Tuesday, 5 July 2016

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ- 2 ಟ್ರೇಲರ್ ಬಿಡುಗಡೆ

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ- 2  ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಕಿಚ್ಚ ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾತರದಲ್ಲಿದ್ದಾರೆ. ಕೋಟಿಗೊಬ್ಬ- 2  ಚಿತ್ರದಲ್ಲಿ ಸುದೀಪ್ ಹಾಗು ನಿತ್ಯಾಮೇನನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,  ಕೆ ಎಸ್ ರವಿಕುಮಾರ್‌ ರವರ ನಿರ್ದೇಶನದ ಚಿತ್ರ ಇದಾಗಿದೆ.ನಿತ್ಯಾ ಮೆನನ್ ಮತ್ತು ಸುದೀಪ್ ಮೊಟ್ಟಮೊದಲ ಬಾರಿಗೆ ಈ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಮೇಕಿಂಗ್ ಸಖತ್ ರಿಚ್ ಆಗಿರೋ ಟ್ರೇಲರ್ ಈಗಾಗ್ಲೇ ಎಲ್ಲರ ಗಮನ ಸೆಳೆಯುತ್ತಿದೆ.
ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ಚಿತ್ರ ಏಕಕಾಲಕ್ಕೆ ರೆಡಿಯಾಗ್ತಿರೋ ಈ ಸಿನಿಮಾ ತಮಿಳಿನಲ್ಲಿ 'ಮುಡಿಂಜ ಇವನ ಪುಡಿ'  ಎನ್ನುವ ಟೈಟಲ್ ನಲ್ಲಿ ಚಿತ್ರ ಮಾಡಲಾಗಿದೆ. ಡಿ ಇಮಾನ್ ಸಂಗೀತ ನೀಡಿರೋ ಕೋಟಿಗೊಬ್ಬ- 2 ಬಿಗ್ ಬಜೆಟ್ ಸಿನಿಮಾವಾಗಿದೆ. ಸಿನಿಮಾ ನೋಡುವ ಕಾತರದಲ್ಲಿರುವ ಕಿಚ್ಚ ಅಭಿಮಾನಿಗಳಿಗೆ ಆದಷ್ಟು ಬೇಗ ಬಿಡುಗಡೆಯಾಗಿ ಸಿಹಿ ಸುದ್ದಿಯನ್ನು ನೀಡಲಿ.

No comments:

Post a Comment