ಬೆಳಗಾವಿ:4 ಜಿಲ್ಲೆಯ ಹಿರಿಮೆಗೆ ಪಾತ್ರವಾಗಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಶಿವಾನಂದ ಹೊಸಮನಿ ಅವರು ವಿವಿಯಲ್ಲಿ ಬಡ ಹಾಗೂ ಶೋಷಿತ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಮುಂದಾಗಿರುವುದು ಕಲಿಯಬೇಕೆಬುವರಿಗೆ ಹೊಸ ಚಿಗುರು ನೀಡುತ್ತಿರುವುದು ಹೆಮ್ಮಯ ಸಂಗತಿಯಾಗಿದೆ.ಈ ಹಿಂದೆ ಬೆಳಗಾವಿಯಲ್ಲಿ ವಿವಿ ಇಲ್ಲದಿದರುವುದರಿಂದ ಈ ಭಾಗದ ಬಹುತೇಕ ವಿದ್ಯಾರ್ಥಿಗಳು ಧಾರವಾಡ ವಿವಿಯಲ್ಲಿ ವ್ಯಾಸಂಗ ಮಾಡುವ ಪರಿಸ್ಥಿತಿ ಎದುರಾಗಿತ್ತು. ಹಲವು ಕನ್ನಡಪರ ಹಾಗೂ
ಮಠಾಧೀಶರ ಹೋರಾಟದಿಂದ ನಗರದ ಹೊರವಲಯದ 10ಕಿ,ಮೀ ಭೂತ್ರಾಮನಟ್ಟಿಯಲ್ಲಿ ವೀರ ಮಹಿಳೆ ಚನ್ನಮ್ಮನ ಹೆಸರಿನಲ್ಲಿ ಸ್ಥಾಪನೆ ಮಾಡಲಾಯಿತು. ಅಂದಿನಿಂದ ಬೆಳಗಾವಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿತ್ತು. ಅಲ್ಲದೆ ಬಾಗಲಕೋಟೆ, ವಿಜಯಪುರ ಜಿಲ್ಲೆಯ ವಿದ್ಯಾರ್ಥಿಗಳಿಗೂ ರಾಣಿಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಸಧ್ಯ ರಾಣಿಚನ್ನಮ್ಮ ವಿವಿಯ ಕುಲಪತಿ ಶಿವಾನಂದ ಹೊಸಮನಿ ಅವರು ಶೋಷಿತ ಮಕ್ಕಳು, ಬಡಮಕ್ಕಳು ಹಾಗೂ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಮಕ್ಕಳಿಗೆ ಪ್ರತ್ಯೇಕ ಶೈಕ್ಷಣಿಕ ಸೌಲಭ್ಯ ನೀಡಲು ಮುಂದಾಗಿರುವುದು ಬಡ ಸಾಮಾನ್ಯ ಮಕ್ಕಳಲ್ಲಿ ಹರ್ಷ ತಂದಿದೆ. ಇದರಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಯಲದ ಮಾದರಿಯನ್ನು ಎಲ್ಲಾ ವಿವಿಗಳಲ್ಲಿ ಅಳವಡಿಸಿದರೇ ಇದಕ್ಕೆ ಶ್ರೇಯ ಸಲ್ಲುವುದು ಕುಲಪತಿ ಶಿವಾನಂದ ಹೊಸಮನಿ ಅವರಿಗೆ.
ಕಲಿಯಲು ಬೆಟ್ಟದಷ್ಟು ಆಸೆ ಇಟ್ಟುಕೊಂಡ ಮಕ್ಕಳು ಬಡತನದ ಬೇಗೆಯಿಂದ ಅದೆಷ್ಟೋ ಮಕ್ಕಳು ಉನ್ನತ್ತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಲ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ತಂದೆಯ ಸಾಲವನ್ನು ತೀರಿಸುವ ನಿಟ್ಟಿನಲ್ಲಿ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಶೋಷಿತ ಮಕ್ಕಳಿಗೆ ವಿಶ್ವ ವಿದ್ಯಾಲಯದಲ್ಲಿ ಪ್ರತ್ಯೇಕ ಶೈಕ್ಷಣಿಕ ಮಿಸಲು ನೀಡಿರುವುದು ಹೆಮ್ಮಯ ಸಂಗತಿ.
ಕಲಪತಿ ಶಿವಾನಂದ ಹೊಸಮನಿ ಅವರು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕಲಪತಿಯಾಗಿ ಅಧಿಕಾರ ಸ್ವೀಕರಿಸಿದನಿಂದಾಗಿನಿಂದಲು ಆವರಣದಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿದೆ. ಹದಗೆಟ್ಟ ರಸ್ತೆಯನ್ನು ಸುಸಜ್ಜಿತವಾಗಿ ಡಾಂಬರೀಕರಣಗೊಳಿಸಿ ವಿದ್ಯಾರ್ಥಿಗಳು ಹಾಗೂ ಇಲ್ಲಿನ ಸಿಬ್ಬಂದಿಗಳಿಗೆ ಹೆಚ್ಚಿನ ಅನುಕೂಲಮಾಡಿಕೊಟ್ಟಿದ್ದಾರೆ. ಅಲ್ಲದೆ ವಿವಿಗೆ ಸರಕಾರಿ ಬಸ್‍ಗಳ ಸಂಚಾರವನ್ನು ಹೆಚ್ಚಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ.
ರಾಣಿಚನ್ನಮ್ಮ ವಿವಿಯ ಪ್ರತಿಯೊಂದ ಚಟುವಟಿಕೆಯಲ್ಲಿ ಕ್ರಿಯಾಶೀಲತೆಯಿಂದ ಕಾರ್ಯಮಾಡುವ ಶಿವಾನಂದ ಹೊಸಮನಿ ಅವರು ಎಲ್ಲರ ಪ್ರೀತಿಗೆ ಭಾಜನರಾಗಿದ್ದಾರೆ. ಈ ನಿಟ್ಟಿನಲ್ಲಿ ಶೋಷಿತ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಪ್ರತ್ಯೇಕ ಶೈಕ್ಷಣಿಕ ಮಿಸಲು ನೀಡಿರುವುದು ಬಡ ವಿದ್ಯಾರ್ಥಿಗಳಲ್ಲಿ ಉನ್ನತ ಶಿಕ್ಷಣ ಕಲಿಯಬೇಕೆಂಬ ಕನಸು ಸಾಕಾರ ಮಾಡಿಕೊಟ್ಟಿದ್ದಾರೆ.
No comments:
Post a Comment