Thursday 7 July 2016

ಪ್ರಾಣಿ ಬಲಿ ನಿಷೇಧ: ರಾಜ್ಯ ಸರ್ಕಾರ ಭರವಸೆ

 ಬೆಂಗಳೂರು: ಧಾರ್ಮಿಕ ಆಚರಣೆಗಳ ವೇಳೆ ಪ್ರಾಣಿ ಬಲಿ ತಡೆಗಟ್ಟುವ ಮೂಲಕ ಪ್ರಾಣಿ ಬಲಿ ತಡೆ ಕಾಯ್ದೆ 1957ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದೆ.ಚಾಮರಾಜನಗರ ತಾಲೂಕಿನ ಕೊಳ್ಳೇಗಾಲದ ಪವಾಡಪುರುಷ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ವೇಳೆ ಭಕ್ತರು ಪ್ರಾಣಿ ಬಲಿಗೆ ಮುಂದಾಗಿದ್ದು, ಪ್ರಾಣಿ ಬಲಿ ತಡೆಯುವಂತೆ ಆದೇಶ ನೀಡಲು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ
ಸಲ್ಲಿಸಿತ್ತು.ಇದರ ವಿಚಾರಣೆ ವೇಳೆ ಪ್ರಾಣಿ ಬಲಿ ತಡೆ ನಿಯಮಗಳನ್ನು ಪಾಲಿಸುವ ಕುರಿತು ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.


No comments:

Post a Comment