Thursday, 7 July 2016

ಪುಟ್ಟಗೌರಿ ತಾಯಿ ಸಾವನ್ನಪ್ಪಿದ್ದಕ್ಕೆ ವ್ಯಕ್ತಿಗೆ ಹೃದಯಾಘಾತ!

 ಮಂಡ್ಯ: ತಮ್ಮ ನೆಚ್ಚಿನ ನಟ, ನಟಿಯರು, ರಾಜಕಾರಣಿಗಳು ದುರಂತಕ್ಕೀಡಾಗ, ಹೆಚ್ಚು ಸಂಭ್ರಮಿಸಿದಾಗ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳೋದು, ಹೃದಯಾಘಾತಕ್ಕೊಳಗಾಗುವ ಘಟನೆ ನಡೆಯುತ್ತಿರುತ್ತದೆ...ಅದೇ ರೀತಿ ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಪುಟ್ಟಗೌರಿ ತಾಯಿ ಸಾವನ್ನಪ್ಪಿದ್ದ ದೃಶ್ಯ ನೋಡಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಡ್ಯದ ಕೆಆರ್ ಪೇಟೆ ತಾಲೂಕಿನ  ಮಾಕವಳ್ಳಿಯಲ್ಲಿ ನಡೆದಿದೆ.ಪುಟ್ಟಗೌರಿ ಮದುವೆ ಧಾರವಾಹಿ ನೋಡುತ್ತಿದ್ದ ವೇಳೆ
ಪುಟ್ಟಗೌರಿ ತಾಯಿ ಸಾವನ್ನಪ್ಪಿರುವ ದೃಶ್ಯ ಕಂಡ ವೃದ್ಧ ರಾಮೇಗೌಡರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿರುವುದಾಗಿ ಮಾಧ್ಯಮದ ವರದಿ ಹೇಳಿದೆ.No comments:

Post a Comment