ಆಕೆ ಇನ್ನೂ ೨೨ರ ಹುಡುಗಿ. ಎಲ್ಲಾ ಹುಡುಗಿಯರಿಗಿರುವಂತೆ ಆಕೆಗೂ ಬಣ್ಣ ಬಣ್ಣದ ಕನಸುಗಳಿದ್ದಿರಬಹುದು. ಆದರೆ ಎಲ್ಲರಂತೆ ಕನಸು ಕಾಣುತ್ತಾ ಭ್ರಮಾಲೋಕದಲ್ಲಿ ವಿಹರಿಸಲು ಆಕೆಗೆ ವಿಧಿ ಬಿಡಲಿಲ್ಲ. ನಖ- ಶಿಖಾಂತ ನಷ್ಟದಲ್ಲಿದ್ದ ತನ್ನ ತಂದೆಯ ಕಂಪನಿಯನ್ನು ಆಕೆ ಮೇಲೆತ್ತಬೇಕಾಗಿತ್ತು.
ಒಂದು ಕಾಲದಲ್ಲಿ ಉಛ್ಚ್ರಾಯ ಸ್ಥಿತಿಯಲ್ಲಿದ್ದ ಆಕೆಯ ತಂದೆಯ ಅಕಾಲ್ ಸ್ಪ್ರಿನ್ಗ್ಸ್ ಕಂಪನಿ ಅಕ್ಷರಶಃ ಹಾಸಿಗೆ ಹಿಡಿದಿತ್ತು. ಈ ಕಂಪನಿ ಮೇಲೆ ಬರೋಬ್ಬರಿ ೧೦ ಕೋಟಿ ಸಾಲ ಮತ್ತು ೪೫ ಕ್ಕಿಂತಲೂ ಹೆಚ್ಚು ಕೇಸುಗಳಿದ್ದವು. ಸಂದೀಪ್ ಕೌರ್ ರಿಆತ್ ಆಗಿನ್ನು ೨೨ರ ಹರೆಯದ ಹುಡುಗಿ. ಆಗತಾನೆ ಬಿಸಿನೆಸ್ಸ್ ಮ್ಯಾನೇಜ್ ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ದೆಹಲಿ ಬಿಸಿನೆಸ್ಸ್ ಸ್ಕೂಲ್ನಿಂದ ಪಡೆದಾಕೆ.೨೦೦೪ ರಲ್ಲಿ ತನ್ನ ತಂದೆಯ ಅಕಾಲ ಮರಣದ ನಂತರ ಸಂದೀಪ್ ಅಕಾಲ್ ಸ್ಪ್ರಿನ್ಗ್ಸ್ ಕಂಪನಿಯ ಕಮಾನನ್ನು ತನ್ನ ಕೈಗಳಲ್ಲಿ ತೆಗೆದುಕೊಳ್ಳುತ್ತಾಳೆ. ೨೦೦೨ ರಲ್ಲಿ ಲುಧಿಯಾನದಲ್ಲೇ ಅತ್ಯಂತ ಪ್ರಸಿದ್ದಿ ಪಡೆದಿದ್ದ ಕಂಪನಿ ಅದಾಗಿತ್ತು. ಆದರೆ ಕಾಲನ ಹೊಡೆತದಿಂದ ಜರ್ಜರಿತವಾಗಿದ್ದ ಈ ಕಂಪನಿಯನ್ನು ಮಗಳ ಛಲ ನಭದೆತ್ತರೆಕ್ಕೆ ಮತ್ತೆ
ಕೊಂಡುಯ್ಯುವಲ್ಲಿ ಸಫಲವಾಯಿತು. ಛಲ ಬಿಡದ ತ್ರಿವಿಕ್ರಮನಂತೆ, ಇಡೀ ಕಂಪನಿಯನ್ನು ಒಬ್ಬಳೇ ತನ್ನ ಹೆಗಲ ಮೇಲೆ ಹೊತ್ತು, ತನ್ನ ಅಮೋಘ ಚಾಕಚಕ್ಯತೆಯಿಂದ ಮೇಲೆತ್ತಿದ ಆಕೆಯ ಸಾಮರ್ಥ್ಯಕ್ಕೆ ಸಲಾಮ್ ಎನ್ನಲೇಬೇಕು!
sandeep riat-2ತಾನು ಕಲಿತ ಬಿಸಿನೆಸ್ಸ್ ನ ಎಲ್ಲ ಪಟ್ಟುಗಳನ್ನು ಸಮರ್ಥವಾಗಿ ಉಪಯೋಗಿಸಿ, ಮಹಿಂದ್ರ ಆಂಡ್ ಮಹಿಂದ್ರ, ಟಾಟಾ ಮಾತ್ರವಲ್ಲದೆ ರಕ್ಷಣಾ ಕ್ಷೇತ್ರಕ್ಕೂ ವಾಹನಗಳ ಬಿಡಿ ಭಾಗಗಳ ಸಪ್ಲ್ಯೆಯನ್ನು ಪಡೆಯುವಲ್ಲಿ ಸಫಲಳಾಗಿದ್ದಳೆ ಸಂದೀಪ್ ಕೌರ್. ಇದೆಲ್ಲವೂ ರಾತ್ರಿ ಬೆಳಗಾಗೋದರೊಳಗೆ ನಡೆದದ್ದಲ್ಲ. ಇವೆಲ್ಲದರ ಹಿಂದೆ ಆಕೆಯ ಅಸಾಮಾನ್ಯ ಛಲ ಹಾಗೂ ವರ್ಷಗಳ ಸತತ ಪ್ರಯತ್ನವಿದೆ. ಈ ಪ್ರಯತ್ನದಿಂದಾಗಿಯೇ ಆಕೆ ಮತ್ತೆ ಒಇಮ್ ನ ಸದಸ್ಯತ್ವವನ್ನು ಮತ್ತೆ ಪಡೆಯುವಲ್ಲಿ ಯಶಸ್ವಿಯೂ ಆಗಿದ್ದಾಳೆ.
ಸಂದೀಪ್ ತನ್ನ ತಂದೆಯ ಕಂಪನಿಯನ್ನು ಹೊಸ ಉಚ್ಚ್ರಾಯಕ್ಕೆ ಕೊಂಡೊಯ್ದ ಫಲವಾಗಿ ಆಕೆಗೆ ಎಲ್.ಎಮ್.ಎ ಯಂಗ್ ಎನ್ಟಪ್ರ್ಯೂನರ್ ಪ್ರಶಸ್ತಿ ಹಾಗೂ ಸ್ವತಹ ಪಂಜಾಬಿನ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರಿಂದ ಪ್ರಮಾಣ ಪತ್ರವೂ ಲಭಿಸಿದೆ. ತನ್ನ ಅಸೀಮ ಚಾಕಚಕ್ಯತೆ, ಕರ್ತವ್ಯ ನಿಷ್ಠೆ, ಅವಿರತ ಶ್ರಮದಿಂದಾಗಿ ಇಂದು ಅಕಾಲ್ ಸ್ಪ್ರಿನ್ಗ್ಸ್ ಮತ್ತೆ ದೇಶದಲ್ಲೇ ನಂ ೧ ಕಂಪನಿಯಾಗಿ ತಲೆಯೆತ್ತಿ ನಿಂತಿದೆ.
ಆಕೆಯ ಎಲ್ಲಾ ಪ್ರಯತ್ನಗಳ ಹಿಂದೆ ಬೆನ್ನುಲುಬಾಗಿ ನಿಂತ ಆಕೆಯ ಪರಿವಾರ ಮತ್ತು ಆಕೆಯ ಜೊತೆ ಹೆಗಲಿಗೆ ಹೆಗಲು ಸೇರಿಸಿ ದುಡಿವ ಆಕೆಯ ತಮ್ಮ ಅಮ್ರಿತ್ ಪಾಲ್ ರಿಅತ್(ಕಂಪನಿಯ ಡೈರೆಕ್ಟರ್)ನ ಶ್ರಮವೂ ಇದೆ. ಇಛ್ಚಾಶಕ್ತಿಯೊಂದಿದ್ದರೆ ಮನುಷ್ಯ ಏನು ಬೇಕಾದರೂ ಸಾಧಿಸಬಹುದು. ಹಾಗೆಯೇ ಸಾಧಿಸಿದರೆ ಸಬಲ ನುಂಗಬಹುದು ಎನ್ನುವುದಕ್ಕೆ ಸಂದೀಪ್ ಕೌರ್ ಜೀವಂತ ನಿದರ್ಶನ.
No comments:
Post a Comment