Thursday 7 July 2016

ಶೇ.100 ಎಫ್ ಡಿಐ ಭಾರತಕ್ಕೇನು ಲಾಭ?

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ದೇಶದ ಆರ್ಥಿಕತೆ ಅಭಿವೃದ್ಧಿ ದೃಷ್ಟಿಯಿಂದ ರಕ್ಷಣೆ, ವೈಮಾನಿಕ, ಔಷಧ, ಸಿಂಗಲ್‌ಬ್ರ್ಯಾಂಡ್‌ ರಿಟೇಲ್‌, ಪ್ರಸಾರ ಕ್ಷೇತ್ರಗಳಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುವು ಮಾಡಿದೆ. ಸರ್ಕಾರದ ಈ ಮಹತ್ವದ ತೀರ್ಮಾನದಿಂದ ಭಾರತದ ಆರ್ಥಿಕತೆಗೆ ಹೇಗೆ ಪ್ರಯೋಜನವಾಗುತ್ತದೆ? ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ದೇಶೀಯ ಆವಿಷ್ಕಾರಗಳು, ಕಂಪನಿಗಳಿಗೆ ಮಾರಕ ಎಂಬ ಕೂಗು ಯಾಕಾಗಿ? ಎಂಬ ಕುರಿತ
ಮಾಹಿತಿಗಳು ಇಲ್ಲಿವೆ.

ಏನಿದು ಎಫ್ ಡಿಐ ?
ಅಥವಾ ವಿದೇಶಿ ನೇರ ಬಂಡವಾಳ ಹೂಡಿಕೆ ಅಂದರೆ ಒಂದು ದೇಶದಲ್ಲಿ ವಿದೇಶಿ ಕಂಪನಿ ಅಥವಾ ಒಂದು ದೇಶದ ನಿರ್ದಿಷ್ಟ ಸಂಸ್ಥೆ ಬಂಡವಾಳವನ್ನು ಹೂಡಿಕೆ ಮಾಡುವುದು. ಇದು ಒಂದು ದೇಶದಲ್ಲಿನ ಕಂಪನಿಯೊಂದು ಮಾಡುವ ಪರೋಕ್ಷ ಹೂಡಿಕೆಗಿಂತ ಭಿನ್ನ. ಪರೋಕ್ಷ ಹೂಡಿಕೆಯಲ್ಲಿ ಒಂದು ದೇಶದ ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾದ ಷೇರುಗಳ ಮೇಲೆ ವಿದೇಶಿ ಕಂಪನಿಗಳು ಹೂಡಿಕೆ ಮಾಡಿದರೆ, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ನೇರ ಕಂಪನಿಯ ಮೇಲೆಯೇ ಹೂಡಿಕೆ ಮಾಡುತ್ತದೆ. ಅರ್ಥಾತ್‌ ಅದರ ಹಿಡಿತವನ್ನು ತೆಗೆದುಕೊಳ್ಳಬಹುದು. ಸಾಮಾನ್ಯವಾಗಿ ಮುಕ್ತ ಆರ್ಥಿಕತೆ ನಿಯಮಗಳು, ಕೌಶಲ್ಯ ಹೊಂದಿದ ಕಾರ್ಮಿಕರ ಲಭ್ಯತೆ, ಬೆಳವಣಿಗೆಗೆ ಪೂರಕ ವಾತಾವರಣಗಳು ವಿದೇಶಿ ನೇರ ಹೂಡಿಕೆಗಳನ್ನು ಹೆಚ್ಚು ಆಕರ್ಷಿಸುತ್ತವೆ. 

ಭಾರತದಲ್ಲಿ ಯಾವ ರೀತಿ ವಿದೇಶಿ ಕಂಪನಿಗಳು ಹೂಡಿಕೆ ಮಾಡಬಹುದು? 
„ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಲವು ನಿಯಮಗಳಡಿ ದೇಶದಲ್ಲಿ ಅನುವು ಮಾಡಿ ಕೊಡಲಾಗಿದೆ. „ ಕಂಪನೀಸ್‌ ಆ್ಯಕ್ಟ್ 1956ರ ಪ್ರಕಾರ ದೇಶದ ಒಂದು ಕಂಪನಿಯೊಂದಿಗೆ ಒಪ್ಪಂದ ಮಾಡಿ ಕೊಳ್ಳುವುದು ಅಥವಾ ಪ್ರತ್ಯೇಕವಾಗಿ ತನ್ನದೇ ಅಂಗಸಂಸ್ಥೆಯೊಂದನ್ನು ಸ್ಥಾಪಿಸಿವುದು „ ವಿದೇಶಿ ವಿನಿಮಯ ನಿರ್ವಹಣೆ (ಭಾರತದಲ್ಲಿ ಶಾಖೆಗಳ ಅಥವಾ ಇತರ ಉದ್ಯಮ ಕೇಂದ್ರಗಳ ನಿಯಮಾವಳಿ 2000) ಅನ್ವಯ ವಿದೇಶಿ ಕಂಪನಿಗಳಿಗೆ ತನ್ನ ಶಾಖೆಗಳು, ಅಥವಾ ಯೋಜನಾ ಕಚೇರಿಯನ್ನುತೆರೆಯಲು ಅವಕಾಶ. 

ಎಫ್ಡಿಐನಿಂದ ಒಳ್ಳೇದೇನು‌?
„ ಆರ್ಥಿಕಾಭಿವೃದ್ಧಿ: ದೇಶದ ಆರ್ಥಿಕ ಸ್ಥಿತಿಯನ್ನು ಮತ್ತೆ ಹಳಿಗೆ ತರುವಲ್ಲಿ ಸರ್ಕಾರಗಳು ಹಿಂದಿನಿಂದಲೂ ಶ್ರಮಿಸುತ್ತಿವೆ. ಇದಕ್ಕಾಗಿ ಅವುಗಳು ಎಫ್ ಡಿಐ ಮೊರೆ ಹೋಗಿವೆ. ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡುವ ಮೂಲಕ ವಿತ್ತೀಯ ಸ್ಥಿರತೆ ಕಾಯ್ದುಕೊಳ್ಳುವುದು ಉದ್ದೇಶ. „ ಸರಬರಾಜು ಸರಪಳಿ ಅಭಿವೃದ್ಧಿ: ದೇಶದಲ್ಲಿ ಸರಬರಾಜು ಸರಪಳಿ ಅಭಿವೃದ್ಧಿ. ಈ ಮೂಲಕ ಪೂರೈಕೆ-ಬೇಡಿಕೆ ವಲಯಗಳ ಸಮತೋಲನ. „ ಕೃಷಿ ವಲಯದ ಚೇತರಿಕೆ: ಕೃಷಿ ಉತ್ಪನ್ನಗಳು, ಉಪ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ನಿರೀಕ್ಷೆ. ರಫ್ತುಗೆ ಪ್ರೇರಣೆ ಉದ್ದೇಶ. „ ಸ್ಮರ್ಧಾತ್ಮಕ ವೇದಿಕೆ, ಹಣದುಬ್ಬರ ನಿಯಂತ್ರಣ: ವಿವಿಧ ದೇಶಗಳ ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಡುವುದರಿಂದ, ದರ-ಗುಣಮಟ್ಟಗಳಲ್ಲಿ ಸ್ಪರ್ಧೆ, ಹಲವು ಆಯ್ಕೆ. ಅತ್ಯುತ್ತಮ ಬೆಲೆಗೆ ಲಭ್ಯದ ನಿರೀಕ್ಷೆ. ಇದೇ ವೇಳೆ ಹಣದುಬ್ಬರ ನಿಯಂತ್ರಣದ ವಿಶ್ವಾಸ „ ತಂತ್ರಜ್ಞಾನಕ್ಕೆ ಮಣೆ: ಅತ್ಯಾಧುನಿಕ ತಂತ್ರಜ್ಞಾನಗಳು ದೇಶವನ್ನು ಪ್ರವೇಶಿಸುತ್ತವೆ. ಉತ್ಪಾದನೆ ದ್ವಿಗುಣಗೊಳ್ಳುತ್ತದೆ.

„ ಉದ್ಯೋಗ ಲಭ್ಯತೆ: ಹಲವು ಕಂಪನಿಗಳು, ಉತ್ಪಾದನಾ ಕಂಪನಿಗಳು ಲಗ್ಗೆ ಇಡುವುದರಿಂದ ಹೆಚ್ಚಿನ ಪ್ರಮಾಣದ ಉದ್ಯೋಗ ಲಭ್ಯತೆ, ಕೌಶಲ್ಯ ಹೊಂದಿದ ನೌಕರರಿಗೆ ವರದಾನ. 

ಯಾವೆಲ್ಲ ಕ್ಷೇತ್ರದಲ್ಲಿ ಹೂಡಿಕೆಗೆ ಅವಕಾಶ ನೀಡಲಾಗಿದೆ?
ಮೇಕ್‌ ಇನ್‌ ಇಂಡಿಯಾ ಅಡಿಯಲ್ಲಿ ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಇವುಗಳಲ್ಲಿ ಪ್ರಮುಖ ಕ್ಷೇತ್ರಗಳು ಇವು.

„ ಮೂಲಸೌಕರ್ಯ: ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ಯ ಶೇ.10ರಷ್ಟು ಮೂಲ ಮೂಲಸೌಕರ್ಯ ಚಟುವಟಿಕೆಯದ್ದು. ಮೂಲಸೌಕರ್ಯ ವೃದ್ಧಿಗೆ ಕೇಂದ್ರ ಸರ್ಕಾರ ತ್ವರಿತವಾಗಿ ಯತ್ನಿಸುತ್ತಿದೆ. 2012-17ನೇ ಅವಧಿಯಲ್ಲಿ ಒಟ್ಟು 20,400 ಕೋಟಿ ರೂ. ಹೂಡಿಕೆ ಆಕರ್ಷಿಸಲು ಉದ್ದೇಶಿಸಿದ್ದು ಇದೀಗ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಬಾಗಿಲು ತೆರೆದಿದೆ.

„ ವಾಹನೋದ್ಯಮ: ದೇಶದ ವಾಹನೋದ್ಯಮ ಕ್ಷೇತ್ರ 2015ರ ಹೊತ್ತಿಗೆ ಶೇ.85 ರಷ್ಟು ಬೆಳವಣಿಗೆ ಕಂಡಿತ್ತು. ವಿಶ್ವದಲ್ಲಿ ವಾಹನೋದ್ಯಮದ 7ನೇ ಅತಿ ದೊಡ್ಡ ದೇಶ ಭಾರತ. ದೇಶದ ಜಿಡಿಪಿಯಲ್ಲಿ ಇದರದ್ದು ಶೇ.7ರಷ್ಟು ಪಾಲಿದೆ. ಈ ಕಾರಣಕ್ಕೆ ಶೇ.100ರಷ್ಟು ಎಫ್ಡಿಐಗೆ ಅನುವು ಮಾಡಿಕೊಡಲಾಗಿದೆ. 

„ ಔಷಧ: ವಿಶ್ವದಲ್ಲೇ 3ನೇ ಅತಿದೊಡ್ಡ ಔಷಧ ಮಾರುಕಟ್ಟೆ ಭಾರತ, ಅತಿ ದೊಡ್ಡ ಔಷಧ ಉತ್ಪಾದಕ ರಾಷ್ಟ್ರವೂ ಹೌದು. 2015ರಿಂದ 2020ರ ಅವಧಿಯಲ್ಲಿ ಔಷಧ ಕ್ಷೇತ್ರ ಶೇ.20ರಷ್ಟು ಬೆಳವಣಿಗೆಯ ನಿರೀಕ್ಷೆ ಇದೆ. ಶೇ.100ರಷ್ಟು ಎಫ್ಡಿಐಗೆ ಈ ಕ್ಷೇತ್ರದಲ್ಲಿ ಅವಕಾಶ ಕೊಡಲಾಗಿದೆ.

„ ಸೇವೆ: ಸೇವಾ ಕ್ಷೇತ್ರದಲ್ಲಿ ಈ ಮೊದಲು ಭಾರತ ಶೇ. 26ರಷ್ಟು ಎಫ್ಡಿಐಗೆ ಅನುಮತಿ ನೀಡಿತ್ತು. 2015ರಲ್ಲಿ ಇದನ್ನು ಶೇ.49ಕ್ಕೇರಿಸಲಾಗಿದೆ. ಬ್ಯಾಂಕಿಂಗ್‌, ವಿಮೆ, ಹೊರಗುತ್ತಿವೆ, ಸಂಶೋಧನೆ ಮತ್ತು ಅಭಿವೃದ್ಧಿ ಇದರಡಿ ಬರುತ್ತವೆ.

„ ರೈಲ್ವೇ: ದೇಶದ ಬಹುಮುಖ್ಯ ಸಂಪರ್ಕ ಕೊಂಡಿ. ಆಧು ನೀಕರಣ ಉದ್ದೇಶದಿಂದ ಶೇ.100ರಷ್ಟು ಎಫ್ಡಿಐಗೆ ಅವಕಾಶ ನೀಡಲಾಗಿದೆ. ಲಕ್ಷ ಕೋಟಿ ರೂ. ಗಳಿಗೂ ಮಿಕ್ಕಿ ಹೂಡಿಕೆಯ ಗುರಿ ಹೊಂದಲಾಗಿದೆ

„ ರಾಸಾಯನಿಕ: ವಿಶ್ವದ ಪ್ರಮುಖ ಉತ್ಪಾದಕ ರಾಷ್ಟ್ರಗಳಲ್ಲೊಂದು. 2015ರ ಸಾಲಿನಲ್ಲಿ 1.08 ಲಕ್ಷ ಕೋಟಿ ರೂ.ಗಳಷ್ಟು ರಾಸಾಯನಿಕರಗಳನ್ನು ಭಾರತ ರಫ್ತು ಮಾಡಿದೆ. ಬೆಳೆಯುತ್ತಿರುವ ಈ ಕ್ಷೇತ್ರದಲ್ಲೂ ಶೇ.100ರಷ್ಟು ಎಫ್ಡಿಐಗೆ ಅನುವು ಮಾಡಲಾಗಿದೆ.

„ ವಸ್ತ್ರೋದ್ಯಮ: ಭಾರತದ ರμ¤ನಲ್ಲಿ ಶೇ.11ರಷ್ಟು ಪಾಲು ವಸ್ತ್ರೋದ್ಯಮದ್ದು. 2013-14ರಲ್ಲಿ ಈ ಕ್ಷೇತ್ರದಲ್ಲಿ ಎಫ್ ಡಿಐ ಅನ್ನು ಶೇ.97ಕ್ಕೇರಿಸಿತ್ತು. ಈಗ ಶೇ.100ಕ್ಕೇರಿಸಲಾಗಿದೆ. 2021ರ ವೇಳೆಗೆ 95 ಸಾವಿರ ಕೋಟಿಗೇರಿಸುವ ಗುರಿ. 

„ ವಾಯುಯಾನ: ತೀವ್ರ ಬೆಳವಣಿಗೆ ಹೊಂದುತ್ತಿರುವ ಕ್ಷೇತ್ರ. ಈ ಮೊದಲು ಶೇ.49ರಷ್ಟು ಎಫ್ಡಿಐಗೆ ಅವಕಾಶ ನೀಡಲಾಗಿತ್ತು. ಈಗ ಶೇ.100ಕ್ಕೇರಿಸಲಾಗಿದೆ.

ಎಫ್ಡಿಐನಿಂದ ಕೆಟ್ಟದ್ದೇನು?
ವಿದೇಶಿ ಕಂಪನಿಗಳ ಪಾರಮ್ಯ: ದೇಶದ ಆರ್ಥಿಕರಂಗವನ್ನು ವಿದೇಶಿ ಕಂಪನಿಗಳೇ ಆಳುವ ಸಾಧ್ಯತೆ
ಇದೆ. ಪ್ರತಿಯೊಂದಕ್ಕೂ ಅವುಗಳನ್ನೇ ಅವಲಂಬಿಸಬೇಕಾಗಬಹುದು. ಇದು ದೇಶಕ್ಕೆ ಮಾರಕ!

 „ ಮಾರುಕಟ್ಟೆ ವಿದೇಶೀಯರ ಕೈಗೆ: ವಿದೇಶೀಯರ ಕೈಲಿ ವಿದೇಶಿ ಕಂಪನಿಗಳು ಇರುವುದರಿಂದ ಸಹಜವಾಗಿ ಮಾರುಕಟ್ಟೆಯಲ್ಲಿ ಅವರ ಕೈ ಮೇಲಾಗಲಿದೆ. ಪರೋಕ್ಷವಾಗಿ ಅವರಿಗೆ ಬೇಕಾದಂತೆ ಮಾರುಕಟ್ಟೆಯಲ್ಲಿ ಆಟ ಆಡಬಹುದು!

„ ಸರ್ಕಾರದ ಮೇಲೆ ಹಿಡಿತ: ಹಣ, ಅಧಿಕಾರ ವಿದೇಶಿ ಕಂಪನಿಗಳಲ್ಲಿ ಕೇಂದ್ರೀಕೃತವಾಗುವುದರಿಂದ ಪರೋಕ್ಷ ವಾಗಿ ಸರ್ಕಾರದ ಮೇಲೆ ಹಿಡಿತ. ನೀತಿ ರೂಪಣೆಗಳನ್ನು ತಮಗೆ ಬೇಕಾದಂತೆ ಮಾಡಿಸಿಕೊಳ್ಳಬಹುದು. „ ದೇಶೀಯ ತಂತ್ರಜ್ಞಾನಕ್ಕೆ ಹೊಡೆತ: ದೇಶದಲ್ಲಿನ ಆವಿಷ್ಕಾರಗಳು, ತಂತ್ರಜ್ಞಾನ ವೃದ್ಧಿ ಕೆಲಸಗಳಿಗೆ ಹೊಡೆತ. ವಿದೇಶದಿಂದಲೇ ಬರುವುದರಿಂದ ಅದಕ್ಕೇ ಜೋತು ಬೀಳಬಹುದು. ದೇಶೀಯ ತಂತ್ರಜ್ಞಾನಗಳಿಗೆ ನಿರಾಕರಣೆ ಆಗುವ ಸಾಧ್ಯತೆ ಇದೆ.

 „ ಸಣ್ಣ ಉದ್ಯಮ, ರೈತರಿಗೆ ಹೊಡೆತ
ದೊಡ್ಡ ವಿದೇಶಿ ಕಂಪನಿಗಳ ಎದುರು ದೇಶದ ಸಣ್ಣ ಉದ್ಯಮಗಳಿಗೆ ಪೈಪೋಟಿ ನೀಡಲು ಸಾಧ್ಯವಾಗದೇ ಇರಬಹುದು. ಬೆಲೆ ಸಮರ, ತಾಂತ್ರಿಕತೆಯಲ್ಲಿ ಅವುಗಳು ದೇಶೀಯ ಕಂಪನಿಗಳಿಗೆ ಸಡ್ಡು ಹೊಡೆಯಬಹುದು. ಹಾಗೆ‌ಯೇ, ಕೃಷಿ ಕ್ಷೇತ್ರದಲ್ಲೂ ಕಂಪನಿಗಳು ಹೇಳಿದ ರೀತಿ ಕೃಷಿ ಮಾಡಬೇಕಾಗಬಹುದು. ಅವರು ಹೇಳಿದ ದರಕ್ಕೇ ಉತ್ಪನ್ನ ಮಾರಾಟ ಮಾಡಬೇಕಾಗಬಹುದು!


No comments:

Post a Comment