Thursday, 7 July 2016

ಗೋವು ಸಂತ ಸಂಗಮ ಸಮ್ಮೆಳನ ಕಾರ್ಯಕ್ರಮ

 ಪುತ್ತೂರು: ಧರ್ಮಜಾಗೃತಿ ಸಮಿತಿ – ಪುತ್ತೂರು ಇದರ ಆಶ್ರಯದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಜುಲೈ 7 ರಂದು “ಗೋವು-ಸಂತ ಸಂಗಮ” ಸಮ್ಮೆಳನ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನವು ಮಧ್ಯಾಹ್ನ 2.30 ರಿಂದ ಒಕ್ಕಲಿಗ ಗೌಡ ಸಮುದಾಯ ಭವನ, ಬೈಪಾಸ್ ರಸ್ತೆ, ತೆಂಕಿಲ, ಪುತ್ತೂರು ಇಲ್ಲಿ ನಡೆಯಲಿದೆ.ಮಾನ ಮುತ್ತುಗಳಾದ ಗೋವು ಹಾಗೂ
ಸಂತರ ಮೇಲೆ ಸಾಲು ಸಾಲು ಆಕ್ರಮಣಗಳು ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಮಲಗಿರುವ ಹಿಂದೂ ಸಮಾಜವನ್ನು ಬಡಿದೆಬ್ಬಿಸಿ, ಮತ್ತೆ ಜಾಗೃತಗೊಳಿಸುವ ಮಹಾಸಂಕಲ್ಪದೊಂದಿಗೆ “ಗೋವು-ಸಂತ ಸಂಗಮ” ನಡೆಯಲಿದೆ.

ಗೋಮಾತೆ ಹಾಗೂ ಗೋಭಕ್ತ ಸಂತರು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದು ನಮ್ಮನ್ನೆಲ್ಲ ಹರಸಲಿದ್ದಾರೆ. ಸಮಾಜದ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಗೋವು-ಸಂತರ ಅನಿವಾರ್ಯತೆಯನ್ನು ತಿಳಿ ಹೇಳಲಿದ್ದಾರೆ. ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಸ್ವಾಮೀಜಿಗಳು ಬರಲಿದ್ದು, ಪುಣ್ಯಕೋಟಿ ಮತ್ತು ಸಾಧು ಸಂತರ ಕೃಪೆಗೆ ಪಾತ್ರರಾಗುವಂತೆ ಧರ್ಮಜಾಗೃತಿ ಸಮಿತಿ – ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದೆ.


No comments:

Post a Comment