Wednesday 6 July 2016

ಹಂಪಿ ವಿ.ವಿ.ಯಲ್ಲಿ ಸಂಶೋಧನಾ ಕಮ್ಮಟ


 ಹೊಸಪೇಟೆ: ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಯು.ಜಿ.ಸಿ. ಪ್ರಾಯೋಜಿತ ಮಹಿಳಾ ಅಧ್ಯಯನ ಕೇಂದ್ರ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರಿಸರ್ಚ್  ಪ್ರಾಯೋಜಕತ್ವದ ಹತ್ತು ದಿನಗಳ ಸಮಾಜ ವಿಜ್ಞಾನಗಳ ಸಂಶೋಧನಾ ವಿಧಾನದ ಕಮ್ಮಟ ಏರ್ಪಡಿಸಲಾಗಿತ್ತು.ಕಮ್ಮಟದಲ್ಲಿ ಪ್ರೊ. ವೈ.ಜೆ. ರಾಜೇಂದ್ರ ಅವರು ಕಾರ್ಯಾತ್ಮಕ ಸಂಶೋಧನೆ ಕುರಿತು ಹಾಗೂ ನಮ್ಮ ದೇಶದಲ್ಲಿ ಸಂವಿಧಾನಗಳ ಮಾಹಿತಿ ನೀಡಿದರು.ಸಮಾಜ ವಿಜ್ಞಾನ ಸಂಶೋಧನೆ ಯಲ್ಲಿ
ವೈಜ್ಞಾನಿಕತೆ ಇರುವುದಾದರೆ, ನಾವು ಮಾಡುವ ಸಂಶೋಧನೆಗಳಲ್ಲಿ ಭಾರತೀಯ ಸಂವಿಧಾನದ ಆಶಯಗಳಿರ ಬೇಕು. ಸಂಶೋಧನೆಗಳು ವಸ್ತುನಿಷ್ಠ ಆಗಬೇಕಾದರೆ ಪ್ರಸ್ತುತ ವಿದ್ಯಮಾನ ಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಪ್ರೊ. ಶೌಕತ್ ಅಜೀಮ್ ಅವರು ಭಾಗವಹಿಸುವಿಕೆ ಸಂಶೋಧನೆ ಕುರಿತು ಮಾತನಾಡಿದರು. ಕಮ್ಮಟದ ನಿರ್ದೇಶಕ ಡಾ. ಚಂದ್ರಶೇಖರ್ ಆರ್.ವಿ. ಪಾಲ್ಗೊಂಡಿದ್ದರು.

No comments:

Post a Comment