Thursday 7 July 2016

ಇಲಿ ಬೇಟೆಗಾಗಿ 5 ಲಕ್ಷ ರೂಪಾಯಿ ಟೆಂಡರ್

 ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇಲಿ, ಹೆಗ್ಗಣಗಳ ಕಾಟ ಜಾಸ್ತಿಯಾಗಿದ್ದು, ಅವು ಗಳನ್ನು ಹಿಡಿಯಲು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಕೆಲ ತಿಂಗಳ ಹಿಂದೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇಲಿಗಳು ಪ್ರಮುಖ ಕಡತಗಳನ್ನು ಹಾಳು ಮಾಡಿದ್ದವು.ನಗರ ಯೋಜನೆ ಕಚೇರಿಗಳಲ್ಲಿದ್ದ ಜೆರಾಕ್ಸ್ ಯಂತ್ರದ ತಂತಿಗಳು ಇಲಿಗಳಿಗೆ ಬಲಿಯಾಗಿದೆ. ಅದರಿಂದಾಗಿ ಕಚೇರಿಯ ಕಡತಗಳ ಜೆರಾಕ್ಸ್​ಗೆ ಹೊರಗಡೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಇದರಿಂದ
ಪಾಲಿಕೆಯ ಕಡತಗಳ ಗೌಪ್ಯತೆ ಉಳಿಯುವುದಿಲ್ಲ ಎಂಬುದನ್ನು ಅರಿತ ಅಧಿಕಾರಿಗಳು, ಇದೀಗ ಉಪಟಳ ಕೊಡುತ್ತಿರುವ ಇಲಿಗಳಿಗೆ ಪಾಠ ಕಲಿಸಲು ಮುಂದಾಗಿದ್ದಾರೆ.

2 ವರ್ಷಕ್ಕೆ 4.97 ಲಕ್ಷ ರೂ.: ಬಿಬಿಎಂಪಿ ಸಿದ್ಧಪಡಿಸಿರುವ ಕ್ರಿಯಾ ಯೋಜನೆಯಂತೆ ಕೆಲಸ ವಹಿಸಿಕೊಳ್ಳುವ ಖಾಸಗಿ ಸಂಸ್ಥೆ ಬಿಬಿಎಂಪಿ ಕೇಂದ್ರ ಕಚೇರಿ, ಟೌನ್ ಹಾಲ್, ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಇಲಿಗಳನ್ನು ಹಿಡಿಯಬೇಕಿದೆ. ಈ ಕಾರ್ಯ ನಿರ್ವಹಿಸಲು 2 ವರ್ಷಕ್ಕೆ 4.97 ಲಕ್ಷ ರೂ. ನೀಡಲಾಗುತ್ತದೆ

No comments:

Post a Comment