Tuesday, 5 July 2016

ತನ್ನ ಯಶಸ್ಸಿನ ರಹಸ್ಯ ಬಿಚ್ಚಿಟ್ಟ ನಟ ಹೃತಿಕ್ ರೋಷನ್...

ಬಾಲಿವುಡ್ ನಟ ಹೃತಿಕ್ ರೋಷನ್ ಟಾಪ್ ನಟರಲ್ಲಿ ಒಬ್ಬರು.. 42ವರ್ಷದ ನಟ ಹೃತಿಕ್ ರೋಷನ್ ತಮ್ಮ ಸಕ್ಸಸ್ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ. ಕುತೂಹಲವೇ ನನ್ನ ಯಶಸ್ಸಿಗೆ ಕಾರಣ ಎಂದು ತಿಳಿಸಿದ್ದಾರೆ. ಆದ್ದರಿಂದ ಕುತೂಹಲದಿಂದ ಇರುವಂತೆ ಕಿವಿಮಾತು ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಶೇರ್ ಮಾಡಿರುವ ನಟ ಹೃತಿಕ್ ರೋಷನ್. 'ಕಹಾ ನೋ ಪ್ಯಾರ್ ಹೇ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ನಟ ಹೃತಿಕ್, ಈ ಚಿತ್ರದಲ್ಲಿ ಅಮಿಶಾ ಪಟೇಲ್ ಜತೆಗೆ ನಟಿಸಿದ್ದರು.  ಈ ಚಿತ್ರವನ್ನು
ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ನಿರ್ದೇಶನ ಮಾಡಿದ್ದರು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಸಂಪಾದನೆ ಮಾಡಿತ್ತು. ಅಲ್ಲದೇ ಜನ ಮೆಚ್ಚುಗೆ ಗಳಿಸಿತ್ತು. ಬ್ಯಾಗ್ ಬ್ಯಾಗ್ ಚಿತ್ರದ ನಟ ಇತ್ತೀಚಗಷ್ಟೇ ಅವರು ಕಬೀಲ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಯಿ ಇದ್ದಾರೆ.

ಇನ್ನೂ ಕಬಿಲ್ 'ಚಿತ್ರದಲ್ಲಿ ಹೃತಿಕ್ ಕುರುಡು ವ್ಡಕ್ತಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರದಲ್ಲಿ ನಟಿಸುತ್ತಿರೋ ಹೃತಿಕ್ ರೋಷನ್. ಕಬಿಲ್ ಚಿತ್ರದಲ್ಲಿ ಹೃತಿಕ್ ಅಂಧ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳಿಗಳು ಖುಷಿ ಆಗಿದ್ದಂತೂ ಸುಳ್ಳಲ್ಲ. 
ಇನ್ನೂ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಅಯುಶ್ ಗೌರಿಕ್ಕರ್, ಅಲ್ಲದೇ ಈ ಚಿತ್ರದ ನಿರ್ಮಾಪಕ ಸಂಜಯ್ ಗುಪ್ತಾ. ಈ ಚಿತ್ರಕ್ಕಾಗಿ ಹೃತಿಕ್ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಹೃತಿಕ್ ಜತೆಗೆ ಜೋಡಿಯಾಗಲಿದ್ದಾರೆ ಯಾಮಿ ಗೌತಮಿ.

No comments:

Post a Comment