Thursday 7 July 2016

ಐಟಿ: ಭಾರತದಲ್ಲಿ 6 ಲಕ್ಷ ಉದ್ಯೋಗ ಕಡಿತ?

 ನವದೆಹಲಿ: ಮಾಹಿತಿ ತಂತ್ರಜ್ಞಾನ (ಐಟಿ) ವಲಯದಲ್ಲಿ 6.4 ಲಕ್ಷ ಉದ್ಯೋಗಗಳು ಭಾರತದಲ್ಲಿ ಕಡಿತಗೊಳ್ಳುವ ಅಪಾಯವಿದೆ ಎಂದು ಅಮೆರಿಕದ ಅಧ್ಯಯನ ವರದಿಯೊಂದು ಎಚ್ಚರಿಸಿದೆ. ಅಮೆರಿಕದ ಸಂಶೋಧನಾ ಸಂಸ್ಥೆಯಾದ ಎಚ್‌ಎಫ್ಎಸ್‌ ರೀಸರ್ಚ್‌ ಈ ವರದಿ ಬಿಡುಗಡೆ ಮಾಡಿದ್ದು, ಮುಂದಿನ 5 ವರ್ಷದಲ್ಲಿ ಭಾರತದ ಐಟಿ ಮತ್ತು ಬಿಪಿಒ ವಲಯದಲ್ಲಿ ದೊಡ್ಡ ರಿಸ್ಕ್ಗಳು ಎದುರಾಗಲಿವೆ ಎಂದಿದೆ.ಆಟೋಮೇಶನ್‌ ಮತ್ತು ರೋಬೋಟಿಕ್ಸ್‌ ತಂತ್ರಜ್ಞಾನಗಳು ಈಗ ಜನಪ್ರಿಯವಾಗುತ್ತಿವೆ. ಇದರಿಂದಾಗಿ
ಐಟಿ ಉದ್ಯೋಗಿಗಳ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಈ ಅಪಾಯದಿಂದ ಪಾರಾಗುವುದು ಹೇಗೆ ಎಂಬ ಸವಾಲು ಮುಂದಿನ ದಿನಗಳಲ್ಲಿ ಸೃಷ್ಟಿಯಾಗಲಿದೆ ಎಂದು ವರದಿ ಎಚ್ಚರಿಸಿದೆ. ಅಮೆರಿಕದಲ್ಲೂ ಮುಂದಿನ 5 ವರ್ಷದಲ್ಲಿ ಇದೇ ಕಾರಣದಿಂದ 7.7 ಲಕ್ಷ ಮತ್ತು ಬ್ರಿಟನ್‌ನಲ್ಲಿ 2 ಲಕ್ಷ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಇದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

No comments:

Post a Comment