Tuesday, 5 July 2016

ಬ್ರಾಂಡೆಡ್‌ ಔಷಧಿಗಳ ಮೋಹಕ್ಕೆ ಕಡಿವಾಣ ಹಾಕಿ

ಬೀದರ್‌: ವೈದ್ಯರು ಬ್ರಾಂಡೆಡ್‌ ಕಂಪೆನಿಗಳ ದುಬಾರಿ ದರದ ಬ್ರಾಂಡೆಡ್ ಔಷಧಿಗಳನ್ನು ರೋಗಿಗಳಿಗೆ ಬರೆದು ಕೊಡುವ ಪದ್ಧತಿಗೆ ಕಡಿವಾಣ ಹಾಕಬೇಕು ಎಂದು  ಜಿಲ್ಲಾಧಿಕಾರಿ ಅನುರಾಗ ತಿವಾರಿ ಹೇಳಿದರು.ಕೇಂದ್ರ ಔಷಧ ನಿಯಂತ್ರಣ ಇಲಾಖೆಯ ವತಿಯಿಂದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ  ಭಾನುವಾರ ಆರಂಭಿಸಲಾದ ಜನೌಷಧಿ ಮಳಿಗೆ ಉದ್ಘಾಟನೆ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜನೌಷಧಿಯಲ್ಲಿ  ಔಷಧಿಗಳು ಲಭ್ಯವಿದ್ದರೂ ಜಿಲ್ಲಾ ಆಸ್ಪತ್ರೆಯ ವೈದ್ಯರು ಬ್ರಾಂಡೆಡ್‌ ಕಂಪೆನಿಯನ್ನು 

ಉಲ್ಲೇಖಿಸಿ  ಔಷಧ ಚೀಟಿ ಬರೆದು ಕೊಡಬಾರದು. ಔಷಧ ಕಂಪೆನಿ ಉಲ್ಲೇಖಿಸಿ ಮಾತ್ರೆ ಚೀಟಿ ಬರೆಯುವ ವೈದ್ಯರ ವಿರುದ್ಧ  ನಿರ್ದಾಕ್ಷ್ಯಿಣ್ಯ ಕ್ರಮ ಕೈಗೊಳ್ಳಲಾಗುವುದು

ನಾಮಾಂಕಿತ ಔಷಧ ಕಂಪೆನಿಗಳ ಪ್ರತಿನಿಧಿಗಳು ಸಾಮಾನ್ಯವಾಗಿ ವೈದ್ಯರನ್ನು ಭೇಟಿ ಒಂದಿಷ್ಟು ಉಡುಗೊರೆ ಕೊಟ್ಟು ರೋಗಿಗಳಿಗೆ ನಮ್ಮ ಕಂಪೆನಿಯ ಮಾತ್ರೆ ಹಾಗೂ ಔಷಧಿ ಬರೆದು ಕೊಡುವಂತೆ ಮನವಿ ಮಾಡುತ್ತಾರೆ. ಜನೌಷಧಿ ಮಳಿಗೆಯಲ್ಲಿನ ಔಷಧಿಗಳ ಬೆಲೆಗೆ ಹೋಲಿಸಿದರೆ ಬ್ರಾಂಡೆಡ್‌ ಕಂಪೆನಿಯ ಔಷಧಿಗಳ ಬೆಲೆ ಮೂರರಿಂದ ನಾಲ್ಕು ಪಟ್ಟು ಅಧಿಕವಾಗಿರುತ್ತದೆ. ಇದರಿಂದ ರೋಗಿಗಳು ಆರ್ಥಿಕ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳ ವೈದ್ಯರು ಬಡ ರೋಗಿಗಳ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಜನೌಷಧಿ ಮಳಿಗೆಯಲ್ಲಿ ಲಭ್ಯ ಇರುವ ಔಷಧಿಗಳನ್ನೇ ಉಲ್ಲೇಖಿಸಿ ಚೀಟಿ ಬರೆದು ಕೊಡಬೇಕು ಎಂದು ಸೂಚಿಸಿದರು.

No comments:

Post a Comment