Thursday 7 July 2016

ಸ್ಮಾರ್ಟ್ ಸಿಟಿ ಯೋಜನೆಗೆ ಬೆಂಗಳೂರು ಸ್ಪರ್ಧೆ

  ನವದೆಹಲಿ: ಸ್ಮಾರ್ಟ್ ಸಿಟಿ ಯೋಜನೆಯ ಪಟ್ಟಿಗೆ ಹೊಸದಾಗಿ 9 ನಗರಗಳನ್ನು ಸೇರ್ಪಡೆಗೊಳಿಸಿದ್ದು, ಉದ್ದೇಶಿತ ಸ್ಮಾರ್ಟ್ ಸಿಟಿಗಳ ಸಂಖ್ಯೆ 109ಕ್ಕೆ ಏರಿದೆ. ಇದರ ಜತೆಗೆ ಸ್ಮಾರ್ಟ್​ಸಿಟಿ ಯೋಜನೆಯಲ್ಲಿ ಸೇರ್ಪಡೆ ಯಾಗುವ ಅವಕಾಶ ಬೆಂಗಳೂರಿಗೂ ಲಭ್ಯವಾಗಿದೆ. ಸ್ಮಾರ್ಟ್​ಸಿಟಿ ಯೋಜನೆ ಯಲ್ಲಿ ಸೇರ್ಪಡೆಯಾಗಲು ಮುಂದಿನ ಹಂತದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಟನಾ, ತಿರುವನಂತಪುರಂ, ಬೆಂಗಳೂರು, ಅಮರಾವತಿ, ಇಟಾನಗರ್, ಗ್ಯಾಂಗ್ಟಕ್ ನಗರಗಳು ಭಾಗವಹಿಸಬಹುದು ಎಂದು ಕೇಂದ್ರ
ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಹೇಳಿದ್ದಾರೆ. ಈವರೆಗೆ ರಾಜ್ಯ ರಾಜಧಾನಿ ಸ್ಮಾರ್ಟ್​ಸಿಟಿ ಯೋಜನೆಯಿಂದ ಹೊರಗಿತ್ತು. ಜಮ್ಮು-ಕಾಶ್ಮೀರ ಮತ್ತು ಉತ್ತರ ಪ್ರದೇಶದ ಎರಡು ನಗರಗಳನ್ನು ಸೇರಿಸಲು ಅವಕಾಶ ನೀಡಿದ್ದಾರೆ. ಕರ್ನಾಟಕದಿಂದ ಈಗಾಗಲೇ ಮಂಗಳೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ತುಮಕೂರು ಮತ್ತು ದಾವಣಗೆರೆ ನಗರಗಳು ಪಟ್ಟಿಯಲ್ಲಿವೆ.


No comments:

Post a Comment