Thursday 7 July 2016

ಟೆಕ್ಸ್ಟ್ಟು ಸ್ಪೀಚ್

  ಮಾಹಿತಿ ತಂತ್ರಜ್ಞಾನದ ಅನುಕೂಲಗಳನ್ನು ನಮಗೆ ಮುಟ್ಟಿಸುವ ಕಂಪ್ಯೂಟರ್, ಸ್ಮಾರ್ಟ್​ಫೋನ್ ಮುಂತಾದ ಸಾಧನಗಳತ್ತ ಒಮ್ಮೆ ನೋಡಿದರೆ ಈ ಪ್ರಪಂಚದಲ್ಲಿ ಅದೆಷ್ಟು ಪ್ರಮಾಣದ ಪಠ್ಯವನ್ನು ಡಿಜಿಟಲೀಕರಿಸಲಾಗಿದೆ ಎನ್ನುವುದು ಗೊತ್ತಾಗುತ್ತದೆ. ಅಂತರಜಾಲದಲ್ಲಂತೂ ನಮ್ಮ ಸಂಪರ್ಕಕ್ಕೆ ಬರುವ ಮಾಹಿತಿಯಲ್ಲಿ ಬಹುದೊಡ್ಡ ಭಾಗ ಪಠ್ಯರೂಪದಲ್ಲೇ ಇರುತ್ತದೆ. ಇಷ್ಟೆಲ್ಲ ಪಠ್ಯ ನಮ್ಮ ಕಣ್ಣಮುಂದೆ ಕಾಣುವ ಬದಲು ಧ್ವನಿರೂಪದಲ್ಲಿ ನಮ್ಮ ಕಿವಿಯನ್ನು ತಲುಪುವಂತಿದ್ದರೆ ಅದನ್ನೆಲ್ಲ
ಅರ್ಥಮಾಡಿಕೊಳ್ಳುವುದು ಇನ್ನಷ್ಟು ಸುಲಭವಾಗುತ್ತಿತ್ತು ಅಲ್ಲವೆ? ಈ ಆಲೋಚನೆಯ ಪರಿಣಾಮವೇ ಪಠ್ಯವನ್ನು ಧ್ವನಿಗೆ ಪರಿವರ್ತಿಸುವ (ಟೆಕ್ಸ್ಟ್ ಟು ಸ್ಪೀಚ್) ತಂತ್ರಜ್ಞಾನ. ಡಿಜಿಟಲೀಕರಿಸಿದ ಪಠ್ಯವನ್ನು ಧ್ವನಿರೂಪದಲ್ಲಿ ನಮಗೆ ‘ಓದಿ ಹೇಳುವುದು’ ಈ ತಂತ್ರಜ್ಞಾನದ ವೈಶಿಷ್ಟ್ಯ ಕಂಪ್ಯೂಟರ್ ಅಥವಾ ಮೊಬೈಲಿನ ಪರದೆಯ ಮೇಲೆ ಪುಟಗಟ್ಟಲೆ ಪಠ್ಯವನ್ನು ಓದಲು ಬೇಜಾರು ಎನ್ನುವವರಿಂದ ಹಿಡಿದು ದೃಷ್ಟಿ ಸವಾಲಿನ ದೆಸೆಯಿಂದ ಓದಲು ಸಾಧ್ಯವಿಲ್ಲದವರ ತನಕ ಈ ತಂತ್ರಜ್ಞಾನ ಎಲ್ಲರಿಗೂ ನೆರವಾಗಬಲ್ಲದು. ಪಠ್ಯರೂಪದ ಕಡತಗಳನ್ನು ಓದಲು ನಾವು ಬಳಸುವ ‘ಅಡೋಬಿ ರೀಡರ್’ನಂತಹ ಹಲವು ತಂತ್ರಾಂಶಗಳಲ್ಲಿ ಟೆಕ್ಸ್ಟ್ ಟು ಸ್ಪೀಚ್ ಸೌಲಭ್ಯ ಇದೆ (ಕೆಲವು ಭಾಷೆಗಳಿಗೆ ಮಾತ್ರ). ಅಷ್ಟೇ ಅಲ್ಲ, ಪಠ್ಯವನ್ನು ಧ್ವನಿಗೆ ಪರಿವರ್ತಿಸುವ ಪ್ರತ್ಯೇಕ ತಂತ್ರಾಂಶಗಳು ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿವೆ. ಇಂತಹುದೊಂದು ಮುಕ್ತ ತಂತ್ರಾಂಶವಾದ ‘ಈ-ಸ್ಪೀಕ್’ನ ಕನ್ನಡ ಆವೃತ್ತಿಯನ್ನು ‘ಕಣಜ’ ಅಂತರಜಾಲ ಜ್ಞಾನಕೋಶದಲ್ಲಿ ಡೌನ್​ಲೋಡ್ ಮಾಡಿಕೊಳ್ಳಬಹುದು. ಇದನ್ನು ಕನ್ನಡಿಸಿದ ಸಾಧನೆ ಸ್ವತಃ ದೃಷ್ಟಿಸವಾಲು ಎದುರಿಸುತ್ತಿರುವ ಟಿ.

No comments:

Post a Comment