Tuesday, 5 July 2016

ಆರೋಗ್ಯ ಕಾರ್ಯಕ್ರಮಕ್ಕೆ ಚಾಲನೆ

ಗಂಗಾವತಿ,ಜು.5: ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ವೈದ್ಯರ ದಿನಾಚರಣೆ ಮತ್ತು ದಿ.ಮುದಿಯಪ್ಪರೆಡ್ಡಿ ಸ್ಮರಣಾರ್ಥ ಲಯನ್ಸ್‍ಕ್ಲಬ್ ಆಯೋಜಿಸಿದ್ದ ಒಂದು ತಿಂಗಳ ಕಾಲದ ಆರೋಗ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಎ.ಜೀಡಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಆರೋಗ್ಯ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು. ಜಂತುತೋಗ ನಿವಾರಣೆಗಾಗಿ 600 ವಿದ್ಯಾರ್ಥಿಗಳಿಗೆ ಔಷಧ
ವಿತರಣೆ ಮಾಡಲಾಯಿತು. ಈ ಸಮಯದಲ್ಲಿ ಹಿರಿಯರಾದ ಗಂಗಾವತಿಯ ಡಾ.ಮಾಧವಶೆಟ್ಟಿ ಮತ್ತು ಕನಕಗಿರಿಯ ಡಾ.ದೊಡ್ಡಯ್ಯ ಅರವಟಗಿಮಠ ಅವರುಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಲಯನ್ಸ್‍ಕ್ಲಬ್ ಅಧ್ಯಕ್ಷ ಡಾ.ಜಂಬುನಾಥಗೌಡ, ಕಾರ್ಯದರ್ಶಿ ಡಾ.ಶಿವಕುಮಾರ ಮಾಪಾ, ಖಜಾಂಚಿ ಸುರೇಶ ಸಿಂಗನಾಳ, ಕ್ಲಬ್‍ನ ಹಿರಿಯ ಸದಸ್ಯ ರಾಮರಾವ್, ಸರೋಜಮ್ಮ ಎಂ.ರೆಡ್ಡಿ, ಗ್ಯಾನ ಅಧ್ಯಕ್ಷ ಎನ್.ಆರ್.ಸೂರ್ಯನಾರಾಯಣ, ಆಯುಷ್ ಅಧ್ಯಕ್ಷ ಬಸವರಾಜ ಅಯೋಧ್ಯಾ, ಡಾ.ವಿಜಯಗೌಡರ್, ಡಾ.ಅಮರೇಶಪಾಟೀಲ್ ಮತ್ತಿತರರು ಭಾಗವಹಿಸಿದ್ದರು.

No comments:

Post a Comment