Thursday 7 July 2016

ಕಪ್ಪುಹಣ ಘೋಷಣೆಗೆ ಸೆ.30 ಕೊನೆಯ ದಿನ, ಜೇಟ್ಲಿ

 ನವದೆಹಲಿ: ಕಪ್ಪುಹಣ ಘೋಷಿಸಲು ಕೇಂದ್ರ ಸರ್ಕಾರ ಸೆ.30 ವರೆಗೆ ಸಮಯ ನಿಗದಿ ಪಡಿಸಿದೆ. ಕಪ್ಪುಹಣ ಹೊಂದಿರುವವರಿಗೆ ಶಿಕ್ಷೆಯಿಂದ ಪಾರಾಗಲು ಇದು ಕೊನೆಯ ಅವಕಾಶ ಎಂದು ಹಣಕಾಸು ಸಚಿವರ ಅರುಣ್ ಜೇಟ್ಲಿ ತಿಳಿಸಿದ್ದಾರೆ.ಅಕ್ರಮವಾಗಿ ಕಪ್ಪು ಹಣ ಹೊಂದಿರುವವರಿಗೆ ಮತ್ತು ತೆರಿಗೆ ಪಾವತಿಸದಿರುವವರಿಗೆ ಇದು ಕೊನೆಯ ಅವಕಾಶವಾಗಿದ್ದು, ಸೆ.30ರೊಳಿಗೆ ದಂಡ ಪಾವತಿಸಿ ಕಪ್ಪು ಹಣವನ್ನು ಘೋಷಿಸಿಕೊಳ್ಳಬೇಕು. ಕಪ್ಪುಹಣ ಘೊಷಣೆ ಕಾಯ್ದೆಯಡಿ ಕಪ್ಪು ಹಣದ ಮಾಹಿತಿ ನೀಡಿ ತೆರಿಗೆ
ಪಾವತಿಸುವವರ ಮಾಹಿತಿಯನ್ನು ಸಾರ್ವಜನಿಕಗೊಳಿಸುವುದಿಲ್ಲ, ಅವರ ಹೆಸರನ್ನು ಗೋಪ್ಯವಾಗಿಡಲಾಗುವುದು. ಈ ಯೋಜನೆ ಜೂನ್ 1ರಿಂದ ಆರಂಭವಾಗಿದೆ ಎಂದು ಜೇಟ್ಲಿ ತಿಳಿಸಿದರು.

ಈ ಯೋಜನೆಯನ್ವಯ ಶೇ. 45 ರಷ್ಟು ತೆರಿಗೆ ಮತ್ತು ದಂಡ ಪಾವತಿಸಿ ಕಪ್ಪು ಹಣ ಘೋಷಣೆ ಮಾಡಬಹುದು.

ಕಪ್ಪು ಹಣ ಘೋಷಣೆ ಯೋಜನೆಯನ್ನು ಪ್ರಚುರ ಪಡಿಸಲು ಜೇಟ್ಲಿ ಲೆಕ್ಕ ಪರಿಶೋಧಕರು, ತೆರಿಗೆ ಸಲಹೆಗಾರರು ಮತ್ತು ಉದ್ದಿಮೆದಾರರ ಸಭೆ ನಡೆಸಿದರು. ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಚಿವೆ ನಿರ್ಮಲಾ ಸೀತಾರಾಮನ್, ಇಂಧನ ಮತ್ತು ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್, ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಭಾಗವಹಿಸಿದ್ದರು.

No comments:

Post a Comment