Tuesday, 5 July 2016

ಏಷ್ಯಾ ಮಾರುಕಟ್ಟೆಗಳ ಮಿಶ್ರವಹಿವಾಟಿನಿಂದಾಗಿ ಶೇರುಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ 33 ಪಾಯಿಂಟ್ಗಳ ಕುಸಿತ ಕಂಡಿದೆ.ಕಳೆದ ಆರು ದಿನಗಳ ವಹಿವಾಟಿನಲ್ಲಿ 881 ಪಾಯಿಂಟ್ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 33.44 ಪಾಯಿಂಟ್ಗಳ ಕುಸಿತ ಕಂಡು 27,245.32 ಅಂಕಗಳಿಗೆ ತಲುಪಿದೆ.ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 19.50 ಪಾಯಿಂಟ್ಗಳ ಇಳಿಕೆ ಕಂಡು 8,351.20 ಅಂಕಗಳಿಗೆ ತಲುಪಿದೆ.

ಪಟ್ಟಣದ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯ

ಚಾಮರಾಜನಗರ. ಜು.5-ಪಟ್ಟಣದ ಅಭಿವೃದ್ದಿಗೆ ಸಂಬಂಧಿಸಿದಂತೆ ವರ್ತಕರು ಹಾಗೂ ವ್ಯಾಪಾರಿಗಳ ಸಲಹೆಗಳನ್ನು ಪಡೆದುಕೊಳ್ಳಲು ಶಾಸಕ ಸಿ.ಪುಟ್ಟರಂಗಶೆಟ್ಟಿ ನೇತೃತ್ವದಲ್ಲಿ ಪ್ರವಾಸಿ ಮಂದಿರದಲ್ಲಿ ಸಭೆ ನಡೆಯಿತು.ಸಭೆಯಲ್ಲಿ ವರ್ತಕರು ಜನದಟ್ಟನೆ ಇರುವಂತಹ ವ್ಯಾಪಾರ ಕೇಂದ್ರಗಳಾದ ಚಿಕ್ಕಂಗಡಿ ಬೀದಿ,ದೊಡ್ಡಂಗಡಿಬೀದಿ,ಹಾಗೂ ಹಳೇ ಮಾರ್ಕೆಟ್ ರಸ್ತೆಗಳಲ್ಲಿ ಅಪೂರ್ಣವಾಗಿರುವ ಯುಜಿಡಿ ಕಾಮಗಾರಿ ಪೂರ್ಣಗೊಳಿಸಿ ಶೀಘ್ರವಾಗಿ ರಸ್ತೆಗುಂಡಿಗಳನ್ನು ಮುಚ್ಚಿಸಬೇಕು,ಹಾಗೂ

ಬಾಂಗ್ಲಾಗೆ 9 ಬಿಲಿಯನ್ ಡಾಲರ್ ಸಾಲ ನೀಡಲು ಚೀನಾ ಚಿಂತನೆ

 ಬೀಜಿಂಗ್: ಭಾರತದ ಗಡಿ ಪ್ರದೇಶದಲ್ಲಿ ರೈಲು ಮಾರ್ಗ ನಿರ್ಮಾಣ ಸೇರಿದಂತೆ ಬಾಂಗ್ಲಾದೇಶದಲ್ಲಿ ಒಟ್ಟು 6 ರೈಲು ಯೋಜನೆಗಳಿಗಾಗಿ ಕಡಿಮೆ ಬಡ್ಡಿ ದರದಲ್ಲಿ 9 ಬಿಲಿಯನ್ ಡಾಲರ್ (ಸುಮಾರು 60 ಸಾವಿರ ಕೋಟಿ ರೂ.) ಸಾಲ ನೀಡಲು ಚೀನಾ ಚಿಂತಿಸುತ್ತಿದೆ ಎಂದು ಚೀನಾ ಸರ್ಕಾರಿ ಪತ್ರಿಕೆ ವರದಿ ಮಾಡಿದೆ.ಬಾಂಗ್ಲಾದೇಶ ಚೀನಾದಿಂದ ಸಾಲವಾಗಿ ಪಡೆಯುವ ಹಣವನ್ನು ಢಾಕಾ ಮತ್ತು ಪ್ರಮುಖ ಕೈಗಾರಿಕಾ ಪ್ರದೇಶಗಳ ನಡುವೆ ರೈಲು ಮಾರ್ಗ ನಿರ್ಮಿಸಲು ಮತ್ತು ಭಾರತದ ಗಡಿಯಲ್ಲಿ

ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮ


ಕಲಬುರಗಿ,ಜು.5-ವಿಜ್ಞಾನ ಮನುಷ್ಯನ ನಾಗರೀಕತೆ ಹೆಚ್ಚಿಸಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಆರ್.ನಿರಂಜನ್ ಹೇಳಿದರು.ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿಂದು ಹಮ್ಮಿಕೊಂಡಿದ್ದ ಪದವಿಪೂರ್ವ

ಸುನೀಲ್‌ ಬೋಸ್‌ ಕೋರ್ಟ್‌ಗೆ ಗೈರು

ಮೈಸೂರು: ಮರಳು ಅಕ್ರಮ ಸಾಗಣೆಗೆ ಲಂಚ ಪಡೆಯುವಂತೆ ಸರ್ಕಾರಿ ಅಧಿಕಾರಿಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ ಹಾಗೂ ಅವರ ಸ್ನೇಹಿತ ರಾಜು ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ.3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಸುನೀಲ್‌ ಬೋಸ್‌ ಪರ ವಕೀಲರು ಅರ್ಜಿ ಸಲ್ಲಿಸಿ ಖುದ್ದು ಹಾಜರಿಗೆ ಕಾಲಾವಕಾಶ ಕೋರಿದರು.ನೋಟಿಸ್‌ ಜಾರಿಯಾದ ಕುರಿ ತು ಸರಿಯಾದ

ಭಾರತ ಸೇವಾದಳದ ಮಿಲಾಪ್ ಶಿಬಿರ

ಮಂಗಳೂರು: ಭಾರತ ಸೇವಾದಳ ಮಂಗಳೂರು ತಾಲೂಕು ಸಮಿತಿಯ ವತಿಯಿಂದ ನಗರದ ಮಹಿಳಾ ಡಿ.ಎಡ್. ತರಭೇತಿ ಸಂಸ್ಥೆಯಲ್ಲಿ ಮಿಲಾಪ್ ಶಿಬಿರವನ್ನು ಇತ್ತೀಚೆಗೆ ನೆರವೇರಿತು.ಮಂಗಳೂರು: ಭಾರತ ಸೇವಾದಳ ಮಂಗಳೂರು ತಾಲೂಕು ಸಮಿತಿಯ ವತಿಯಿಂದ ನಗರದ ಮಹಿಳಾ ಡಿ.ಎಡ್. ತರಭೇತಿ ಸಂಸ್ಥೆಯಲ್ಲಿ ಮಿಲಾಪ್ ಶಿಬಿರವನ್ನು ಇತ್ತೀಚೆಗೆ ನೆರವೇರಿತು ಈ ಕಾರ್ಯಕ್ರಮವನ್ನು ಮಹಿಳಾ ಡಿ.ಎಡ್. ತರಭೇತಿ ಸಂಸ್ಥೆಯ ಪ್ರಾಂಶುಪಾಲರಾದ ಉಷಾರವರು ಉದ್ಘಾಟಿಸಿದರು. ಬಿ.

ಶಾಲೆಗಳಿಗೆ ಪೀಠೋಪಕರಣ ವಿತರಣೆ – ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ

 ಚಾಮರಾಜನಗರ .ಜು.5-ಜಿಲ್ಲೆಯ ಶಾಲೆಗಳಿಗೆ ಪೀಠೋಪಕರಣ ಮತ್ತು ಶಾಲಾ ಕಟ್ಟಡಕ್ಕೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅದ್ಯಕ್ಷ ಕೆ.ಪಿ.ಸದಾಶಿವಮೂರ್ತಿ ಸೂಚಿಸಿದರು.ಅವರು ಜಿ.ಪಂ. ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮತಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿರುವ ಎಲ್ಲಾ ಶಾಲೆಗಳಿಗೂ ಶಿಕ್ಷಕರು ಹಾಗೂ ಪೀಠೋಪಕರಣ,