ಬೀಜಿಂಗ್: ಭಾರತದ ಗಡಿ ಪ್ರದೇಶದಲ್ಲಿ ರೈಲು ಮಾರ್ಗ ನಿರ್ಮಾಣ ಸೇರಿದಂತೆ ಬಾಂಗ್ಲಾದೇಶದಲ್ಲಿ ಒಟ್ಟು 6 ರೈಲು ಯೋಜನೆಗಳಿಗಾಗಿ ಕಡಿಮೆ ಬಡ್ಡಿ ದರದಲ್ಲಿ 9 ಬಿಲಿಯನ್ ಡಾಲರ್ (ಸುಮಾರು 60 ಸಾವಿರ ಕೋಟಿ ರೂ.) ಸಾಲ ನೀಡಲು ಚೀನಾ ಚಿಂತಿಸುತ್ತಿದೆ ಎಂದು ಚೀನಾ ಸರ್ಕಾರಿ ಪತ್ರಿಕೆ ವರದಿ ಮಾಡಿದೆ.ಬಾಂಗ್ಲಾದೇಶ ಚೀನಾದಿಂದ ಸಾಲವಾಗಿ ಪಡೆಯುವ ಹಣವನ್ನು ಢಾಕಾ ಮತ್ತು ಪ್ರಮುಖ ಕೈಗಾರಿಕಾ ಪ್ರದೇಶಗಳ ನಡುವೆ ರೈಲು ಮಾರ್ಗ ನಿರ್ಮಿಸಲು ಮತ್ತು ಭಾರತದ ಗಡಿಯಲ್ಲಿ
ರೈಲು ಮಾರ್ಗ ನಿರ್ಮಿಸಲು ಬಳಕೆ ಮಾಡಿಕೊಳ್ಳಲಿದೆ. ಬಾಂಗ್ಲಾದೇಶ ಇದಕ್ಕಾಗಿ 30 ಬಿಲಿಯನ್ ಡಾಲರ್ಗಳ ಬೃಹತ್ ಯೋಜನೆಯನ್ನು ರೂಪಿಸಿದ್ದು, ಚೀನಾ ಬಾಂಗ್ಲಾದೇಶಕ್ಕೆ ಅಗತ್ಯ ನೆರವು ನೀಡಲಿದೆ ಎಂದು ಚೀನಾ ಸರ್ಕಾರದ ಗ್ಲೋಬಲ್ ಟೈಮ್್ಸ ವರದಿ ಮಾಡಿದೆ.
ಬಾಂಗ್ಲಾದೇಶದಲ್ಲಿ ಚೀನಾ ಬಂಡವಾಳ ಹೂಡಿಕೆ ಮಾಡುವುದು ಭಾರತ ಮತ್ತು ಚೀನಾದ ನಡುವೆ ಘರ್ಷಣೆಗೆ ಕಾರಣವಾಗುತ್ತಿದೆ. ಆದರೆ ಚೀನಾ ಏಷ್ಯಾದಾದ್ಯಂತ ವ್ಯಾಪಾರ ವಹಿವಾಟು ವಿಸ್ತರಿಸಲು ಅನುಕೂಲವಾಗಲಿ ಎಂದು ಮತ್ತು ಸಿಲ್ಕ್ ರೋಡ್ ಯೋಜನೆಗೆ ಅನುಕೂಲವಾಗಲಿ ಎಂದು ಬಾಂಗ್ಲಾದೇಶದ ರೈಲು ಯೋಜನೆಯಲ್ಲಿ ಹಣ ತೊಡಗಿಸುತ್ತಿದೆ. ಬಾಂಗ್ಲಾದೇಶದೊಂದಿಗೆ ಚೀನಾ ಸಂಬಂಧ ವೃದ್ಧಿಯಾಗುತ್ತಿರುವುದಕ್ಕೆ ಭಾರತದ ಆಕ್ಷೇಪವಿದೆ. ಆದರೆ ಬಾಂಗ್ಲಾದೇಶ ಚೀನಾದೊಂದಿಗೆ ಆರ್ಥಿಕ ಸಂಬಂಧ ವೃದ್ಧಿಸಿಕೊಂಡರೆ ಅದರಲ್ಲಿ ತಪ್ಪೇನಿದೆ ಎಂದು ಗ್ಲೋಬಲ್ ಟೈಮ್್ಸ ತನ್ನ ವರದಿಯಲ್ಲಿ ತಿಳಿಸಿದೆ.
No comments:
Post a Comment