Tuesday, 5 July 2016

"ಸರ್ವರಿಗೂ ಶಿಕ್ಷಣ ಸಿಗಲು ಸಂಘ ಸಂಸ್ಥೆಗಳು ಶ್ರಮಿಸಬೇಕು''

ಕೋಲಾರ: ಸರ್ವರಿಗೂ ಶಿಕ್ಷಣ ಸಿಗುವಂತಾ ಗಲು ಸಂಘ ಸಂಸ್ಥೆಗಳು ಶ್ರಮಿಸಬೇಕು ಮತ್ತು ಶಿಕ್ಷಣದಿಂದ ಮಾತ್ರ ಸಮಗ್ರ ಪ್ರಗತಿ ಎಂಬುದನ್ನು ಸಮಾಜಕ್ಕೆ ಮನದಟ್ಟು ಮಾಡಬೇಕು ಎಂದು ಅಂತಾರಾಷ್ಟ್ರೀಯ ವಾಸವಿ ಕ್ಲಬ್‌ನ ಉಪಾಧ್ಯಕ್ಷ ಎ.ಎಸ್‌.ರಾಮಲಿಂಗಗುಪ್ತ ಮನವಿ ಮಾಡಿದರು.ತಾಲೂಕಿನ ಹರಟಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಾಸವಿ ಸಂಸ್ಥೆಯಿಂದ ಪುಸ್ತಕ,ಲೇಖನ ಸಾಮಗ್ರಿವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು
. ಸಮಾಜ ಸೇವಾ ಕಾರ್ಯಗಳಿಗೆ ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳಬೇಕು. ಶಿಕ್ಷಣಸಾರ್ವತ್ರಿಕರಣದಲ್ಲಿ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣ ಪ್ರೇಮಿಗಳಾಗಬೇಕು. ನಿಸ್ವಾರ್ಥ ಸೇವೆಯಿಂದ ನೆಮ್ಮದಿ ಸಾಧ್ಯವೆಂಬ ಸತ್ಯವನ್ನು ಅರಿಯಬೇಕು ಎಂದರು. 

ವಾಸವಿ ಕ್ಲಬ್‌ನ ಅಧ್ಯಕ್ಷ ವಿ.ಪಿ. ಸೋಮ ಶೇಖರ್‌, ಶಾಲಾ ಅಡುಗೆಯವರಿಗೆ ಸೀರೆ ವಿತರಿಸಿ, ಸಮಾಜ ಸೇವೆಯನ್ನು ದೃಷ್ಟಿಯಲ್ಲಿ ರಿಸಿಕೊಂಡು ಕನಿಷ್ಠ ಮಟ್ಟದಿಂದ ಆರಂಭಿಸಿ ಸೇವಾ ಕಾರ್ಯಕ್ರಮಗಳನ್ನು ನಡೆಸಿದಾಗ ಮನಸ್ಸಿಗೆ ನೆಮ್ಮದಿ ಕಾಣಲು ಸಾಧ್ಯವಾಗಿದ್ದು, ಈ ದಿಸೆಯಲ್ಲಿ ಸರ್ಕಾರಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳನ್ನು ಗುರ್ತಿಸಿ ವಿವಿಧ ರೀತಿಯ ವಸ್ತುಗಳನ್ನು ಮತ್ತು ಸಸಿ ನೆಡುವ ಮೂಲಕ ಶಾಲಾ ವಾತಾವರಣವನ್ನು ಸುಂದರಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಮಾಡಲಾಗುತ್ತಿದೆ ಎಂದರು. 

ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿದ ವಾಸವಿ ಕ್ಲಬ್‌ನ ಉಪ ರಾಜ್ಯಪಾಲ ಸುಬ್ಬರಾಜು, ಸಂಘ ಸಂಸ್ಥೆಗಳು ನೀಡುವ ಪುಸ್ತಕ ಪರಿಕರಗಳನ್ನು ಸ್ವೀಕರಿಸಿ ಓದುವ ಮತ್ತು ಬರೆಯುವ ಆಸಕ್ತಿಯನ್ನು ವಿದ್ಯಾರ್ಥಿಗಳು ಹೊಂದಬೇಕು ಎಂದರು.

ಮುಖ್ಯೋಪಾಧ್ಯಾಯ ಜಿ. ಶ್ರೀನಿವಾಸ್‌, ಶುದ್ಧ ಕುಡಿಯುವ ನೀರು ವಿದ್ಯಾರ್ಥಿಗಳು  ಉಪಯೋಗಿಸಬೇಕು ಮತ್ತು ಮಿತವಾಗಿ ಬಳಸಬೇಕು, ನೀರಿನ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳು ಪೋಷಕರಲ್ಲಿ ಅರಿವು ಉಂಟು ಮಾಡಬೇಕು ಮತ್ತು ಸಂಘ ಸಂಸ್ಥೆಗಳ ನೆರವು ಶಿಕ್ಷಣ ಸಂಸ್ಥೆಗಳ ಕಡೆ ಧಾವಿಸಿ ಬಂದಾಗ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಗತಿ ಕಾಣಲು ನೆರವಾಗುವುದು ಎಂದರು. 

ವಾಸವಿ ಕ್ಲಬ್‌ನ ನಿರ್ದೇಶಕ ನಾಗರಾಜ್‌, ಮಾಜಿ ಉಪ ರಾಜ್ಯಪಾಲ ಬಿ.ಎಸ್‌. ಗೋವಿಂ¨ ‌ರಾಜ್‌, ಕಾರ್ಯದರ್ಶಿ ಓಂ ಪ್ರಕಾಶ್‌,
ಖಜಾಂಚಿ ಕೃಷ್ಣಯ್ಯಶೆಟ್ಟಿ, ಡಿ.ಕೆ. ನಾಗರಾಜ್‌, ವಾಸವಿ ವನಿತಾ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರಾದ ಗೋವಿಂದಪ್ಪ, ಮುನಿಯಪ್ಪ,
ವಿಜಯಕುಮಾರ್‌ ಡಾಂಗಿ, ಮಂಜುಳ, ಮಮತ, ಕವಿ ಶರಣಪ್ಪ ಗಬ್ಬೂರ್‌, ಅಡುಗೆ ಸಿಬ್ಬಂದಿ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಶಾಲೆಯ ವಾತಾವರಣ ದಲ್ಲಿ ಸಸಿ ನೆಡುವುದು, ಅಕ್ಕಿ ವಿತರಣೆ, ತಟ್ಟೆ ಲೋಟ, ಗೋಡೆ ಗಡಿಯಾರ, ನೀರಿನ μಲ್ಟರ್‌,
ಬಟ್ಟೆ, ಮತ್ತಿತರ ವಸ್ತುಗಳನ್ನು ಕೊಡುಗೆಯಾಗಿ ನೀಡಲಾಯಿತು.

No comments:

Post a Comment