ಬೆಂಗಳೂರು, ಮೇ ೯: ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ಪೊಲೀಸರು ಡ್ರೋನ್ (ಚಾಲಕರಹಿತ ವಿಮಾನ) ಹೊಂದಿರುವ ಪಡೆ ಎನಿಸಿಕೊಂಡಿದ್ದು, ಕಳೆದ ತಿಂಗಳು ೧೨ ಡ್ರೋನ್‌ಗಳು ಇಲಾಖೆಗೆ ಸೇರ್ಪಡೆಗೊಂಡಿವೆ.ಮೊದಲ ಹಂತದ ಡ್ರೋನ್‌ಗಳನ್ನು ಈಗಾಗಲೇ ಪೊಲೀಸ್ ಪಡೆಗೆ ಸೇರ್ಪಡೆಗೊಳಿಸಲಾಗಿದ್ದು, ಕಾರ್ಯಾಚರಣೆ ಆರಂಭಗೊಂಡಿದೆ.ಡ್ರೋನ್‌ಗಳ ಕಾರ್ಯಾಚರಣೆಗೆ ೨೦ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗಿದ್ದು, ಅವರಿಗೆ ಪ್ರತ್ಯೇಕ ಸವಾಲುಗಳನ್ನು ಎದುರಿಸುವ ಬಗ್ಗೆ
Wednesday, 6 July 2016
ವಿಶ್ವವಿಖ್ಯಾತ 139 ನೇ ಪುರಿ ಜಗನ್ನಾಥ ರಥಯಾತ್ರೆ ಆರಂಭ;
ಪುರಿ (ಒಡಿಶಾ):ಇಲ್ಲಿ ವಿಶ್ವವಿಖ್ಯಾತ 12ನೇ ಶತಮಾನದ ಜಗನ್ನಾಥ ಮಂದಿರದಲ್ಲಿ 139 ನೇ ಜಗನ್ನಾಥ ರಥಯಾತ್ರೆ ಬುಧವಾರದಿಂದ ಆರಂಭವಾಯಿತು.ವಿಡಿಯೋ ನೋಡಿ ಬಲಭದ್ರ ಮತ್ತು ಸುಭದ್ರಾ ದೇವಿಯ ವಾರ್ಷಿಕ ಯಾತ್ರೆಯ ಮುಕ್ತಾಯದ ಅಂಗವಾಗಿ ಗುಡಿಚಾ ದೇವಸ್ಥಾನದಲ್ಲಿ ವಿಜ್ರಂಭಣೆಯಿಂದ ರಥಯಾತ್ರೆ ನಡೆಯುತ್ತಿದೆ. ವಿಶ್ವಖ್ಯಾತಿಯ ರಥಯಾತ್ರೆಯನ್ನು ಕಣ್ ತುಂಬಿಕೊಳ್ಳಲು ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಪುರಿಗೆ ಆಗಮಿಸಿದ್ದಾರೆ. 9 ದಿನಗಳ ಕಾಲ
ಹಂಪಿ ವಿ.ವಿ.ಯಲ್ಲಿ ಸಂಶೋಧನಾ ಕಮ್ಮಟ
ಹೊಸಪೇಟೆ: ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಯು.ಜಿ.ಸಿ. ಪ್ರಾಯೋಜಿತ ಮಹಿಳಾ ಅಧ್ಯಯನ ಕೇಂದ್ರ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಸೋಷಿಯಲ್ ಸೈನ್ಸ್ ರಿಸರ್ಚ್ ಪ್ರಾಯೋಜಕತ್ವದ ಹತ್ತು ದಿನಗಳ ಸಮಾಜ ವಿಜ್ಞಾನಗಳ ಸಂಶೋಧನಾ ವಿಧಾನದ ಕಮ್ಮಟ ಏರ್ಪಡಿಸಲಾಗಿತ್ತು.ಕಮ್ಮಟದಲ್ಲಿ ಪ್ರೊ. ವೈ.ಜೆ. ರಾಜೇಂದ್ರ ಅವರು ಕಾರ್ಯಾತ್ಮಕ ಸಂಶೋಧನೆ ಕುರಿತು ಹಾಗೂ ನಮ್ಮ ದೇಶದಲ್ಲಿ ಸಂವಿಧಾನಗಳ ಮಾಹಿತಿ ನೀಡಿದರು.ಸಮಾಜ ವಿಜ್ಞಾನ ಸಂಶೋಧನೆ ಯಲ್ಲಿ
ಸರಕಾರಿ ಶಾಲೆ ನೆಲಸಮಕ್ಕೆ ಮುಂದಾದ ಸೇನೆ: ಪ್ರತಿಭಟನೆ
ಬೆಂಗಳೂರು: ಶತಮಾನ ಪೂರೈಸಿರುವ ಜೆ ಸಿ ನಗರದ ನಾಲ್ಕು ಸರಕಾರಿ ಶಾಲೆಗಳು ಹಾಗೂ ಪಿಯು ಕಾಲೇಜು ಕಟ್ಟಡ ನೆಮಸಮಗೊಳಿಸಲು ಸೇನಾ ಸಿಬ್ಬಂದಿ ಮುಂದಾದ ಪರಿಣಾಮ, ಇಲ್ಲಿ ವ್ಯಾಸಂಗ ಮಾಡುತ್ತಿರುವ 1200 ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.ಸೇನಾ ಸಿಬ್ಬಂದಿ ಯಾವಾಗ ಶಾಲೆ ನೆಲಸಮಗೊಳಿಸುವರೋ ಎಂಬ ಆತಂಕದಲ್ಲೇ ವಿದ್ಯಾರ್ಥಿಗಳು
ಅಂಚೆ ಮೂಲಕ ಮನೆಗೇ ಬರಲಿದೆ ಗಂಗಾಜಲ! ಕೇಂದ್ರದ ಹೊಸ ಯೋಜನೆ
ನವದೆಹಲಿ: ಮನೆ ಮನೆಗೆ ಪತ್ರಗಳನ್ನು ಬಟವಾಡೆ ಮಾಡುವ ಪೋಸ್ಟ್‌ಮ್ಯಾನ್‌ಗಳು ಇನ್ನು ಮುಂದೆ ಗಂಗಾಜಲವನ್ನು ಮನೆಬಾಗಿಲಿಗೆ ಪೂರೈಕೆ ಮಾಡಲಿದ್ದಾರೆ. ಇ- ಕಾಮರ್ಸ್ ವೇದಿಕೆಯನ್ನು ಬಳಸಿಕೊಂಡು ಹರಿದ್ವಾರ, ಹೃಷಿಕೇಶಗಳಿಂದ ಜನರಿಗೆ ಗಂಗಾಜಲವನ್ನು ಪೂರೈಕೆ ಮಾಡಲು ಅಂಚೆ ಇಲಾಖೆಗೆ ಸೂಚಿಸಿದ್ದೇನೆ ಎಂದು ಮಾಹಿತಿ ಮತ್ತು ಸಂವಹನ ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ. ಅಂಚೆ ಇಲಾಖೆ ದೇಶದೆಲ್ಲೆಡೆ ತನ್ನ ಜಾಲವನ್ನು ಹೊಂದಿದೆ. ಮೊಬೈಲ್ ಫೋನ್
251 ರೂ. ಮೊಬೈಲ್ ಹೀಗಿದೆ ನೋಡಿ...
ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ಜಗತ್ತಿನ ಅತಿ ಅಗ್ಗದ ಸ್ಮಾರ್ಟ್ ಫೋನ್ ಫ್ರೀಡಂ 251, ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗಿದೆ. ಜು.7ರಿಂದ ಗ್ರಾಹಕರಿಗೆ ದೊರಕಲಿದ್ದು, ಈ ಹಿನ್ನೆಲೆಯಲ್ಲಿ ಮೊಬೈಲ್‌ನ ಮೊದಲ ಚಿತ್ರಗಳು ಬಿಡುಗಡೆಯಾಗಿವೆ.
ಕಂಪನಿ ಪ್ರಕಾರ, ಫೋನ್ 1 ಜಿಬಿ ರ್ಯಾಮ್, 8 ಜಿಬ ಸ್ಟೋರೇಜ್, 4 ಇಂಚಿನ ಡಿಸ್ಪೆ$Éà, 3.2 ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮೆರಾ ಹೊಂದಿದೆ. ಇದರಲ್ಲಿ 1450 ಎಮ್‌ಎಎಚ್ ಬ್ಯಾಟರಿ ಇದ್ದು, ಆ್ಯಂಡ್ರಾಯಿಡ್ ಕಿಟ್‌ಕ್ಯಾಟ್ ಆಪರೇಟಿಂಗ್ ಸಿಸ್ಟಂ ಹೊಂದಿದೆ. ಮೇಲ್ಮೋಟಕ್ಕೆ ಮೊಬೈಲ್ ಎಲ್ಲಾ ವರ್ಗದವನ್ನು ಸೆಳೆವಂತಿದ್ದು, ಮೊಬೈಲ್‌ನ ಕಪ್ಪು ಮತ್ತು ಬಿಳಿ ಬಣ್ಣದ ಫೋಟೋ ಬಿಡುಗಡೆ ಮಾಡಲಾಗಿದೆ. ಗ್ರಾಹಕರಿಗೆ ಪೂರೈಸಲು 2 ಲಕ್ಷ ಮೊಬೈಲ್‌ಗಳನ್ನು ರಿಂಗಿಂಗ್ ಬೆಲ್ಸ್ ತಯಾರು ಮಾಡಿಟ್ಟುಕೊಂಡಿದೆ. ಲಕ್ಕಿ ಡ್ರಾ ಮೂಲಕ ಪ್ರತಿ ರಾಜ್ಯದಲ್ಲಿ 10 ಸಾವಿರ ಮೊಬೈಲ್ ಡೆಲಿವರಿಗೆ ಗ್ರಾಹಕರನ್ನು ಆಯ್ಕೆ ಮಾಡಲು ಉದ್ದೇಶಿಲಾಗಿದೆ.
ಧಾರವಾಡ ಐಐಟಿ: 31ಕ್ಕೆ ಮೋದಿಯಿಂದ ಉದ್ಘಾಟನೆ?
ಧಾರವಾಡ: ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಆರಂಭಗೊಂಡಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಜು.31ರಂದು ಉದ್ಘಾಟನೆಗೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಧಾರವಾಡ ಐಐಟಿಗೆ ಮೊದಲ ವರ್ಷ 5 ವಿದ್ಯಾರ್ಥಿನಿಯರು ಸೇರಿ 120 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.ಜತೆಗೆ ಮೊದಲ ವರ್ಷದ ಬ್ಯಾಚ್‌ನಲ್ಲಿ ಧಾರವಾಡದ 5 ವಿದ್ಯಾರ್ಥಿಗಳಿಗೂ ತಮ್ಮೂರಿನ ಐಐಟಿಯಲ್ಲೇ
Subscribe to:
Posts (Atom)