುವ ಕಾರಣ ಸರ್ಕಾರಕ್ಕೆ ವಾರ್ಷಿಕ 60000 ಕೋಟಿ ರೂ. ನಷ್ಟವಾಗುತ್ತಿದೆ ಎಂದು ತಿಳಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಇ-ಟೋಲ್ ವ್ಯವಸ್ಥೆ ಜಾರಿಗೆ ನಿರ್ಧರಿಸಿತ್ತು.

ಸುಂಕ ಪಾವತಿ ಹೇಗೆ?

ಐಸಿಐಸಿಐ ಬ್ಯಾಂಕ್ ಸುಂಕ ಪಾವತಿಯ ತಂತ್ರಾಂಶ ಸಿದ್ಧಪಡಿಸಿದೆ. ವಾಹನ ಮಾಲೀಕರು ಬ್ಯಾಂಕ್​ನ ಪಾಸ್ಟ್​ಟ್ಯಾಗ್​ನಲ್ಲಿ ಹೆಸರು ನೋಂದಾಯಿಸಿಕೊಂಡು ಹಣ ಪಾವತಿ ಮಾಡಬೇಕು. ಫಾಸ್ಟ್​ಟ್ಯಾಗ್​ಗಳನ್ನು ವಾಹನಗಳ ವಿಂಡ್ ಸ್ಕ್ರೀನ್​ಗಳಿಗೆ ಅಳವಡಿಸಲಾಗಿರುತ್ತದೆ. ಇದರಲ್ಲಿರುವ ಆರ್​ಎಫ್​ಐಡಿ ತಂತ್ರಜ್ಞಾನದ ಮೂಲಕ ಟೋಲ್​ಗಳಲ್ಲಿ ವಾಹನಗಳನ್ನು ನಿಲ್ಲಿಸದೆಯೇ ಟೋಲ್ ಪಾವತಿ ಸಾಧ್ಯವಾಗಲಿದೆ. ಚಂದಾದಾರರಿಗೆ ಬ್ಯಾಂಕ್​ನಿಂದ ಫ್ರೀಪೇಡ್​ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್​ನ್ನು ತಮ್ಮ ವಾಹನ ಸಂಖ್ಯೆಗೆ ಲಿಂಕ್ ಮಾಡಿಸಿ ಕೊಂಡು, ಹಣ ಮುಗಿದ ನಂತರ ಮತ್ತೆ ರೀಚಾರ್ಜ್ ಮಾಡಿಸಿಕೊಳ್ಳಬೇಕು. ಆನ್​ಲೈನ್​ನಲ್ಲೂ ಕಾರ್ಡ್ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ರಾಜ್ಯದಲ್ಲಿ 24 ಇ-ಟೋಲ್ ಕೇಂದ್ರ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಜ್ಯದ 24 ರಾಷ್ಟ್ರೀಯ ಹೆದ್ದಾರಿ ಸುಂಕ ಕೇಂದ್ರಗಳಲ್ಲಿ ಗುರುವಾರದಿಂದ ‘ವಿದ್ಯುನ್ಮಾನ ಸುಂಕ ವ್ಯವಸ್ಥೆ’ (ಎಲೆಕ್ಟ್ರಾನಿಕ್ ಟೋಲಿಂಗ್ ಸಿಸ್ಟಮ್ ಜಾರಿಗೊಳಿಸುತ್ತಿದೆ. ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ನವಯುಗ ಟೋಲ್​ನಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೂತನ ಸುಂಕ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ. ನವಯುಗ ಟೋಲ್ ಸೇರಿದಂತೆ ರಾಜ್ಯದ 24 ಸುಂಕ ಕೇಂದ್ರಗಳಲ್ಲಿ ಮೊದಲ ಹಂತದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ನಂತರ ಎಲ್ಲ ಸುಂಕ ಕೇಂದ್ರಗಳಲ್ಲಿ ವಿದ್ಯುನ್ಮಾನ ಸುಂಕ ವ್ಯವಸ್ಥೆ ಜಾರಿಗೊಳ್ಳಲಿದೆ. ನೂತನ ಸುಂಕ ವ್ಯವಸ್ಥೆಗೆ ಟೋಲ್ ಕೇಂದ್ರಗಳಲ್ಲಿ ಪ್ರತ್ಯೇಕ ಲೇನ್ ಮಾಡಲಾಗಿದೆ. ಈ ಲೇನ್​ನಲ್ಲಿ ವಾಹನಗಳು ಚಲಿಸಬೇಕು. ಇದರಿಂದ ಹೆಚ್ಚು ಸಮಯ ವ್ಯರ್ಥವಾಗುವುದಿಲ್ಲ.

ಎಲ್ಲೆಲ್ಲಿ ಜಾರಿ

ರಾಷ್ಟ್ರೀಯ ಹೆದ್ದಾರಿ-4ರ ಸಿಲ್ಕ್ ಬೋರ್ಡ್ ಜಂಕ್ಷನ್, ಹಿರೇಬಾಗೇವಾಡಿ, ನೆಲಮಂಗಲ ಹಾಗೂ ಗುಳಾಳು.
ರಾಷ್ಟ್ರೀಯ ಹೆದ್ದಾರಿ-48 ಶಾಂತಿಗ್ರಾಮ, ಕಡಬಹಳ್ಳಿ. ಕುಲುಮಪಾಳ್ಯ ಹಾಗೂ ಚೊಕ್ಕೆನಹಳ್ಳಿ. ಜ ಎನ್.ಎಚ್-13 ಹಿಟ್ನಾಳ್. ಜ ಎನ್.ಎಚ್.-7 ಎಲೆಕ್ಟ್ರಾನಿಕ್ ಸಿಟಿ (ಬೆಂಗಳೂರು) ಜ ಎನ್.ಎಚ್-4 ಕಾರಜೀವನಹಳ್ಳಿ. ಜ ಎನ್.ಎಚ್-13 ವನಗಿರಿ ಹಾಗೂ ಷಹಪುರ.
ಎನ್.ಎಚ್-50 ಬಿಜಾಪುರ ಹಾಗೂ ನರ್ಗಾತಾಲ. ಜ ಎನ್.ಎಚ್-4 ಕೋಗೋನಹಳ್ಳಿ, ಹಟ್ಟರಗಿ, ಚಲಗಿರಿ ಹಾಗೂ ಬಂಕಾಪುರ. ಜ ಎನ್.ಎಚ್- 48 ಹೆಬ್ಬಾಳು. ಜ ಎನ್.ಎಚ್-73 ಬ್ರಹ್ಮರಕೊಟ್ಲು. ಜ ಎನ್.ಎಚ್-17 ಸೂರತ್ಕಲ್. ಜ ಎನ್.ಎಚ್-7 ಬಾಗೇಪಲ್ಲಿ ಸುಂಕ ಕೇಂದ್ರಗಳಲ್ಲಿ ಮೊದಲ ಹಂತದಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.

No comments:

Post a Comment