ಮೈಸೂರು: ಮರಳು ಅಕ್ರಮ ಸಾಗಣೆಗೆ ಲಂಚ ಪಡೆಯುವಂತೆ ಸರ್ಕಾರಿ ಅಧಿಕಾರಿಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್ ಹಾಗೂ ಅವರ ಸ್ನೇಹಿತ ರಾಜು ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ.3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸುನೀಲ್ ಬೋಸ್ ಪರ ವಕೀಲರು ಅರ್ಜಿ ಸಲ್ಲಿಸಿ ಖುದ್ದು ಹಾಜರಿಗೆ ಕಾಲಾವಕಾಶ ಕೋರಿದರು.ನೋಟಿಸ್ ಜಾರಿಯಾದ ಕುರಿ ತು ಸರಿಯಾದ
ಮಾಹಿತಿ ಲಭ್ಯವಾ ಗದ ಪರಿಣಾಮ ಕಕ್ಷಿದಾರ ಹಾಜ ರಾಗಲು ಸಾಧ್ಯವಾಗುತ್ತಿಲ್ಲ ಎಂದು ವಕೀಲರು ಮನವಿ ಮಾಡಿದರು. ಅರ್ಜಿ ಪರಿಶೀಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿದರು.
2010ರ ಮಾರ್ಚ್ 27ರಂದು ಲೋಕಾಯುಕ್ತ ಪೊಲೀಸರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಅಲ್ಫೋನ್ಸಿಸ್ ಮನೆ ಮೇಲೆ ದಾಳಿ ನಡೆಸಿದ್ದರು. ಅಕ್ರಮ ಗಣಿಗಾರಿಕೆ ಸಂಬಂಧ ₹ 1 ಲಕ್ಷ ಲಂಚ ಪಡೆಯುತ್ತಿದ್ದಾಗ ಅವರನ್ನು ಬಂಧಿಸಲಾಗಿತ್ತು.
ಸುನೀಲ್ ಬೋಸ್ ಹಾಗೂ ಅವರ ಸ್ನೇಹಿತ ರಾಜು ಕುಮ್ಮಕ್ಕು ನೀಡಿದ್ದರಿಂದ ಲಂಚ ಪಡೆದಿರುವುದಾಗಿ ವಿಚಾರಣೆ ವೇಳೆ ಆಲ್ಫೋನ್ಸಿಸ್ ಹೇಳಿಕೆ ದಾಖಲಿಸಿದ್ದರು. ಆದರೆ. ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸುವಾಗ ಸುನೀಲ್ ಬೋಸ್ ಹಾಗೂ ರಾಜು ಹೆಸರನ್ನು ಲೋಕಾಯುಕ್ತ ಪೊಲೀಸರು ಕೈಬಿಟ್ಟಿದ್ದರು. ಈ ಸಂಬಂಧ ಬಸವರಾಜು ಎಂಬುವವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಜುಲೈ 4ರಂದು ಖುದ್ದು ಹಾಜರಿಗೆ ನ್ಯಾಯಾಲಯ ಜೂನ್ 14ರಂದು ನೋಟಿಸ್ ಜಾರಿ ಮಾಡಿತ್ತು.
No comments:
Post a Comment