ದಾವಣಗೆರೆ: ದಿನಗೂಲಿ ಪದ್ಧತಿಯನ್ನು ರದ್ದುಪಡಿಸಿ, ಸೇವೆ ಕಾಯಂಗೊಳಿಸುವ ಕುರಿತಂತೆ ಸರ್ಕಾರದ ಗಮನ ಸೆಳೆಯುವುದಾಗಿ ತೋಟಗಾರಿಕೆ, ಎಪಿಎಂಸಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.ನಗರದಲ್ಲಿ ಭಾನುವಾರ ತಮ್ಮನ್ನು ಭೇಟಿ ಮಾಡಿದ ದಿನಗೂಲಿ ನೌಕರರ ಮಹಾ ಮಂಡಳದ ನಿಯೋಗವು ರಾಜ್ಯದಲ್ಲಿ ಗುತ್ತಿಗೆ ಪದ್ಧತಿ ರದ್ದುಗೊಳಿಸಿ, ನೌಕರಿ ಕಾಯಂಗೊಳಿಸಲು ಒತ್ತಾ ಯಿಸಿಮನವಿ ಅರ್ಪಿಸಿದ ಹಿನ್ನೆಲೆ ಸಚಿವರು ಶೀಘ್ರವೇ ಗುತ್ತಿಗೆ ನೌಕರರಿಗೆ ಸರ್ಕಾರ ಶುಭ ಸುದ್ದಿ
ನೀಡಲಿದೆ ಎಂದರು.ಈಗಾಗಲೇ ದಿನಗೂಲಿ ಪದ್ಧತಿ ರದ್ದುಪಡಿಸಿ, ಸೇವೆ ಕಾಯಂಗೊಳಿಸಬೇಕೆಂಬ ಮನವಿಯೂ ಸರಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದಷ್ಟುಬೇಗನೆ ಸರ್ಕಾರ ನಿಮಗೆಲ್ಲರಿಗೂ ಸಿಹಿ ಸುದ್ದಿ ನೀಡಲಿದೆ. ಆ ದಿನಗಳೂ ದೂರವಿಲ್ಲ ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಎನ್‌ಪಿಎಸ್ ಸಂಘದವರು ಹಿಂದಿನ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿದರು. ವಸತಿ ಶಾಲಾ ನೌಕರರ ಸಂಘದಿಂದ ನೌಕರರ ಸೇವೆ ಕಾಯಂಗೊಳಿಸಲು ಮನವಿ ಅರ್ಪಿಸಲಾಯಿತು. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಸ್ವಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ನೇರ ಸಾಲ ಇತರೆ ಸೌಲಭ್ಯ ಒದಗಿಸಲು ಶಿಫಾರಸ್ಸು ಮಾಡುವಂತೆ ಮನವಿ ಅರ್ಪಿಸಿದರು.
ಸ್ವಯಂ ಉದ್ಯೋಗ, ಆರ್ಥಿಕ ನೆರವು, ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ, ಕೆಲಸಕ್ಕೆ ಶಿಫಾರಸ್ಸು ಪತ್ರ, ಸೇವೆ ಕಾಯಂಗೊಳಿಸುವುದು, ನಗರ, ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯ, ಕುಡಿಯುವ ನೀರು, ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸಂಘ-ಸಂಸ್ಥೆ, ಸಂಘಟನೆಗಳು, ನೌಕರರು, ದಿನಗೂಲಿ ನೌಕರರು ತಮ್ಮ ಮನವಿಗಳನ್ನು ಸಚಿವರಿಗೆ ಸಲ್ಲಿಸಿದರು.
ದಾವಣಗೆರೆ ತಾ. ಬೆಳವನೂರು ಗ್ರಾಮದ ಅನುದಾನಿತ ಶಾಲೆ ಆಡಳಿತ ಮಂಡಳಿಯು ಶಾಲಾ ಕೊಠಡಿ ನಿರ್ಮಾಣಕ್ಕೆ ನೆರವು ನೀಡುವಂತೆ, ಹೊಸ ಬಿಸಲೇರಿ ಗ್ರಾಮಸ್ಥರು ವಿವಿಧ ಸಮಸ್ಯೆ ಪರಿಹರಿಸಲು ಡಿಸಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.
No comments:
Post a Comment