Tuesday, 5 July 2016

ವೃದ್ಧಾಶ್ರಮದಲ್ಲಿ ಆರೋಗ್ಯ ತಪಾಸಣೆ

ಬೆಂಗಳೂರು: ವೈದ್ಯರ ದಿನಾಚರಣೆ ಪ್ರಯುಕ್ತ ಆಯುಷ್‌ ಇಲಾಖೆ ವೈದ್ಯರು ನಗರದ ವೃದ್ಧಾಶ್ರಮವೊಂದರಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯ ಕ್ರಮ ನಡೆಸಿದರು. ಬೆಂಗಳೂರು ನಗರ ಜಿಲ್ಲೆ ಆಯುಷ್‌ ಇಲಾಖೆ ಮತ್ತು ಬೆಂಗಳೂರು ನಗರ ಘಟಕದ ರಾಜ್ಯ ಸರ್ಕಾರಿ ಆಯುಷ್‌ ವೈದ್ಯಾಧಿಕಾರಿಗಳ ಸಂಘ ಜಂಟಿಯಾಗಿಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರದ ದೇವರಚಿಕ್ಕನಹಳ್ಳಿಯಲ್ಲಿರುವ ಲಯನ್ಸ್‌ ಏರ್‌ಪೋರ್ಟ್‌ ವೃದ್ಧಾಶ್ರಮ ದಲ್ಲಿ ಸುಮಾರು 60 ವೃದ್ಧರಿಗೆ ಆರೋಗ್ಯ ತಪಾಸಣೆ
ಮಾಡಲಾಯಿತು. ರಕ್ತದೊ ತ್ತಡ, ಮಧುಮೇಹ ತಪಾಸಣೆ ಸೇರಿದಂತೆ ಸಮಸ್ಯೆಗಳ ಬಗ್ಗೆ ಆಲಿಸಲಾಯಿತು.
ಆಯುಷ್‌ ವೈದ್ಯಾಧಿಕಾರಿಗಳಾದ ಡಾ. ಖಾಲೀದ್‌ ಜವಾನ್‌, ಡಾ. ಲಲಿತಾ, ಡಾ. ಸುಜಾತಾ, ಡಾ. ಕೋಮಲಾ ಮತ್ತು ಡಾ. ಎ.ಎಂ. ಸತ್ಯಮೂರ್ತಿ
ಹೆಬ್ಟಾರ್‌ ನೇತೃತ್ವದ ತಂಡವು ವೃದ್ಧರಿಗೆ ಔಷಧ ನೀಡಿ ಉಪಚರಿಸಿತು. ಇದೇ ವೇಳೆ ಆಶ್ರಮದ ಸಂಸ್ಥಾಪಕ ಟ್ರಸ್ಟಿ ಕೆ.ವಿ. ಬಾಬುರೆಡ್ಡಿ, ವ್ಯವಸ್ಥಾಪಕ ಶಿವಸ್ವಾಮಿ ಉಪಸ್ಥಿತರಿದ್ದರು. 

 ಅಂಚೆಪತ್ರದಲ್ಲಿ ಔಷಧ ಚೀಟಿ: ಈ ಮಧ್ಯೆ, ಕರ್ನಾಟಕ ರಾಜ್ಯ ವೈದ್ಯರ ಕೈ ಬರಹ ಸುಧಾರಕರ ಸಂಘದ ಅಧ್ಯಕ್ಷ ಡಾ.ಶಾಂತಗಿರಿ ಮಲ್ಲಪ್ಪ ಅಂಚೆಪತ್ರದ ಅಭಿಯಾನ ಪ್ರಾರಂಭಿಸಿದ್ದಾರೆ. ಒಂದು ತಿಂಗಳ ಕಾಲ ಔಷಧವನ್ನು ಔಷಧ ಚೀಟಿಗಳ ಬದಲು ಅಂಚೆಪತ್ರದ ಮೂಲಕ ಬರೆದುಕೊಡಲಿದ್ದಾರೆ. ಇತ್ತೀಚೆಗೆ ದಿನದಲ್ಲಿ ಅಂಚೆಚೀಟಿ ಮರೆಯಾಗುತ್ತಿರುವುದರಿಂದ ಈ ಅಭಿಯಾನ ಆರಂಭಿಸಿದ್ದಾರೆ.

No comments:

Post a Comment