Thursday 7 July 2016

ಸಾರಿಗೆ ನಿಗಮಗಳ ನೌಕರರ ಸಂಬಳ ಏರಿಕೆ


ಬೆಂಗಳೂರು: ವೇತನ ಹೆಚ್ಚಳ ಕುರಿತ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಯ ಕಳೆದ 4 ವರ್ಷಗಳ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ರ್‌ಟಿಸಿ) ಸೇರಿದಂತೆ ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಯ ವೇತನವನ್ನು ಶೇ.8ರಷ್ಟು ಹೆಚ್ಚಿಸಲು ತೀರ್ಮಾನಿಸಿದೆ.ರಾಜ್ಯ ಸರ್ಕಾರದ ಈ ತೀರ್ಮಾನದಿಂದ ಕೆಎಸ್‌ಆರ್‌ಟಿಸಿ, ಈಶಾನ್ಯ ಕರ್ನಾಟಕ ಸಾರಿಗೆ ನಿಗಮ (ಎನ್‌ಈಕೆಆರ್‌ಟಿಸಿ),ವಾಯುವ್ಯ ಕರ್ನಾಟಕ ಸಾರಿಗೆ ನಿಗಮ (ಎನ್‌ಡಬ್ಲೂéಕೆಆರ್‌ಟಿಸಿ) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಒಟ್ಟು 1.15 ಲಕ್ಷ ಸಿಬ್ಬಂದಿಗೆ ಲಾಭವಾಗಲಿದೆ. ಸರ್ಕಾರಕ್ಕೆ 1131 ಕೋಟಿ ರೂ. ಹೊರೆಯಾಗಲಿದೆ.

2016ರ ಜ.1ರಿಂದ ಮುಂದಿನ 4 ವರ್ಷಕ್ಕೆ ಈ ಆದೇಶ ಅನ್ವಯವಾಗಲಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸಭೆಯ ಬಳಿಕ ಕಾನೂನು ಸಚಿವ ಟಿ.ಬಿ.ಜಯಚಂದ್ರ ವಿವರ ನೀಡಿದರು. ಆದೇ ರೀತಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೇಮಕಾತಿ ವೇಳೆ ಹೆಚ್ಚುವರಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದ 2,257 ಚಾಲಕರಿಗೆ ನೇಮಕಾತಿ ಆದೇಶ ಪತ್ರ ನೀಡುವ ಕುರಿತು ಸಭೆಯಲ್ಲಿ ನಿರ್ಣಯ
ತೆಗೆದುಕೊಳ್ಳಲಾಯಿತು ಎಂದರು.

ವಸತಿ ಯೋಜನೆಗೆ ಮಾರ್ಗಸೂಚಿ: ವಿವಿಧ ವಸತಿ ಯೋಜನೆಗಳ ಫ‌ಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಆಗುತ್ತಿರುವ
ವಿಳಂಬ ತಪ್ಪಿಸುವ ಉದ್ದೇಶದಿಂದ ಶಾಸಕರ ನೇತೃತ್ವದ ವಿಚಕ್ಷಣ ಸಮಿತಿಯು ಒಂದು ತಿಂಗಳಳೊಗೆ ಫ‌ಲಾನುಭವಿಗಳ
ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಒಪ್ಪಿಗೆ ನೀಡಲಾಗಿದೆ (ಡೀಮ್ಡ್ ಸ್ಯಾಂಕ್ಷನ್‌) ಎಂದು ಪರಿಗಣಿಸಲಾಗುವುದು ಎಂದು ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-1 ಮತ್ತು 2ರಡಿ ನಿರ್ಮಿಸಲಾಗಿರುವ 106 ಪುನರ್ವಸತಿ ಕೇಂದ್ರಗಳಲ್ಲಿ ಬಾಕಿ
ಹಾಗೂ ಮುಂದುವರಿದ ಕಾಮಗಾರಿಗಳಿಗೆ 100 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಲಾಯಿತು ಎಂದು ತಿಳಿಸಿದರು.

ಇತರ ನಿರ್ಣಯಗಳು
 ಮೈಸೂರು ಆನೆ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್‌ ನಿರ್ಮಿಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ
ಬರುವ ಖಾಸಗಿ ಜಮೀನು ಖರೀದಿಸಲು ಅರಣ್ಯ ಇಲಾಖೆಗೆ 20 ಕೋಟಿ ರೂ. ಮಂಜೂರು.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬ್ಯಾಲದಹಳ್ಳಿ ಗ್ರಾಮದ ಸರ್ವೆ ನಂಬರ್‌ 23ರಲ್ಲಿ ಕಾಗಿನೆಲೆ ಗುರುಪೀಠಕ್ಕೆ 4 ಎಕರೆ ಜಮೀನು ಮಂಜೂರು.  ರಾಮನಗರ ಜಿಲ್ಲೆ ಮಾಗಡಿಯಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸಲು ಹಾಗೂ ಕನಕ ಭವನ ನಿರ್ಮಾಣ ಮಾಡಲು ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ 6 ಎಕರೆ ಜಮೀನು ಮಂಜೂರು.

 ಶ್ರೇಣಿಯ ಪ್ರಶಸ್ತಿಗಾಗಿ ರಾಜ್ಯದ ಗಣ್ಯರ ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಅಂತಿಮ
ಅಧಿಕಾರವನ್ನು ಮುಖ್ಯಮಂತ್ರಿಯ ವರಿಗೆ ನೀಡಲು ನಿರ್ಧಾರ.  ಮುಂದೆ ಪ್ರತಿ ಗುರುವಾರ ಸಚಿವ ಸಂಪುಟ ಸಭೆ ನಡೆಸಲು ನಿರ್ಧಾರ.



No comments:

Post a Comment