ಉಜಿರೆ: ಜನಸಂಖ್ಯೆ ನಿಯಂತ್ರಣ, ಕೃಷಿ ಅಭಿವೃದ್ಧಿಯ ಕಡೆಗಣನೆ, ಪ್ರಾಥಮಿಕ ಶಿಕ್ಷಣ ಹಾಗೂ ಸಮರ್ಪಕ ಕಾನೂನು ವ್ಯವಸ್ಥೆಯ ಕೊರತೆ ದೇಶದ ಪ್ರಮುಖ ಸಮಸ್ಯೆಗಳಾಗಿದ್ದು, ಭಾರತೀಯ ಪರಂಪ ರೆಗೆ ಅನುಗುಣವಾದ ಆರ್ಥಿಕ ನೀತಿ ಯನ್ನು ರೂಪಿಸಬೇಕು. ಸರ್ಕಾರದ ಆಡ ಳಿತ ಯಂತ್ರ ಹಳಿ ತಪ್ಪುತ್ತಿದೆ.ಮಹಾತ್ಮ ಗಾಂಧಿ ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದು ಅವರ ಗ್ರಾಮ ರಾಜ್ಯದ ಮೂಲಕ ರಾಮರಾಜ್ಯ ನಿರ್ಮಾಣದ ಕನಸನ್ನು ನನಸಾಗಿ ಮಾಡಿದಾಗ ಮಾತ್ರ ನಿರೀಕ್ಷಿತ ಪ್ರಗತಿ ಸಾಧ್ಯ ಎಂದು
ಉಜಿರೆಯ ಎಸ್. ಡಿ.ಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಸ್.ಎಸ್.ಐತಾಳ್ ಹೇಳಿದರು.ಬೆಳ್ತಂಗಡಿಯಲ್ಲಿ ಶನಿವಾರ ನಿವೃತ್ತ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ವಿಶೇಷ ಸಭೆಯಲ್ಲಿ ಅವರು ಭಾರತದ ಆರ್ಥಿಕ ಸ್ಥಿತಿಗತಿ ಬಗ್ಗೆ ಮಾತನಾಡಿದರು.
ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಉನ್ನತ ಶಿಕ್ಷಣ ಪಡೆದ ಪ್ರತಿಭಾವಂತ ಯುವಜನ ತೆಯಿಂದ ದೇಶಕ್ಕೆ ಉಜ್ವಲ ಭವಿಷ್ಯವಿದೆ ಹಾಗೂ ನಿರೀಕ್ಷಿತ ಪ್ರಗತಿಯಾಗುತ್ತದೆ ಎಂದರು.
ಹಿರಿಯ ವಕೀಲ ಜೆ.ಕೆ. ಪೌಲ್ ಮಾತ ನಾಡಿ, ಸಮಾಜದ ಸುವ್ಯವಸ್ಥೆಗೆ ಕಾನೂ ನಿನ ಅರಿವು ಅಗತ್ಯ. ವಿವಾಹ ವಿಚ್ಛೇದನ, ಲೈಂಗಿಕ ದೌರ್ಜನ್ಯ ಮೊದಲಾದ ಪ್ರಕರ ಣಗಳಲ್ಲಿ ಕಾನೂನಿನ ಉಪಯೋಗಕ್ಕಿಂತ ದುರುಪಯೋಗವಾಗುವುದೇ ಜಾಸ್ತಿ. ಹೆಚ್ಚಿನ ಪ್ರಕರಣಗಳಲ್ಲಿ ಸಾಕ್ಷಿಯ ಕೊರತೆ ಯಿಂದ ನ್ಯಾಯಾಲಯದಲ್ಲಿ ಪ್ರಕರಣ ಗಳು ಖುಲಾಸೆಗೊಳ್ಳುತ್ತವೆ. ಬದಲಾದ ಸಮಾಜಕ್ಕೆ ತಕ್ಕಂತೆ ಚಿಂತನ - ಮಂಥನ ದೊಂದಿಗೆ ಕಾನೂನುಗಳ ತಿದ್ದುಪಡಿಯಾ ಗಬೇಕು. ನ್ಯಾಯಾಲಯಗಳಲ್ಲಿ ಮಂದ ಗತಿಯ ಬದಲು ತೀವ್ರಗತಿಯಲ್ಲಿ ಪ್ರಕರಣ ಗಳು ಇತ್ಯರ್ಥವಾಗಬೇಕು ಎಂದರು.
ನಿವೃತ್ತ ಖಜಾನಾಧಿಕಾರಿ ಶಂಭು ಶರ್ಮ ರಚಿಸಿದ ಪುಸ್ತಕವನ್ನು ಪ್ರೊ. ನಾ' ಉಜಿರೆ ಬಿಡುಗಡೆಗೊಳಿಸಿದರು.
No comments:
Post a Comment