ಮೆಲ್ಬೋರ್ನ್(ಜು.04): ಕಳೆದ ವರ್ಷದಲ್ಲಿ ಭಾರತೀಯ ಕ್ರಿಕೆಟ್ ತಂಡ ಕೈಗೊಂಡಿದ್ದ ಆಸ್ಪ್ರೇಲಿಯಾ ಪ್ರವಾಸದ ವೇಳೆ ಕ್ರಿಕೆಟ್ ಪಂದ್ಯಗಳ ನೇರಪ್ರಸಾರ ಹಕ್ಕುಗಳ ಮಾರಾಟದಿಂದ ಬಂದಿರುವ ಸುಮಾರು . 672 ಕೋಟಿ ಆದಾಯವನ್ನು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಜತೆಗೆ ಹಂಚಿಕೊಳ್ಳಲು, ಆಸ್ಪ್ರೇಲಿಯಾ ಕ್ರಿಕೆಟ್ (ಸಿಎ) ನಿರ್ಧರಿಸಿದೆ.ಜಾಗತಿಕ ಮಟ್ಟದಲ್ಲಿ ಕ್ರಿಕೆಟ್
ಕ್ರೀಡೆಯ ಆರ್ಥಿಕ ಹಿತಾಸಕ್ತಿಯ ರಕ್ಷಣೆಗಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಸಿಎ ತಿಳಿಸಿದೆ. ಇದನ್ನು ಅಧಿಕೃತವಾಗಿ ಪ್ರಕಟಿಸಿರುವ ಸಿಎ ಮುಖ್ಯ ಕಾರ್ಯನಿರ್ವಾಹಕ ಜೇಮ್ಸ್ ಸದರ್‌ಲ್ಯಾಂಡ್, ‘‘ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳ ನಡುವಿನ ಮಧುರ ಬಾಂಧವ್ಯ ವೃದ್ಧಿಗಾಗಿ ಆದಾಯದಲ್ಲಿ ಹಂಚಿಕೆ ಮಾಡಿಕೊಳ್ಳುತ್ತಿದ್ದೇವೆ’’ ಎಂದು ಹೇಳಿದ್ದಾರೆ.
Subscribe to:
Post Comments (Atom)
No comments:
Post a Comment