Wednesday 6 July 2016

ವಿಶ್ವವಿಖ್ಯಾತ 139 ನೇ ಪುರಿ ಜಗನ್ನಾಥ ರಥಯಾತ್ರೆ ಆರಂಭ;


ಪುರಿ (ಒಡಿಶಾ):ಇಲ್ಲಿ ವಿಶ್ವವಿಖ್ಯಾತ 12ನೇ ಶತಮಾನದ ಜಗನ್ನಾಥ ಮಂದಿರದಲ್ಲಿ 139 ನೇ ಜಗನ್ನಾಥ ರಥಯಾತ್ರೆ  ಬುಧವಾರದಿಂದ ಆರಂಭವಾಯಿತು.ವಿಡಿಯೋ ನೋಡಿ ಬಲಭದ್ರ ಮತ್ತು ಸುಭದ್ರಾ ದೇವಿಯ ವಾರ್ಷಿಕ ಯಾತ್ರೆಯ ಮುಕ್ತಾಯದ ಅಂಗವಾಗಿ ಗುಡಿಚಾ ದೇವಸ್ಥಾನದಲ್ಲಿ  ವಿಜ್ರಂಭಣೆಯಿಂದ ರಥಯಾತ್ರೆ ನಡೆಯುತ್ತಿದೆ. ವಿಶ್ವಖ್ಯಾತಿಯ ರಥಯಾತ್ರೆಯನ್ನು ಕಣ್‌ ತುಂಬಿಕೊಳ್ಳಲು ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿಗೆ ಆಗಮಿಸಿದ್ದಾರೆ. 9 ದಿನಗಳ ಕಾಲ
ಸಾಂಪ್ರದಾಯಿಕ ಆಚರಣೆಗಳೊಂದಿಗೆ ನಡೆಯುವ ರಥಯಾತ್ರೆ ಜುಲೈ 14 ರಂದು ಬಹುದಾ ಯಾತ್ರೆಯೊಂದಿಗೆ  ಅಂತ್ಯಗಳೊಳ್ಳಲಿದೆ. ರಥಯಾತ್ರೆ ಸಾಂಗವಾಗಿ ನಡೆಯಲು ಜಿಲ್ಲಾಡಳಿತ ಭದ್ರತೆ ಸೇರಿದಂತೆ ಸಕಲ ಸುವ್ಯವಸ್ಥೆ ಕೈಗೊಂಡಿದೆ.

ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯನ್ನು ಕೂರಿಸುವ  ಬೃಹದಾಕಾರದ ಸಾಲಂಕೃತ ಮೂರು ರಥಗಳನ್ನು ಸಾವಿರಾರು ಭಕ್ತರು ಎಳೆಯುವ ಅತ್ಯಾಕರ್ಷಕ ದೃಶ್ಯ ವಿಶೇಷವಾಗಿದೆ. 

ರಥಯಾತ್ರೆಯ ವೇಳೆ ಪುರಿ ನಗರ ವ್ಯಾಪ್ತಿಯಲ್ಲಿ ಯಾವುದೇ ಅಸಹಜ ಸಾವು ಸಂಭವಿಸಿದರೆ, ಇಲ್ಲ ಯಾವುದೇ ಅವಘಡದಲ್ಲಿ ಮೃತ ಪಟ್ಟರೆ 5 ಲಕ್ಷ ರೂಪಾಯಿ ವಿಮೆ ಘೋಷಿಸಲಾಗಿದೆ. 

ಪುರಿ ಮಾತ್ರವಲ್ಲದೆ ಪಶ್ಚಿಮ ಬಂಗಾಳದ ಸೇರಾಮ್‌ ಪುರ್‌ನ ಮಹೇಶ್‌ನಲ್ಲಿ, ಗುಜರಾತ್‌ನ ಅಹಮದಾಬಾದ್‌ನ ಜಮಾಲ್‌ ಪುರದ ಜಗನ್ನಾಥ ದೇಗುಲಗಳಲ್ಲಿಯೂ ವಿಜೃಂಭಣೆಯ ರಥಯಾತ್ರೆ ನಡೆಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ರಥಯಾತ್ರೆಯ ಸಂದರ್ಭದಲ್ಲಿ ಭಕ್ತರಿಗೆ ಶುಭಕೋರಿದ್ದಾರೆ.

No comments:

Post a Comment