Friday 8 July 2016

ಉಪಗ್ರಹ ತಂತ್ರಜ್ಞಾನ: ಯುವ ತಂತ್ರಜ್ಞರಿಗೆ ತೃಪ್ತಿ ನೀಡುವ ಕ್ಷೇತ್ರ

ಬೆಂಗಳೂರು:  ‘ಉಪಗ್ರಹ ತಂತ್ರಜ್ಞಾನದಲ್ಲಿ ಮಾತ್ರ ಎಲ್ಲ ವಿಭಾಗಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಲು ಅವಕಾಶವಿದೆ. ಯುವ ತಂತ್ರಜ್ಞರಿಗೆ ಅತ್ಯಂತ ತೃಪ್ತಿ ತರುವ ಕ್ಷೇತ್ರವಿದು’ ಎಂದು ಇಸ್ರೊ ಮಾಜಿ ಅಧ್ಯಕ್ಷ ಪ್ರೊ.ಯು.ಆರ್‌.ರಾವ್‌ ಹೇಳಿದರು.
ಯಲಹಂಕ ಸಮೀಪದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಮೂರನೇ ಹಂತದ ವಿದ್ಯಾರ್ಥಿ ಉಪಗ್ರಹ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ವಿದ್ಯಾರ್ಥಿ ಉಪಗ್ರಹ  ಯೋಜನೆಯಲ್ಲಿ ತೊಡಗಿಕೊಂಡಿರುವ ಯುವ ತಂತ್ರಜ್ಞರು ಆಳವಾದ ಸಂಶೋಧನೆಯಲ್ಲಿ ತೊಡಗಬೇಕು. ಸಣ್ಣ ಸಣ್ಣ
ವಿಚಾರಗಳು ಮಹತ್ವದ ಅನ್ವೇಷಣೆಗೆ ಕಾರಣವಾಗುತ್ತವೆ.  ಇದನ್ನು ವಿದ್ಯಾರ್ಥಿಗಳು ಮನಗಾಣಬೇಕು’ ಎಂದು ಹೇಳಿದರು.

‘ಮುಂದಿನ ದಿನಗಳಲ್ಲಿ  ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರ ಮತ್ತಷ್ಟು ಸುಧಾರಣೆ ಕಾಣಲಿದೆ. ಉಪಗ್ರಹ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು’ ಎಂದರು.

‘ಬಾಹ್ಯಾಕಾಶ ಸಂಶೋಧನೆ ಚಟುವಟಿಕೆಗಳಲ್ಲಿ ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಅನಿವಾರ್ಯ’ ಎಂದರು.

ಸೆಂಟಮ್‌ ಎಲೆಕ್ಟ್ರಾನಿಕ್‌್ಸನ ಉಪಾಧ್ಯಕ್ಷ ವಿನೋದ್‌ ಚಿಪ್ಪಲಕಟ್ಟಿ ಮಾತನಾಡಿ, ‘ವಿಶ್ವದಲ್ಲಿ ವಿದ್ಯಾರ್ಥಿ ನಿರ್ಮಿತ  ನೂರಕ್ಕೂ ಹೆಚ್ಚು ಉಪಗ್ರಹಗಳು ಈಗಾಗಲೇ ಉಡಾವಣೆಗೊಂಡಿವೆ.   ಸಣ್ಣ ಉಪಗ್ರಹಗಳು ಬಾಹ್ಯಾಕಾಶಕ್ಕೆ ಲಗ್ಗೆ ಇಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದರು.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಪರಿಶೀಲನಾ ಆಯೋಗದ ಅಧ್ಯಕ್ಷ ಪ್ರೊ.ಎನ್‌.ಆರ್‌.ಶೆಟ್ಟಿ ಮಾತನಾಡಿದರು.

No comments:

Post a Comment