Tuesday, 5 July 2016

ಸರ್ಕಾರಿ ಕ್ಷೇತ್ರ: ಹೊಸ ನೌಕರರಿಗೆ ಅಧಿಕ ಸಂಬಳ

ಅಹಮದಾಬಾದ್ (ಪಿಟಿಐ): ಖಾಸಗಿ ಸಂಸ್ಥೆಗಳಿಗೆ ಹೋಲಿಸಿದರೆ ಸರ್ಕಾರ ಮತ್ತು ಸಾರ್ವಜನಿಕ ರಂಗದ ಸಂಸ್ಥೆಗಳು ಹೊಸ ಉದ್ಯೋಗಿಗಳಿಗೆ ಹೆಚ್ಚು ಸಂಬಳ ನೀಡುತ್ತಿವೆ.ಆದರೆ ಖಾಸಗಿ ಸಂಸ್ಥೆಗಳು ಅನುಭವಿ ನೌಕರರಿಗೆ ಹೆಚ್ಚಿನ ವೇತನ ನೀಡುತ್ತಿವೆ ಎಂದು ಏಳನೇ ವೇತನ ಆಯೋಗದ ಬಗ್ಗೆ ಅಧ್ಯಯನ ನಡೆಸಿರುವ ಅಹಮದಾಬಾದ್  ಐಐಎಂ ವರದಿ ತಿಳಿಸಿದೆ. ಕೇಂದ್ರ ಸರ್ಕಾರಿ ನೌಕರರು, ಕೇಂದ್ರ ಸರ್ಕಾರದ ಒಡೆತನದಲ್ಲಿ ಇರುವ ಸಂಸ್ಥೆಗಳ ನೌಕರರು ಮತ್ತು ಖಾಸಗಿ ಕಂಪೆನಿಗಳ ನೌಕರರ
ವೇತನದ ತೌಲನಿಕ ಅಧ್ಯಯನ ನಡೆಸಲಾಗಿದೆ ೊಸದಾಗಿ ನೌಕರಿಗೆ ಸೇರಿದವರು, ಮೂರರಿಂದ 25 ವರ್ಷಗಳ ವರೆಗೆ ಸೇವೆ ಸಲ್ಲಿಸಿದವರ ವೇತನದ ಬಗ್ಗೆ ಐಐಎಂ ಅಧ್ಯಯನ ನಡೆಸಿದೆ. ಈ ಅಧ್ಯಯನ ನಡೆಸಲು ಏಳನೇ ವೇತನ ಆಯೋಗವೇ ಸೂಚಿಸಿತ್ತು.

ವರದಿಯನ್ನು ಕಳೆದ ಅಕ್ಟೋಬರ್‌ ನಲ್ಲಿ ವೇತನ ಆಯೋಗಕ್ಕೆಸಲ್ಲಿಸಲಾಗಿದೆ.

ಆಸ್ಪತ್ರೆಯ ವಿವಿಧ ವರ್ಗಗಳ ನೌಕರರು, ಸರ್ಕಾರಿ ಕಚೇರಿಗಳ ವಿವಿಧ ದರ್ಜೆಯ ನೌಕರು, ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು, ಪ್ರಿನ್ಸಿಪಾಲರು, ವಿಜ್ಞಾನ ಸಂಶೋಧನಾ ಕೇಂದ್ರಗಳ ವಿವಿಧ ದರ್ಜೆಯ ನೌಕರರು ಮತ್ತು ಸಂಶೋಧಕರ ವೇತನದ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಹೊಸದಾಗಿ ನೌಕರಿ ಸೇರಿದವರಿಗೆ ಸರ್ಕಾರಿ ಕ್ಷೇತ್ರದಲ್ಲಿ ಖಾಸಗಿ ಕ್ಷೇತ್ರದ ನೌಕರರಿಗಿಂತ ಹೆಚ್ಚಿನ ಸಂಬಳವಿದೆ.

ಸರ್ಕಾರಿ ಆಸ್ಪತ್ರೆಗಳಿಗೆ ಹೋಲಿಸಿದಾಗ ಖಾಸಗಿ ಆಸ್ಪತ್ರೆಗಳಲ್ಲಿ ಮೂರು ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿದ ವೈದ್ಯರಿಗೆ ಉತ್ತಮ ಸಂಬಳ ಮತ್ತು ಸೌಲಭ್ಯಗಳಿವೆ.

ಹೊಸದಾಗಿ ಕೆಲಸಕ್ಕೆ ಸೇರುವ ವಿಜ್ಞಾನಿಗಳಿಗೆ ಸರ್ಕಾರ ಉತ್ತಮ ಸಂಬಳ ನೀಡುತ್ತಿದೆ. ಮಧ್ಯಮ ದರ್ಜೆಯವರೆಗೂ ಉತ್ತಮ ಸಂಬಳ ನೀಡಲಾಗುತ್ತದೆ. ಆದರೆ ಖಾಸಗಿ ಕ್ಷೇತ್ರದಲ್ಲಿ ಯುವ ವಿಜ್ಞಾನಿಗಳಿಗೆ ಬೇಡಿಕೆ ಇಲ್ಲ. ಅನುಭವಿ ವಿಜ್ಞಾನಿಗಳಿಗೆ ಕೈತುಂಬ ಸಂಬಳ ನೀಡಲಾಗುತ್ತದೆ.

ವೃತ್ತಿ ಪ್ರಗತಿ, ವೃತ್ತಿಯಲ್ಲಿ ಇರುವಾಗ ಕಲಿಕೆಯ ಅವಕಾಶ, ಉದ್ಯೋಗ ಮಾರುಕಟ್ಟೆಯಲ್ಲಿ ಪೂರೈಕೆ ಮತ್ತು ಬೇಡಿಕೆ, ಶೈಕ್ಷಣಿಕ ಸಾಧನೆ ಮತ್ತು ಪ್ರತಿಭೆ ಮತ್ತು ಸಾಮರ್ಥ್ಯ ಉಳಿಸಿಕೊಳ್ಳುವಿಕೆ ಈ ಐದು ಅಂಶಗಳು ವೇತನ ಪ್ರಮಾಣವನ್ನು ನಿರ್ಧರಿಸುತ್ತವೆ ಎಂದು ಅಧ್ಯಯನ ವರದಿ ತಿಳಿಸಿದೆ.

ಸಾಫ್ಟ್‌ವೆರ್ ಡೆವಲಪರ್ಸ್, ಎಂಜಿನಿಯರ್, ಪ್ರೋಗ್ರಾಮರ್‌ಗಳಿಗೆ ಸರ್ಕಾರಿ ರಂಗದ ಉದ್ದಿಮೆಗಳು ಖಾಸಗಿ ಉದ್ದಿಮೆಗಳಿಗಿಂತ ಹೆಚ್ಚಿನ ವೇತನ ನೀಡುತ್ತಿವೆ.

No comments:

Post a Comment