Tuesday, 5 July 2016

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕರೆ

ಚನ್ನಗಿರಿ, ಜು. ೪- ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮಾದಿಗ ಸಮಾಜದವರು ಮುಂದಾಗಬೇಕೆಂದು ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಕರೆ ನೀಡಿದರು.ಅವರು ಪಟ್ಟಣದ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಮಾದಿಗ ನೌಕರರ ಪರಿವರ್ತನ ಬಳಗದಿಂದ ಆಯೋಜನೆ ಮಾಡಲಾಗಿದ್ದ ನಿನಗೆ ನೀನೇ ಬೆಳಕು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಸಮಾಜದ ಬಗ್ಗೆ ಹೇಳಿಕೊಳ್ಳಲು ಮುಜುಗರ
ಪಡುವಂತಹ ಮನಸ್ಥಿತಿಯನ್ನು ಹೋಗಲಾಡಿಸುವ ಉದ್ದೇಶದಿಂದ ಹಾಗೂ ಮಾದಿಗ ಸಮಾಜದಲ್ಲಿ ಪರಿವರ್ತನೆ ಮೂಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವಂತರನ್ನಾಗಿ ಮಾಡಬೇಕು. ಅಷ್ಟೇ ಅಲ್ಲದೇ ಆರ್ಥಿಕವಾಗಿ, ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕಿದೆ. ಸಮಾಜ ಅಭಿವೃದ್ದಿಯಾಗಬೇಕಾದರೆ ಮೊದಲು ವ್ಯಸನಮುಕ್ತವಾಗಬೇಕು. ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಹಾಗೂ ದುಶ್ಚಟಗಳನ್ನು ಬಿಡಬೇಕು ಎಂದು ಹೇಳಿದರು.
ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ಶೋಷಿತ ಸಮುದಾಯಗಳ ನೆರವಿಗೆ ಸರ್ಕಾರ ಸದಾ ಸಿದ್ದವಿದೆ. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ತಿಳಿಸಿದರು. ಜಿ.ಪಂ. ಸದಸ್ಯ ಎಂ. ಯೋಗೀಶ್ ಮಾತನಾಡಿ, ಸಮಾಜದಲ್ಲಿ ಅಸ್ಪೃಶ್ಯರೆಂಬ ಭಾವನೆ ಇದೆ. ಮೊದಲು ಇದು ತೊಲಗಬೇಕು. ಸಮಾಜ ಸಂಘಟಿತವಾಗಬೇಕು. ಚುನಾವಣಾ ಸಂದರ್ಭದಲ್ಲಿ ಹಣ ಪಡೆಯದೇ ಗ್ರಾಮಕ್ಕೆ ಶಾಲೆ, ಬಸ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇಂತಹ ಬೇಡಿಕೆಗಳನ್ನು ಪೂರೈಸಿಕೊಳ್ಳಬೇಕು. ಮತಗಳನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೊದಿಗೆರೆ ರಮೇಶ್ ಸಮಾಜದ ಅಭಿವೃದ್ದಿಗಾಗಿ ಕೆಲವು ಸೂಕ್ತ ಮಾಹಿತಿಯನ್ನು ನೀಡಿದರು. ಅಧ್ಯಕ್ಷ ಹನುಮಂತಪ್ಪ, ಜಿಲ್ಲಾ ವ್ಯವಸ್ಥಾಪಕ ಗಂಗಪ್ಪ, ಸಿಂಡಿಕೇಟ್ ಸದಸ್ಯರಾದ ವಿಶ್ವನಾಥ್, ಜಿ.ಪಂ. ಸದಸ್ಯರಾದ ಶಿವಪ್ಪ, ತೇಜಸ್ವಿ ಪಟೇಲ್, ಎಂ.ಕೆ. ನಾಗಪ್ಪ, ರುದ್ರಪ್ಪ, ಮಾದಿಗ ಸಮಾಜದ ಅಧ್ಯಕ್ಷ ಬಿ. ಮಂಜುನಾಥ್, ಅಹಿಂದ ಅಧ್ಯಕ್ಷ ಎ.ಸಿ. ಚಂದ್ರು, ಗ್ರಾ.ಪಂ. ಸದಸ್ಯ ಮೂರ್ತಿ ಹೆಚ್.ಎನ್., ಪ್ರಸನ್ನ, ಎಂ. ನಾಗರಾಜ್, ಕಗತೂರ ಮಲ್ಲೇಶಪ್ಪ, ಮಮತ ಮಲ್ಲೇಶಪ್ಪ ಸಿ.ವೆಂಕಟೇಶ್ , ಹನುಮಂತಪ್ಪ, ಬಸವರಾಜ್ ಎಸ್., ರವಿ ಹೆಚ್., ಎನ್. ಹನುಮಂತಪ್ಪ, ತಿಪ್ಪೇಸ್ವಾಮಿ, ಆರ್. ಕಲ್ಲಪ್ಪ, ಪ್ರಭಾಕರ್, ದ.ಸ.ಸಂ. ಮಂಜುನಾಥ ಬಳಗದ ಸದಸ್ಯರು ಇನ್ನು ಅನೇಕ ಸಮಾಜದ ಮುಖಂಡರುಗಳಿದ್ದರು.

No comments:

Post a Comment