Sunday 17 July 2016

ಜಪಾನ್​ನಲ್ಲಿ 5 ಪಾಯಿಂಟ್ ತೀವ್ರತೆಯ ಭೂಕಂಪ


ಟೋಕಿಯೊ: ಜಪಾನ್​ನ ಇಬಾರಕಿ ಪ್ರದೇಶದಲ್ಲಿ ಭಾನುವಾರ ರಿಕ್ಟರ್ ಮಾಪಕದಲ್ಲಿ 5 ಪಾಯಿಂಟ್ ತೀವ್ರತೆಯ ಭೂಕಂಪ ಸಂಭವಿಸಿದೆ.ಜಪಾನ್ ಹವಾಮಾನ ಸಂಸ್ಥೆಯ ವರದಿ ಪ್ರಕಾರ ಇಬಾರಕಿಯಲ್ಲಿ ಕೇಂದ್ರ ಬಿಂದುವನ್ನು ಹೊಂದಿದ್ದ ಭೂಕಂಪವು ಟೋಕಿಯೋದ ಈಶಾನ್ಯ ಭಾಗ ಮತ್ತು ಫೆಸಿಫಿಕ್ ಸಾಗರದ ಅಂಚಿನವರೆಗೂ ಭೂಮಿಯನ್ನು ನಡುಗಿಸಿದೆ ಎಂದು
ಮಾಧ್ಯಮಗಳು ವರದಿ ಮಾಡಿವೆ.

ಕೇಂದ್ರ ಟೋಕಿಯೋದಲ್ಲಿ ಕೂಡಾ ಭೂಮಿ ನಡುಗಿದ ಅನುಭವ ಜನರಿಗೆ ಆಯಿತು ಎಂದು ವರದಿ ತಿಳಿಸಿದೆ. ತತ್ ಕ್ಷಣಕ್ಕೆ ಸುನಾಮಿ ಭೀತಿ ಇಲ್ಲ ಎಂದೂವರದಿ ಹೇಳಿದೆ.

2 comments: