Tuesday 5 July 2016

ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಕುಸಿತ!

ಶೇರುಪೇಟೆಗಳ ಸ್ಥಿರವಹಿವಾಟಿನ ಮಧ್ಯೆಯೂ ಬ್ಯಾಂಕ್ಗಳು ಮತ್ತು ರಫ್ತು ವಹಿವಾಟುದಾರರು ಡಾಲರ್ಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 8 ಪೈಸೆ ಕುಸಿತ ಕಂಡು 67.35 ರೂಪಾಯಿಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ವಿದೇಶಿ ಬಂಡವಾಳದ ಹೊರ ಹರಿವು ಹೆಚ್ಚಳವಾದ ಪರಿಣಾಮ ಬ್ಯಾಂಕುಗಳು ಮತ್ತು ರಫ್ತು ವಹಿವಾಟುದಾರರು ಡಾಲರ್ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡಿದೆ ಎಂದು
ಮಾರುಕಟ್ಟೆ ವರ್ತಕರು ತಿಳಿಸಿದ್ದಾರೆ.ಸೋಮವಾರದ ವಹಿವಾಟಿನ ಮುಕ್ತಾಯಕ್ಕೆ ಬ್ಯಾಂಕುಗಳು ಮತ್ತು ರಫ್ತು ವಹಿವಾಟುದಾರರು ಡಾಲರ್ ಮಾರಾಟಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 5 ಪೈಸೆ ಚೇತರಿಕೆ ಕಂಡು 67.27 ಕ್ಕೆ ತಲುಪಿತ್ತು.
ಏತನ್ಮಧ್ಯೆ ಶೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸಂವೇದಿ ಸೂಚ್ಯಂಕ 33.44 ಪಾಯಿಂಟ್ಗಳಷ್ಟು ಕುಸಿತ ಕಂಡು 27,245.32 ಅಂಕಗಳಿಗೆ ತಲುಪಿದೆ.

No comments:

Post a Comment