Sunday 17 July 2016

ಇಂಡಸ್ ನೀರಿನ ಒಪ್ಪಂದ, ಹೇಗ್ ಕೋರ್ಟ್​ಗೆ ಪಾಕ್ ಮೇಲ್ಮನವಿ


  ನವದೆಹಲಿ: ಕೃಷ್ಣಗಂಗಾ ಮತ್ತು ರಟ್ಲೆ ಜಲವಿದ್ಯುತ್ ಯೋಜನೆಗಳ ಅನುಷ್ಠಾನ ಸಂಬಂಧ ಪಾಕಿಸ್ತಾನದೊಂದಿಗೆ ನಡೆದ 2 ದಿನಗಳ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಹೇಗ್​ನ ಶಾಶ್ವತ ಮಧ್ಯಸ್ಥಿಕೆಯ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.ಕೃಷ್ಣ ಗಂಗಾ ಮತ್ತು ರಟ್ಲೆ ಜಲವಿದ್ಯುತ್ ಯೋಜನೆಗಳ ಸಂಬಂಧ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಭಾರತದೊಂದಿಗೆ ಕಳೆದ ಎರಡೂವರೆ ವರ್ಷಗಳಿಂದ ನಡೆಸಿದ ಪ್ರಯತ್ನ ವಿಫಲವಾಗಿದೆ.
ಈಗ ಪ್ರಕರಣವನ್ನು ಹೇಗ್​ನ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಬೇಕಾಗಬಹುದು ಎಂದು ಪಾಕಿಸ್ತಾನದ ನೀರಾವರಿ ಮತ್ತು ವಿದ್ಯುತ್ ಸಚಿವ ಖವಾಜಾ ಆಸಿಫ್ ಟ್ವಿಟ್ ಮಾಡಿದ್ದಾರೆ.

ಇಂಡಸ್ ನದಿ ನೀರಿನ್ನು ಬಳಕೆ ಮಾಡಿಕೊಳ್ಳುವ ಸಂಬಂಧ ಉಭಯ ದೇಶಗಳು ಮಾತುಕತೆ ನಡೆಸಬೇಕು. ಇಂಡಸ್ ನೀರಿನ ಒಪ್ಪಂದದಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಪರಸ್ಪರ ಸ್ನೇಹದಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಪಾಕಿಸ್ತಾನ ಸಮಸ್ಯೆ ಬಗೆಹರಿಸಲು ಭಾರತದೊಂದಿಗೆ ಮಾತುಕತೆ ನಡೆಸಲಿದೆ ಎಂಬ ವಿಶ್ವಾಸವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

ಇಂಡಸ್ ನೀರಿನ ಸಮಿತಿಗೆ ತನ್ನ ಕೆಲಸ ಮಾಡಲು ಪಾಕ್ ಅನುವು ಮಾಡಿಕೊಡಬೇಕು. ಪಾಕಿಸ್ತಾನ ತೆಗೆದುಕೊಂಡಿರುವ ನಿರ್ಧಾರದಿಂದ ಸಮಿತಿಗೆ ಪ್ರಾಮುಖ್ಯತೆ ಇಲ್ಲದಂತಾಗುತ್ತದೆ. ತಟಸ್ಥ ಸಮಿತಿಯ ಸಲಹೆ ಪಡೆಯಲೂ ಸಹ ಭಾರತ ಸಿದ್ಧವಿದೆ ಎಂದು ಭಾರತ ಮಾತುಕತೆಯಲ್ಲಿ ತಿಳಿಸಿದೆ.

ಇಂಡಸ್ ನೀರಿನ ಬಳಕೆ ಮತ್ತು ಜಲವಿದ್ಯುತ್ ಯೋಜನೆಗಳ ಕುರಿತು ಈ ಮೊದಲೂ ಸಹ ಪಾಕಿಸ್ತಾನ 2013ರಲ್ಲಿ ಹೇಗ್ ಕೋರ್ಟ್​ಗೆ ಪಾಕ್ ಮೇಲ್ಮನವಿ ಸಲ್ಲಿಸಿತ್ತು. ಆದರೆ ಕೋರ್ಟ್ ಭಾರತಕ್ಕೆ ಯೋಜನೆ ಮುಂದುವರೆಸಲು ಅನುಮತಿ ನೀಡಿತ್ತು.

2 comments:

  1. This comment has been removed by the author.

    ReplyDelete
  2. I really enjoyed your blog Thanks for sharing such an informative post.
    SarkariNaukriFinder is a Job portal to find Top Sarkari Walk-in Interview, Latest Govt Job Notification, Latest Govt Job Openings, Central Government Jobs 2020, State Govt Jobs 2020, Railway Jobs 2020.

    ReplyDelete