Thursday, 7 July 2016

ಮೋದಿ 5 ದಿನಗಳ ಆಫ್ರಿಕಾ ಪ್ರವಾಸ: ಆಹಾರ ಭದ್ರತೆ, ಇಂಧನ ಕ್ಷೇತ್ರದಲ್ಲಿ ಮಹತ್ವದ ಒಪ್ಪಂದಗಳ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಐದು ದಿನಗಳ ಆಫ್ರಿಕಾ ಪ್ರವಾಸ ಆರಂಭಗೊಂಡಿದೆ. ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿ ನರೇಂದ್ರ ಮೋದಿ ಆಫ್ರಿಕಾ ರಾಷ್ಟ್ರಗಳಿಗೆ ಪ್ರಧಾನಿ ಭೇಟಿ ನೀಡುತ್ತಿದ್ದು, ಮಹತ್ವ ಪಡೆದುಕೊಂಡಿದೆ.ಪ್ರವಾಸದ ವೇಳೆ ಆಹಾರ ಭದ್ರತೆ, ಇಂಧನ ಕ್ಷೇತ್ರದಲ್ಲಿ ಮಹತ್ವದ ಒಪ್ಪಂದ ಏರ್ಪಡುವ ನಿರೀಕ್ಷೆಗಳಿದ್ದು, ಮೊಜಾಂಬಿಕ್, ದಕ್ಷಿಣ ಆಫ್ರಿಕಾ, ತಾಂಜಾನಿಯಾ ಮತ್ತು ಕೀನ್ಯಾಗಳಿಗೆ ಭೇಟಿ ನೀಡಲಿರುವ ಮೋದಿ ಮಹತ್ವದ ದ್ವಿಪಕ್ಷೀಯ
ತುಕತೆ ನಡೆಸಲಿದ್ದಾರೆ.ಈಗಾಗಲೇ ಆಪ್ರಿಕಾದ ಮೊಜಾಂಬಿಕ್ ನಗರ ತಲುಪಿರುವ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ದೊರೆತಿದೆ. ಪ್ರವಾಸಕ್ಕೂ ಮೊದಲು ಮಾತನಾಡಿರುವ ಪ್ರಧಾನಿ ಮೋದಿ ಭಾರತ-ಆಫ್ರಿಕಾ ನಡುವಿನ ಬಾಂಧವ್ಯ ವೃದ್ಧಿಗೆ ಇದು ನೆರವಾಗಲಿದೆ.
ಸಾಗರೋತ್ತರ ಭದ್ರತೆ, ವಹಿವಾಟು, ಹೂಡಿಕೆ, ಕೃಷಿ ಹಾಗೂ ಆಹಾರ ಭದ್ರತೆ ವಿಚಾರದಲ್ಲಿ ಆಫ್ರಿಕಾ ರಾಷ್ಟ್ರಗಳು ಮತ್ತು ಭಾರತದ ಸಹಕಾರ ವೃದ್ಧಿಸಲಿದೆ ಎಂದು ಹೇಳಿದ್ದಾರೆ. ಪ್ರಧಾನಿ ಭೇಟಿ ವೇಳೆ ಮೊಜಾಂಬಿಕ್‌‌ನಿಂದ ಮತ್ತಷ್ಟು ಧಾನ್ಯ ಆಮದು ಮಾಡುವ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ.

No comments:

Post a Comment