ಬಾಗಲಕೋಟೆ: ಪಈದ್–ಉಲ್–ಫಿತ್ರ್ ಆಚರಣೆಗೆ ಜಿಲ್ಲೆಯಲ್ಲಿ ಮುಸ್ಲಿಮ್ ಸಮು ದಾಯದಿಂದ ಭರದ ಸಿದ್ಧತೆ ನಡೆದಿದೆ. ನಗರದ ಮಾರುಕಟ್ಟೆಯಲ್ಲಿ ಸುಗಂಧ ದ್ರವ್ಯ ಮತ್ತು ಹಬ್ಬದ ವಿಶೇಷ ಊಟಕ್ಕೆ ಬೇಕಾಗುವ ಸಾಮಗ್ರಿ ದಿಜೋರಾಗಿದೆ.ಮುಸ್ಲಿಮರು ಸಮುದಾಯದವರು ರಮ್ಜಾನ್ ತಿಂಗಳ ಪೂರ್ತಿ ಪ್ರಾರ್ಥನೆ ಹಾಗೂ ಉಪವಾಸದ ನಂತರ ಹಬ್ಬದ ಸಂಭ್ರಮದಲ್ಲಿ ಗಿಯಾಗುತ್ತಾರೆ. ಅಮಾವಾಸ್ಯೆ ಮುಗಿದ ಬಳಿಕ ಚಂದ್ರ ದರ್ಶನದ ನಂತರ ಹಬ್ಬದ ಸಂಭ್ರಮ ಇಮ್ಮಡಿಯಾಗುತ್ತದೆ.ಕಳೆದೊಂದು
ವಾರದಿಂದ ಈದ್ ಹಬ್ಬಕ್ಕಾಗಿ ನಗರದ ಟಾಂಗಾ ನಿಲ್ದಾಣ ದಿಂದ ಹಿಡಿದು ವಲ್ಲಭಬಾಯಿ ವೃತ್ತದ ರಸ್ತೆಯ ಮಧ್ಯದಲ್ಲಿ ತಾತ್ಕಾಲಿಕವಾಗಿ ಹಾಕಿರುವ ಮಳಿಗೆ ಮತ್ತು ಕೈಗಾಡಿಗಳಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.
ವರ್ಷದ ದೊಡ್ಡ ಮಾಸವಾಗಿರುವ ಪವಿತ್ರ ರಮ್ಜಾನ್ ಅನ್ನು ಮುಸ್ಲಿಂ ಸಮುದಾಯದವರು ವಿಶಿಷ್ಟವಾಗಿ ಆಚರಿಸುತ್ತಾರೆ. ಈದ್ ಹಬ್ಬದಲ್ಲಿ ಹೊಸ ಬಟ್ಟೆ, ಪಾದರಕ್ಷೆ, ತರಹೇವಾರಿ ಕೈಬಳೆ, ಕೈಗಡಿಯಾರ, ಹಬ್ಬಕ್ಕೆ ಬೇಕಾಗುವ ಹೊಸ ಪಾತ್ರೆ, ಸುರಕುಂಬಾ ಸಿದ್ದಪಡಿ ಸಲು ಬೇಕಾಗುವ ಕೊಬ್ಬರಿ, ಚಾರುಳ್ಳಿ, ಪಿಸ್ತಾ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಸಾವಂಗಿ, ಗರಂ ಮಸಾಲಾ ಮತ್ತಿತರ ವಸ್ತುಗಳ ಖರೀದಿಯಲ್ಲಿ ಗ್ರಾಹಕರು ತೊಡಗಿದ್ದರು.
ಹಬ್ಬದ ಕಾರಣ 10ಕ್ಕೂ ಹೆಚ್ಚು ಮಳಿಗೆಗಳಲ್ಲಿ ತರಹೇವಾರಿ ಮೆಹಂದಿ ಮಾರಾಟವಾಗುತ್ತಿವೆ. ಪಂಕಾ ಮಸೀದಿ ಬಳಿ ಹಾಕಿರುವ ಸುಗಂಧ ದ್ರವ್ಯದ ಮಳಿಗೆಗಳಲ್ಲಿ ₹10 ರಿಂದ ₹ 300ವರೆಗೆ ವೈವಿಧ್ಯಮಯ ಸುಗಂಧ ದ್ರವ್ಯ ಮಾರಾಟ ಮಾಡಲಾಗುತ್ತಿದೆ. ಮುಂಬೈ, ಅರಬ್ ದೇಶಗಳಿಂದ ತರುವ ಸುಗಂಧ ದ್ರವ್ಯಕ್ಕೆ ಭಾರಿ ಬೇಡಿಕೆ ಇದೆ ಎನ್ನುತ್ತಾರೆ ವ್ಯಾಪಾರಿ ಮಹಮದ್.
‘ಮಳೆ ಇಲ್ಲದೇ ರೈತರ ಕೈಯಲ್ಲಿ ದುಡ್ಡಿಲ್ಲ, ಉಸುಕು ಪೂರೈಕೆ ಬಂದ್ ಆಗಿ ಸೆಂಟ್ರಿಗ್ ಕೆಲ್ಸ ನಿಂತ ಬಿಟ್ಟಾವರಿ, ದುಡಿಯಾಕ ಕೆಲ್ಸಾನ ಇಲ್ಲದಂತಾ ಸ್ಥಿತಿ ಐತರೀ ಹಿಂಗಾದರೆ ಹಬ್ಬ ಎಲ್ಲಿಂದ ಜೋರ ಮಾಡಾಕ ಆಗತೈತ್ರಿ. ಹಬ್ಬಾ ಬಿಡಾಕಂತೂ ಆಗಲ್ಲ. ಇದ್ದರಲ್ಲೇ ಸ್ವಲ್ಪ ಚೆನ್ನಾಗಿ ಮಾಡಬೇಕಂತೀವಿರಿ ಎಂದು ಸೆಂಟ್ರಿಂಗ್ ಕಾರ್ಮಿಕ ಮೆಹಬೂಬ್ ಡೋಣಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಳೆದ ವರ್ಷಕ್ಕಿಂತ ಈ ಬಾರಿ ವ್ಯಾಪಾರ ಕಡಿಮೆಯಾಗಿದೆ. ಬರಗಾಲ ದಿಂದಾಗಿ ಹಳ್ಳಿಯಿಂದ ಬರುವವರ ಸಂಖ್ಯೆ ಕಡಿಮೆಯಾಗಿದೆ. ನಗರದ ಜನ ಮಾತ್ರ ಹಬ್ಬದ ಸಾಮಗ್ರಿಗಳನ್ನು ಹೆಚ್ಚು ಖರೀದಿ ಮಾಡುತ್ತಿದ್ದಾರೆ’ ಎಂದು ಬಂದೇನವಾಜ್ ಡೋಣಿ ಹೇಳಿದರು.
ಮುಧೋಳ ವರದಿ
ಪವಿತ್ರವಾದ ರಂಜಾನ್ ಸೌಹಾರ್ದ ಹಬ್ಬ. ಇದ್ದದ್ದನ್ನು ಇಲ್ಲದವರಿಗೆ ಹಂಚುವ ಮೂಲಕ ಈ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುವ ಮೂಲಕ ಸಹಬಾಳ್ವೆಯ ಸಂದೇಶ ಪಸರಿಸಬೇಕು ಎಂದು ಹುಬ್ಬಳ್ಳಿಯ ಮೌಲಾನಾ ಅಲ್ತಫ್ ಸೈಯದ್ ಸಾಹೇಬ್ ಹೇಳಿದರು.
ಅವರು ನಗರದ ಜಾಮಿಯಾ ಮಜಿದ್‌ದಲ್ಲಿ ಶಬ್ಬೆಖದರ, ತಾಖರಾತ್ ಅಂಗವಾಗಿ ರಾತ್ರಿ ಜಾಗರಣೆ ಪ್ರಾರ್ಥನೆ ಯಲ್ಲಿ ಮಾತನಾಡಿದರು.
ಮೌಲಾನಾ ನದೀಮ್ ನೂರಿ ಮಾತನಾಡಿ, ಮಹ್ಮದ್ ಪೈಗಂಬರ ಅವರ ತತ್ವಾದರ್ಶ ಮೈಗೂಡಿಸಿಕೊಂಡರೆ ನೆಮ್ಮದಿಯ ಜೀವನ ಸಾಗಿಸಬಹುದು ಎಂದರು. ಮುನ್ನಾ ಮೋಮಿನ್, ಶಬ್ಬೀರ್ ಕಿಸ್ತಿ, ಇಲಾವರ್ ಧಾರವಾ ಡಕರ, ಇಸ್ಮಾಯಿಲ್ ಕುಡಚಿ, ಮೊಬಾ ರಕ್ ಕಿಸ್ತಿ, ಖಾಜಾ ಅಮೀನ್ ಮೋಮಿನ್, ಮೌಲಾ ಸಾಬ್, ಮಹೆ ಬೂಬ್ ಮೋಮಿನ್ ಭಾಗವಹಿಸಿದ್ದರು.
ಇಳಕಲ್ ವರದಿ
ರಂಜಾನ್ ನಿಮಿತ್ತ ಇಲ್ಲಿಯ ಮದೀನಾ ಮಸೀದಿ ಆವರಣದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಇಫ್ತಾರ್ ಕೂಟ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಅವರು ಮಾತ ನಾಡಿ, ‘ಮಾನವ ಕುಲದ ಕಲ್ಯಾಣಕ್ಕಾಗಿ ಮುಸ್ಲಿಂರು ಪವಿತ್ರ ರಂಜಾನ್ ಹಬ್ಬ ದಂದು ಉಪವಾಸ ಆಚರಿಸುತ್ತಾರೆ. ಇಂತಹ ಸಮಾರಂಭದಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ನೀಡಿರುವುದು ಸೌಭಾಗ್ಯವೇ ಸರಿ. ನಮ್ಮ ತಂದೆಯವರ ಕಾಲದಿಂದಲೂ ಇಫ್ತಾರ್ ಕೂಟ ನಡೆ ಯುತ್ತಿದೆ. ನಮ್ಮ ಕುಟುಂಬದ ಮೇಲಿರುವ ಮುಸ್ಲಿಂ ಬಾಂಧವರ ಋಣ ತೀರಿಸಲು ನಮಗಿದೊಂದು ಸದಾವಕಾಶ ಅಷ್ಟೇ’ ಎಂದು ಹೇಳಿದರು.
ಲಿಮ್ರಾ ವೆಲ್ಫೇರ್ ಅಸೋಸಿಯೆಷನ್ ಅಧ್ಯಕ್ಷ ರಜಾಕ್ ತಟಗಾರ ಮಾತನಾಡಿ ‘ಶಾಸಕ ವಿಜಯಾನಂದ ಕಾಶಪ್ಪನವರ ಸಮಾಜದಲ್ಲಿ ಏಕತೆ, ಭಾವೈಕ್ಯ ಮೂಡಿ ಸಲು ಶ್ರಮಿಸುತ್ತಾರೆ. ರಮ್ಜಾನ್ ತಿಂಗಳಲ್ಲಿ ಉಪವಾಸ ಮಾಡುವವರ ಜತೆಗೆ ಇಫ್ತಾರ್ ಆಯೋಜಿಸುವರು ದೇವರ ಅನುಗ್ರಹಕ್ಕೆ ಪಾತ್ರರಾಗುವರು. ಇಂತಹ ಸತ್ಕಾರ್ಯದಿಂದ ಶಾಸಕರು ಜನಪ್ರಿಯತೆ ಗಳಿಸಲು ಸಾಧ್ಯವಾಗಿದೆ’ ಎಂದರು.
ಮೌಲಾನಾ ನೂರಮಹಮ್ಮದ ರಬ್ಬಾನಿ ಮಾತನಾಡಿ. ‘ಸೂರ್ಯೋದಯ ದಿಂದ ಸೂರ್ಯಾಸ್ತದವರೆಗೆ ಆಹಾರ, ನೀರು ಸೇವಿಸದೇ ಉಪವಾಸ ಆಚರಿಸುವುದೇ ರೋಜಾ. ಉಪವಾಸ ದಿಂದ ಹಸಿವು ಎಂತಹ ಸಂಕಟ ವನ್ನುಂಟು ಮಾಡುತ್ತದೆ ಎಂಬ ಅರಿವೂ ಶ್ರೀಮಂತರಿಗೂ ಬರುತ್ತದೆ. ಆಗ ಬಡವ ರಿಗೆ ನೆರವಾಗುತ್ತಾರೆ.
ಪವಾಸ ಎಲ್ಲ ಧರ್ಮಗಳಲ್ಲೂ ಕಾಣುತ್ತೇವೆ. ಉಪ ವಾಸದಿಂದ ನಮ್ಮೊಳಗಿನ ಪಂಚೇಂದ್ರೀಯಗಳನ್ನು ನಿಯಂತ್ರಿಸಲು ಸಾಧ್ಯ’ ಎಂದು ಹೇಳಿದರು.
ದರ್ಗಾದ ಗುರು ಗಳಾದ ಫೈಸಲ್ ಪಾಷಾ ಆರೀಫ್ ಸಜ್ಜಾದ ನಸೀನ್, ನಗರಸಭೆ ಅಧ್ಯಕ್ಷೆ ತೇಜಮ್ಮ ವದ್ದಿ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ನಾರಾಯಣಪ್ಪ ಪತ್ತಾರ, ಗ್ರಾನೈಟ್ ಉದ್ದಮಿ ರಾಜು ಬೋರಾ ಕೆ.ಎಚ್. ತಟಗಾರ, ಮಲೀಕ್‌ಸಾಬ ಬೀಳಗಿ, ಗೌಸ್ ಮಾಗಿ ಉಪಸ್ಥಿತರಿದ್ದರು.
***
ಮಳೆ–ಬೆಳೆ ಚೆನ್ನಾಗಿದ್ದರೆ ಎಲ್ಲರೂ ಸೇರಿ ಹಬ್ಬವನ್ನು ಸಂಭ್ರಮದಿಂದ ಆಚರಿಸ ಬಹುದು, ಈ ವರ್ಷ ಮಳೆ ಕೈಕೊಟ್ಟಿದೆ, ಕೈಯಲ್ಲಿ ಕೆಲ್ಸ ಇಲ್ಲ. ಆದರೂ ಹಬ್ಬ ಆಚರಿಸುತ್ತಿದ್ದೇವೆ
ಮೆಹಬೂಬ್ ಡೋಣಿ
ಸೆಂಟ್ರಿಂಗ್ ಕಾರ್ಮಿಕ
No comments:
Post a Comment